ಭಾರತವನ್ನು ಎದುರಿಸಲು ನ್ಯೂಜಿಲೆಂಡ್‌ಗೆ ಇದಕ್ಕಿಂತ ಉತ್ತಮ ಸನ್ನಿವೇಶ ಸಾಧ್ಯವಿಲ್ಲ: ಶೇನ್ ಬಾಂಡ್

ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ವಿಚಾರವಾಗಿ ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಜಿಲೆಂಡ್ ಭಾರತವನ್ನು ಎದುರಿಸಲು ಇದಕ್ಕಿಂತ ಉತ್ತಮ ಸನ್ನಿವೇಶವನ್ನು ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
"ನಾವು ಇಂಗ್ಲೆಂಡ್‌ನಲ್ಲಿ ಭಾರತ ತಂಡವನ್ನು ಎದುರಿಸಲು ಇದಕ್ಕಿಂತ ಉತ್ತಮ ಸನ್ನಿವೇಶವನ್ನು ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ ಭಾರತ ಇಂಗ್ಲೆಂಡ್‌ನಲ್ಲಿ ಯಾವುದೇ ಅಭ್ಯಾಸ ಪಂದ್ಯವನ್ನು ಹೊಂದಿಲ್ಲ. ಆದರೆ ನಾವು ಎರಡು ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದೇವೆ. ಗೆಲುವು ಸಾಧಿಸಲು ನಾವು ಹೆಚ್ಚು ಅವಕಾಶವನ್ನು ಹೊಂದಿದ್ದೇವೆ ಎಂದು ಶೇನ್ ಬಾಂಡ್ ಹೇಳಿದ್ದಾರೆ.
"ಕಳೆದ ಕೆಲ ವಿಶ್ವಕಪ್‌ಗಳಲ್ಲಿ ನಾವು ದುರಾದೃಷ್ಟದ ಕಥೆಗಳನ್ನೇ ಹೊಂದಿದ್ದೇವೆ. ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಗೆಲ್ಲುವ ಮೂಲಕ ಹೊಸ ಕಥೆ ಬರೆಯುವ ಅವಕಾಶವನ್ನು ಹೊಂದಿದ್ದೇವೆ. ಅದು ನಮಗೆ ವಿಶೇಷವಾಗಿರಲಿದೆ. ಯಾಕೆಂದರೆ ಕ್ರಿಕೆಟ್ ನಮ್ಮ ದೇಶದ ಎರಡನೇ ಪ್ರಮುಖ ಕ್ರೀಡೆಯಾಗಿದೆ. ಈ ಸಾಧನೆಗೆ ನಾವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವುದು ಮಹತ್ವವಾಗಿದೆ" ಎಂದು ಶೇನ್ ಬಾಂಡ್ ಹೇಳಿಕೆ ನೀಡಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕಳೆದ ಎರಡು ವಿಶ್ವಕಪ್‌ಗಳಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿತ್ತು. ಅದರಲ್ಲೂ 2019ರ ವಿಶ್ವಕಪ್ ಫೈನಲ್ ಪಂದ್ಯ ಟೈ ಫಲಿತಾಂಶ ಕಂಡು ಸೂಪರ್ ಓವರ್‌ನಲ್ಲಿಯೂ ಟೈ ಆಗಿತ್ತು. ನಂತರ ಪಂದ್ಯದಲ್ಲಿ ಗಳಿಸಿದ ಬೌಂಡರಿಗಳ ಆಧಾರದಲ್ಲಿ ನ್ಯೂಜಿಲೆಂಡ್ ತಂಡ ಸೋಲು ಕಂಡಿತ್ತು.
"ನಮ್ಮದು ತುಂಬಾ ಪುಟ್ಟ ದೇಶ. ನಮ್ಮನ್ನು ಯಾವಾಗಲೂ ಡಾರ್ಕ್ ಹಾರ್ಸ್‌ಗಳು ಅಥವಾ ಅಂಡರ್‌ಡಾಗ್ ಎಂದೇ ಪರಿಗಣಿಸಲಾಗುತ್ತದೆ. ಕಳೆದ ಎರಡು ವಿಶ್ವಕಪ್‌ಗಳಲ್ಲಿ ನಮ್ಮ ತಂಡ ಫೈನಲ್‌ಗೆ ಪ್ರವೇಶಿಸಿದ್ದು ಒಂದು ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹೀಗಾಗಿ ಈ ಪಂದ್ಯದ ಗೆಲುವಿಗೆ ನಾವು ಕಾಯುತ್ತಿದ್ದೇವೆ. ಈ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿದರೆ ದೇಶದಲ್ಲಿ ಕ್ರಿಕೆಟ್‌ನಲ್ಲಿ ಅದ್ಭುತವನ್ನು ಸೃಷ್ಟಿಸಲಿದೆ" ಎಂದು ಶೇನ್ ಬಾಂಡ್ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications