Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಅದ್ಭುತ ಕ್ಯಾಚ್‌ ಮೂಲಕ ಟೇಲರ್ ಪೆವಿಲಿಯನ್‌ಗಟ್ಟಿದ ಗಿಲ್-ವಿಡಿಯೋ

WTC Final: Shubman Gill takes a amazing catch to dismiss Ross Taylor
ಸಖತ್ ಕ್ಯಾಚ್ ಹಿಡಿದು ರಾಸ್ ಟೇಲರ್ ಔಟ್ ಮಾಡಿದ ಶುಭ್ ಮನ್ ಗಿಲ್ ವಿಡಿಯೋ | Oneindia Kannada

ಸೌತಾಂಪ್ಟನ್: ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದಾರೆ. ಸೂಪರ್ ಕ್ಯಾಚ್ ಮೂಲಕ ಗಿಲ್, ಕಿವೀಸ್ ಅಪಾಯಕಾರಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಅವರನ್ನು ಪೆವಿಲಿಯನ್‌ಗಟ್ಟಿದ್ದಾರೆ.

ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರಾಸ್ ಟೇಲರ್ 11 ರನ್ ಬಾರಿಸಿ 63.1ನೇ ಓವರ್‌ನಲ್ಲಿ ಶಮಿ ಎಸೆತಕ್ಕೆ ಶುಬ್ಮನ್ ಗಿಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಟೇಲರ್ ಬ್ಯಾಟ್ ತಾಗಿದ ಚೆಂಡು ನಾನ್‌ ಸ್ಟ್ರೈಕರ್ ಭಾಗದಲ್ಲಿದ್ದ ಗಿಲ್‌ ಕೈ ಸೇರಿತ್ತು. ಡೈವ್ ಹಾರಿದ ಗಿಲ್ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದಿದ್ದರು.

WTC final: ಜೂನ್ 23ರಂದು ರಿಸರ್ವ್ ಡೇ, ಖಾತರಿಪಡಿಸಿದ ಐಸಿಸಿ

ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ, ರೋಹಿತ್ ಶರ್ಮಾ 34, ಶುಬ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರವೀಂದ್ರ ಜಡೇಜಾ 15, ಆರ್‌ ಅಶ್ವಿನ್ 22, ರಿಷಭ್ ಪಂತ್ 4, ಚೇತೇಶ್ವರ್ ಪೂಜಾರ 8 ರನ್‌ನೊಂದಿಗೆ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು.

ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲ್ಯಾಥಮ್ 30, ಡೆವಾನ್ ಕಾನ್ವೇ 54, ರಾಸ್ ಟೇಲರ್ 11, ಹೆನ್ರಿ ನಿಕೋಲ್ಸ್ 7, ಬಿಜೆ ವಾಟ್ಲಿಂಗ್ 1, ಕೇನ್ ವಿಲಿಯಮ್ಸನ್ 49, ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ 13, ಕೈಲ್ ಜೇಮಿಸನ್ 21, ಟಿಮ್ ಸೌಥೀ 30 ರನ್‌ನೊಂದಿಗೆ 99.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 249 ರನ್ ಗಳಿಸಿ 32 ರನ್ ಮುನ್ನಡೆ ಗಳಿಸಿತ್ತು. ಈಗ ಭಾರತ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

Story first published: Tuesday, June 22, 2021, 23:58 [IST]
Other articles published on Jun 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+