For Quick Alerts
ALLOW NOTIFICATIONS  
For Daily Alerts
 

WTC Final: ಕಾಮೆಂಟರಿಗೆ ಮರಳಲಿದ್ದಾರೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ವೀಕ್ಷಕ ವಿವರಣೆಕಾರನಾಗಿ ಮರಳಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಗಂಗೂಲಿ ಕಾಮೆಂಟರಿ ಹೇಳಲಿದ್ದು ಈ ಮೂಲಕ ಸುದೀರ್ಘ ಕಾಲದ ಬಳಿಕ ಈ ಜವಾಬ್ಧಾರಿಗೆ ಮರಳಿಂತಾಗುತ್ತದೆ. ಜೂನ್ 7ರಿಂದ ಆರಂಬವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಹಿಂದಿ ವೀಕ್ಷಕವಿವರಣೆ ನೀಡಲಿದ್ದಾರೆ ಗಂಗೂಲಿ.

2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಸೌರವ್ ಗಂಗೂಲಿ ವೀಕ್ಷಕವಿವರಣೆಯಿಂದ ದೂರವುಳಿಯಬೇಕಾಯಿತು. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಐಪಿಎಲ್ ಮುಕ್ತಾಯದ ಬಳಿಕ ಮತ್ತೆ ವೀಕ್ಷಕವಿವರಣೆಯಲ್ಲಿ ತೊಡಗಿಸಿಕೊಳ್ಳಳು ಸಜ್ಜಾಗಿದ್ದಾರೆ.

WTC Final: Sourav Ganguly set to join hindi commentary team for star sports

ಇನ್ನು ಸ್ಟಾರ್ ಸ್ಪೋರ್ಟ್ಸ್‌ನ ಹಿಂದಿ ವೀಕ್ಷಕವಿವರಣೆಯಲ್ಲಿ ಸೌರವ್ ಗಂಗೂಲಿ ಹೊರತುಪಡಿಸಿ ಟೀಮ್ ಇಂಡಿಯಾದ ಮತ್ತಷ್ಟು ಮಾಜಿ ಆಟಗಾರರ ವೀಕ್ಷಕವಿವರಣೆಯಿರಲಿದೆ. ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್ ಮತ್ತು ದೀಪ್‌ದಾಸ್ ಗುಪ್ತ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇಂಗ್ಲಿಷ್ ವೀಕ್ಷಕ ವಿವರಣೆಗಾರರಾಗಿ ಹರ್ಷ ಬೋಗ್ಲೆ, ದಿನೇಶ್ ಕಾರ್ತಿಕ್, ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್ ಹಾಗೂ ಜಸ್ಟಿನ್ ಲ್ಯಾಂಗರ್ ಕಾಣಿಸಿಕೊಳ್ಳಲಿದ್ದಾರೆ.

ಸೌರವ್ ಗಂಗೂಲಿ ಕೊನೆಯ ಬಾರಿಗೆ ವೀಕ್ಷಕವಿವರಣೆಗಾರರಾಗಿ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದು 2019ರ ಏಕದಿನ ವಿಶ್ವಕಪ್‌ನಲ್ಲಿ. ಅದಾದ ಬಳಿಕ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಇದೀಗ ಬಿಸಿಸಿಐ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿರುವ ಗಂಗೂಲಿ ಮತ್ತೊಮ್ಮೆ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.\

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಮಾದರಿಯ ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಜೂನ್ 7ರಿಂದ ಆರಂಭವಾಗಲಿರುವ ಈ ಫೈನಲ್ ಪಂದ್ಯ ಜೂನ್ 11ರಂದು ಅಂತ್ಯವಾಗಲಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿದ್ದು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದರೆ ಆಸ್ಟ್ರೇಲಿಯಾ ಕೂಡ ಪ್ಯಾಟ್ ಕಮ್ಮಿನ್ಸ್ ನೇತೃತ್ವದಲ್ಲಿ ಸೆಣೆಸಾಟಕ್ಕೆ ಸಿದ್ಧವಾಗುತ್ತಿದೆ.

ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್, ಇಶಾನ್ ಕಿಶನ್(ವಿಕೆಟ್ ಕೀಪರ್)

ಆಸ್ಟ್ರೇಲಿಯಾ ಸ್ಕ್ವಾಡ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಮಿಚ್ ಮಾರ್ಷ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಸ್ಟೀವ್ ಸ್ಮಿತ್ , ಡೇವಿಡ್ ವಾರ್ನರ್.

Story first published: Friday, June 2, 2023, 14:50 [IST]
Other articles published on Jun 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+