For Quick Alerts
ALLOW NOTIFICATIONS  
For Daily Alerts
 

WTC Final: ಆಸ್ಟ್ರೇಲಿಯಾ ಪರ 111 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವ್ ಸ್ಮಿತ್-ಟ್ರಾವಿಸ್ ಹೆಡ್ ಜೋಡಿ

ಜೂನ್ 7ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ ಉತ್ತಮ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದ ವೇಳೆಗೆ 8 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಾ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ತಲಾ ಭರ್ಜರಿ ಶತಕ ಬಾರಿಸಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ನೀಡಿದರು. ಸ್ಟೀವ್ ಸ್ಮಿತ್ 268 ಎಸೆತಗಳಲ್ಲಿ 19 ಬೌಂಡರಿಗಳ ಸಮೇತ 121 ರನ್ ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಔಟಾದರು.

WTC Final: Steve Smith-Travis Head Pair Break 111-year Old Record For Australia

ಇನ್ನು 174 ಎಸೆತಗಳಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನೊಂದಿಗೆ 163 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಕಳಿಸಿದರು.

ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ತಮ್ಮ ಶತಕಗಳ ಹಾದಿಯಲ್ಲಿ ಅನೇಕ ದಾಖಲೆಗಳನ್ನು ಬರೆದರು. ಈ ಜೋಡಿಯು ತಟಸ್ಥ ಸ್ಥಳದ ಟೆಸ್ಟ್‌ ಪಂದ್ಯದಲ್ಲಿ ಯಾವುದೇ ವಿಕೆಟ್‌ಗೆ ಈ ಆಸ್ಟ್ರೇಲಿಯನ್ ಜೋಡಿ ಅತ್ಯಧಿಕ ಜೊತೆಯಾಟಕ್ಕಾಗಿ 111 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಇದಕ್ಕೂ ಮೊದಲು 1912ರಲ್ಲಿ ವಾರೆನ್ ಬಾರ್ಡ್ಸ್ಲಿ ಮತ್ತು ಚಾರ್ಲ್ಸ್ ಕೆಲ್ಲವೇ ದಕ್ಷಿಣ ಆಫ್ರಿಕಾ ವಿರುದ್ಧ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಮೂರನೇ ವಿಕೆಟ್‌ಗೆ 242 ರನ್‌ಗಳನ್ನು ಗಳಿಸಿದ್ದರು.

WTC Final: Steve Smith-Travis Head Pair Break 111-year Old Record For Australia

ಇದಕ್ಕೂ ಮೊದಲು ಮೇ 1912ರಲ್ಲಿ ಬಾರ್ಡ್ಸ್ಲೆ ಮತ್ತು ಕೆಲ್ವೇ ಜೋಡಿಯೇ ಮ್ಯಾಂಚೆಸ್ಟರ್‌ನ ತಟಸ್ಥ ಟೆಸ್ಟ್‌ ಪಂದ್ಯದಲ್ಲಿ 202 ರನ್‌ಗಳ ಜೊತೆಯಾಟ ನೀಡಿದ್ದರು.

2002ರಲ್ಲಿ ಮ್ಯಾಥ್ಯೂ ಹೇಡನ್ ಮತ್ತು ರಿಕಿ ಪಾಂಟಿಂಗ್ ಜೋಡಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ 184 ರನ್ ಗಳಿಸಿದಾಗ ಹಳೆಯ ದಾಖಲೆಯನ್ನು ಮುರಿಯಲು ಹತ್ತಿರವಾಗಿದ್ದರು.

ಅಂತಿಮವಾಗಿ, ಆಸ್ಟ್ರೇಲಿಯಾದ ದಾಖಲೆಯನ್ನು ಮುರಿಯಲು ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್‌ರಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿತು.

WTC Final: Steve Smith-Travis Head Pair Break 111-year Old Record For Australia

ಅಷ್ಟೇ ಅಲ್ಲದೆ, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್‌ ಜೋಡಿ 93 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಆಗಸ್ಟ್ 1930ರಲ್ಲಿ ಕೆಐಎ ಓವಲ್‌ನಲ್ಲಿ ಸರ್ ಡಾನ್ ಬ್ರಾಡ್‌ಮನ್ ಮತ್ತು ಆರ್ಚಿ ಜಾಕ್ಸನ್ ನಾಲ್ಕನೇ ವಿಕೆಟ್‌ಗೆ 243 ರನ್‌ಗಳನ್ನು ಬಾರಿಸಿದ್ದರು.

ಇದು ಲಂಡನ್‌ನಲ್ಲಿ ನಡೆದ ಆಸ್ಟ್ರೇಲಿಯದ ನಾಲ್ಕನೇ ವಿಕೆಟ್‌ಗಳ ಅತ್ಯಧಿಕ ಜೊತೆಯಾಟವಾಗಿದೆ. ಮೊದಲ ದಿನದ ಆಟದ ಮೂರನೇ ಸೆಷನ್‌ನಲ್ಲಿ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್‌ ಎರಡೂ ದಾಖಲೆಗಳನ್ನು ಮುರಿದರು.

ಇದೇ ವೇಳೆ ಸ್ಟೀವ್ ಸ್ಮಿತ್ ಅವರು ಭಾರತದ ವಿರುದ್ಧ ಆಸ್ಟ್ರೇಲಿಯಾದ ಅತಿ ಹೆಚ್ಚು ಟೆಸ್ಟ್ ಶತಕಗಳ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು.

ಸ್ಮಿತ್ ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿರುವ ಇಂಗ್ಲೆಂಡ್‌ನ ಜೋ ರೂಟ್ ಅವರ ದಾಖಲೆಯನ್ನು ಸರಿಗಟ್ಟಿದರು. ಕೆನ್ನಿಂಗ್ಟನ್ ಓವಲ್‌ನಲ್ಲಿ ಮೂರು ಶತಕಗಳೊಂದಿಗೆ ಸ್ಟೀವ್ ಸ್ಮಿತ್ 102.40 ಸರಾಸರಿ ರನ್ ಗಳಿಸಿದ್ದಾರೆ.

ಒಟ್ಟಾರೆಯಾಗಿ, ಕೆನ್ನಿಂಗ್ಟನ್ ಓವಲ್‌ನಲ್ಲಿ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್‌ ಬ್ಯಾಟಿಂಗ್ ಪ್ರದರ್ಶನ ನೋಡುವುದು ಆಸೀಸ್ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ ಅವರ ಕೊಡುಗೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Thursday, June 8, 2023, 19:11 [IST]
Other articles published on Jun 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+