WTC Final ವಿಜೇತರ ಹೆಸರಿಸಿದ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೈನ್

ಸಿಡ್ನಿ: ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೆಯುತ್ತಲೇ ಇದೆ. ಬೇರೆ ಬೇರೆ ಕ್ರಿಕೆಟಿಗರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ . ಕೆಲವರು ನ್ಯೂಜಿಲೆಂಡ್ ಗೆಲ್ಲಲಿದೆ ಎಂದರೆ, ಇನ್ನು ಕೆಲವರು ಭಾರತ ಗೆಲ್ಲಲಿದೆ ಎನ್ನುತ್ತಿದ್ದಾರೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವಿಜೇತರನ್ನು ಊಹಿಸುತ್ತಿರುವವರ ಸಾಲಿಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ, ವಿಕೆಟ್ ಕೀಪರ್ ಟಿಮ್ ಪೈನ್ ಕೂಡ ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಪಡೆ ಈ ಬಾರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಗೆಲ್ಲಲಿದೆ ಎಂದು ಪೈನ್ ಹೇಳಿದ್ದಾರೆ.
ಟೀಮ್ ಇಂಡಿಯಾ ಅದರ ಬೆಸ್ಟ್ ಆಟದ ಸ್ವಲ್ಪ ಪ್ರಮಾಣ ನೀಡಿದರೂ ಸಾಕು ಭಾರತೀಯರು ಸುಲಭವಾಗಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಗೆಲ್ಲಲಿದ್ದಾರೆ ಎಂದು ಪೈನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಭಾರತ ರೋಚಕ ರೀತಿಯಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಹೀಗಾಗಿಯೇ ಪೈನ್ ಭಾರತೀಯ ತಂಡದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಜೂನ್ 18-22ರ ವರೆಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ.
'ಭಾರತೀಯ ತಂಡ ಅವರ ಬೆಸ್ಟ್ ಪ್ರದರ್ಶನದ ಸಮೀಪದಲ್ಲಿ ಆಡಿದರೂ ಸಾಕು ಸುಲಭವಾಗಿ ಪಂದ್ಯ ಗೆದ್ದು ಟ್ರೋಫಿ ಕೊಂಡೊಯ್ಯುತ್ತಾರೆ ಎಂದು ನನಗನ್ನಿಸುತ್ತಿದೆ,' ಎಂದು Cricket.com.au. ಜೊತೆ ಪೈನ್ ಹೇಳಿಕೊಂಡಿದ್ದಾರೆ. ಪೈನ್ ನಾಯಕತ್ವದ ಆಸೀಸ್ ವಿರುದ್ಧ ಎರಡು ಸಾರಿ ಭಾರತ ತಂಡ ಟೆಸ್ಟ್ ಸರಣಿ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications