Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಈವರೆಗಿನ 16 ಐಸಿಸಿ ನಾಕೌಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಸಾಧನೆ ಹೇಗಿದೆ?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ ಮೂಲಕ ಸಾಗುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನೂ ಆಗಿರುವ ರೋಹಿತ್ ಶರ್ಮಾ 2023ರ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಋತು ಹೊಂದಿದ್ದರು.

ಅದೇ ಕಳಪೆ ಫಾರ್ಮ್‌ ಅನ್ನು 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲೂ ಮುಂದುವರೆಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

WTC Final: Rohit Sharmas Record In ICC Knockouts After Failure In 1st Innings Against Australia


ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 469 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಭಾರತ 296 ರನ್‌ಗಳಿಗೆ ಸರ್ವಪತನ ಕಂಡು ಭಾರೀ ಹಿನ್ನಡೆ ಅನುಭವಿಸಿತು.

ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಭಾರತದ ಈ ನಾಲ್ಕು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಟ್ಟು 56 ರನ್‌ ಕಲೆಹಾಕಿದರು. ನಾಯಕ ರೋಹಿತ್ ಶರ್ಮಾ ಕೇವಲ 15 ರನ್ ಗಳಿಸಿದರು. ತಮ್ಮ ನಿರಂತರ ಕಳಪೆ ಪ್ರದರ್ಶನ ಮುಂದುವರೆಸಿದರು.

WTC Final: Rohit Sharmas Record In ICC Knockouts After Failure In 1st Innings Against Australia

ಐಸಿಸಿ ಫೈನಲ್ ಮತ್ತು ನಾಕೌಟ್ ಪಂದ್ಯಗಳು ಸೇರಿದಂತೆ ಪ್ರಮುಖ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಟ್ವಿಟರ್‌ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಆ ಪೈಕಿ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ರೋಹಿತ್ ಶರ್ಮ ಅವರಿಂದ ಯಾವ ರೀತಿಯ ಪ್ರದರ್ಶನ ಹೊರಬಂದಿದೆ ಎಂಬುದನ್ನು ಅವಲೋಕಿಸೋಣ.

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ:

* ಟಿ20 ವಿಶ್ವಕಪ್ 2007 ಸೆಮಿಫೈನಲ್ - ಆಸ್ಟ್ರೇಲಿಯಾ ವಿರುದ್ಧ ಅಜೇಯ 8 ರನ್

* 2007ರ ಟಿ20 ವಿಶ್ವಕಪ್‌ ಫೈನಲ್ - ಪಾಕಿಸ್ತಾನ ವಿರುದ್ಧ ಅಜೇಯ 30 ರನ್

* ಚಾಂಪಿಯನ್ಸ್ ಟ್ರೋಫಿ 2013 - ಶ್ರೀಲಂಕಾ ವಿರುದ್ಧ 33 ರನ್

* ಚಾಂಪಿಯನ್ಸ್ ಟ್ರೋಫಿ 2013 - ಇಂಗ್ಲೆಂಡ್ ವಿರುದ್ಧ 9 ರನ್

* ಟಿ20 ವಿಶ್ವಕಪ್‌ 2014 - ದಕ್ಷಿಣ ಆಫ್ರಿಕಾ ವಿರುದ್ಧ 24 ರನ್

* 2014ರ ಟಿ20 ವಿಶ್ವಕಪ್‌ - ಶ್ರೀಲಂಕಾ ವಿರುದ್ಧ 29 ರನ್

* ಏಕದಿನ ವಿಶ್ವಕಪ್ 2015 - ಬಾಂಗ್ಲಾದೇಶ ವಿರುದ್ಧ 137 ರನ್

* ಏಕದಿನ ವಿಶ್ವಕಪ್ 2015 - ಆಸ್ಟ್ರೇಲಿಯಾ ವಿರುದ್ಧ 34 ರನ್

* ಟಿ20 ವಿಶ್ವಕಪ್ 2016 - ವೆಸ್ಟ್ ಇಂಡೀಸ್ ವಿರುದ್ಧ 43 ರನ್

* 2017ರ ಚಾಂಪಿಯನ್ಸ್ ಟ್ರೋಫಿ - ಬಾಂಗ್ಲಾದೇಶ ವಿರುದ್ಧ ಅಜೇಯ 123 ರನ್

* 2017ರ ಚಾಂಪಿಯನ್ಸ್ ಟ್ರೋಫಿ - ಪಾಕಿಸ್ತಾನ ವಿರುದ್ಧ 0

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021- ನ್ಯೂಜಿಲೆಂಡ್ ವಿರುದ್ಧ 1 ರನ್

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021- ನ್ಯೂಜಿಲೆಂಡ್ ವಿರುದ್ಧ 30 ರನ್

* ಟಿ20 ವಿಶ್ವಕಪ್ 2022 - ಇಂಗ್ಲೆಂಡ್ ವಿರುದ್ಧ 27 ರನ್

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 - ಆಸ್ಟ್ರೇಲಿಯಾ ವಿರುದ್ಧ 15 ರನ್

ಈ ಮೇಲಿನ ಅಂಕಿಅಂಶಗಳನ್ನು ಗಮನಿಸಿದರೆ, ರೋಹಿತ್ ಶರ್ಮಾ ನಿಜವಾಗಿಯೂ ದೊಡ್ಡ ಪಂದ್ಯಗಳಲ್ಲಿ ಬ್ಯಾಟ್ ಮೂಲಕ ಅಬ್ಬರಿಸಲು ವಿಫಲರಾಗಿದ್ದಾರೆ ಎಂದು ತೋರಿಸುತ್ತದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಾಯಕ ರೋಹಿತ್ ಶರ್ಮಾ ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅವರಿಂದ ನಿರಾಶೆಯ ಪ್ರದರ್ಶನ ಮೂಡಿಬರುತ್ತಿದೆ.

2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದಾರೆ. ರೋಹಿತ್ ಶರ್ಮಾ ಅಬ್ಬರಿಸಿದರೆ ಭಾರತದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಲಿದೆ.

Story first published: Friday, June 9, 2023, 19:33 [IST]
Other articles published on Jun 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+