For Quick Alerts
ALLOW NOTIFICATIONS  
For Daily Alerts
 

WTC Final: ಓವಲ್‌ನಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಬ್ರಾಡ್ಮನ್, ಬಾರ್ಡರ್ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ 3ನೇ ದಿನದಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಪುಟಿದೇಳುವ ಮತ್ತು ವೀರಾವೇಶದ ಹೋರಾಟವನ್ನು ಪ್ರದರ್ಶಿಸಿತು.

2ನೇ ದಿನದಾಟದ ಅಂತ್ಯಕ್ಕೆ ಭಾರತವು 151 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೆಣಗಾಡಿತು. ಆತಂಕದಲ್ಲಿಯೇ ಮೂರನೇ ದಿನದಾಟ ಆರಂಭಿಸಿದ ಭಾರತ ದಿನದ ಮೊದಲ ಓವರ್‌ನಲ್ಲಿ ಕೆಎಸ್ ಭರತ್ ಅವರನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು.

WTC Final: Shardul Thakur Equals Don Bradman And Alan Border Record At Oval

ನಂತರ ಬಂದ ಶಾರ್ದೂಲ್ ಠಾಕೂರ್ ಅವರು ಅಜಿಂಕ್ಯ ರಹಾನೆ ಜೊತೆ ಕೈಜೋಡಿಸಿ, ಇವರಿಬ್ಬರು ಏಳನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ನೀಡಿದರು. ಈ ಜೋಡಿ ಭಾರತದ ಇನ್ನಿಂಗ್ಸ್ ಕಟ್ಟಿದರು ಮತ್ತು 6 ವಿಕೆಟ್‌ಗೆ 152 ರನ್ ಇದ್ದ ಸ್ಕೋರ್ ಬೋರ್ಡ್‌ ಅನ್ನು 7 ವಿಕೆಟ್‌ಗೆ 261 ರನ್‌ಗಳಿಗೆ ತೆಗೆದುಕೊಂಡು ಹೋದರು.

ಅಜಿಂಕ್ಯ ರಹಾನೆ 11 ರನ್‌ಗಳಿಂದ ಶತಕ ವಂಚಿತರಾದರೆ, ಶಾರ್ದೂಲ್ ಠಾಕೂರ್ 109 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಓವಲ್‌ನಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಬಾರಿಸಿದರು.

ಶಾರ್ದೂಲ್ ಠಾಕೂರ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ತಮ್ಮ ಆಯ್ಕೆಯನ್ನು ಟೀಕಿಸಿದ್ದ ಎಲ್ಲಾ ಟೀಕಾಕಾರರಿಗೆ ತಕ್ಕ ಉತ್ತರವನ್ನು ನೀಡಿದರು. ಭಾರತದ ಇನ್ನಿಂಗ್ಸ್ ಬೇಗನೆ ಅಂತ್ಯಗೊಂಡಿತು ಎಂದು ತೋರುತ್ತಿರುವಾಗ, ರಹಾನೆ ಮತ್ತು ಠಾಕೂರ್ ಜೊತೆಯಾಟ ಭಾರತ ತಂಡದ ಭರವಸೆಯನ್ನು ಜೀವಂತವಾಗಿರಿಸಲು ಸಹಾಯ ಮಾಡಿತು.

ಶಾರ್ದೂಲ್ ಠಾಕೂರ್ 46.78ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 109 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡ 51 ರನ್ ಗಳಿಸಿ ಔಟಾದರು.

ಈ ಅರ್ಧಶತಕದೊಂದಿಗೆ ಶಾರ್ದೂಲ್ ಠಾಕೂರ್ ಅವರು ಇದೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಅಜಿಂಕ್ಯ ರಹಾನೆ ಮೊದಲ ಆಟಗಾರನಾದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು.

ದಿ ಓವಲ್‌ನಲ್ಲಿ ಮೂರು ಇನ್ನಿಂಗ್ಸ್‌ಗಳನ್ನು ಆಡಿದ ಶಾರ್ದೂಲ್ ಠಾಕೂರ್ ಈ ಎಲ್ಲಾ ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಶಾರ್ದೂಲ್ ಠಾಕೂರ್ ಅವರು 8ನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಓವಲ್‌ನಲ್ಲಿ ಆಡಿದ ಎರಡು ಟೆಸ್ಟ್‌ಗಳ ಮೂರು ಇನ್ನಿಂಗ್ಸ್‌ಗಳಲ್ಲಿ 56.00 ಸರಾಸರಿಯಲ್ಲಿ 168 ರನ್ ಗಳಿಸಿದ್ದಾರೆ.

ಲಂಡನ್‌ನ ಓವಲ್‌ನ ಟೆಸ್ಟ್‌ನಲ್ಲಿ ಸತತವಾಗಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್‌ಮನ್ ಮತ್ತು ಅಲನ್ ಬಾರ್ಡರ್ ಅವರಂತಹ ಪ್ರಸಿದ್ಧ ಕ್ರಿಕೆಟಿಗರ ಸಾಲಿನಲ್ಲಿ ಸೇರಿಕೊಂಡರು.

ಡಾನ್ ಬ್ರಾಡ್‌ಮನ್ 1930 ಮತ್ತು 1934ರಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗರಾಗಿದ್ದರು. ನಂತರ ಅಲನ್ ಬಾರ್ಡರ್ 1985 ಮತ್ತು 1989ರಲ್ಲಿ ಸತತ ಶತಕಗಳನ್ನು ಗಳಿಸಿ ಅದೇ ರೀತಿಯ ಪ್ರದರ್ಶನ ಪುನರಾವರ್ತಿಸಿದ ಎರಡನೇ ಆಟಗಾರರಾಗಿದ್ದರು.

2021ರಲ್ಲಿ ಐಕಾನಿಕ್ ಓವಲ್ ಮೈದಾನದಲ್ಲಿ ಶಾರ್ದೂಲ್ ಠಾಕೂರ್ ಅವರು ಹಿಂದಿನ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 57 ಮತ್ತು 60 ರನ್ ಗಳಿಸಿದ್ದರು ಮತ್ತು ಈಗ 2023ರಲ್ಲಿ ಅದನ್ನು ಪುನರಾವರ್ತಿಸಿದ್ದಾರೆ.

Story first published: Friday, June 9, 2023, 21:56 [IST]
Other articles published on Jun 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+