ರೋಹಿತ್‌ಗೆ ಬೌಲಿಂಗ್ ಮಾಡಿ ಬ್ಯಾಟಿಂಗ್ ಟಿಪ್ಸ್ ಕೊಟ್ಟ ವಿರಾಟ್: ವಿಡಿಯೋ

ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯುವುದರಲ್ಲಿದೆ. ಜೂನ್ 18-22ರ ವರೆಗೆ ಕುತೂಹಲಕಾರಿ ಪಂದ್ಯ ನಡೆಯಲಿದೆ. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಉತ್ತಮ ಅಭ್ಯಾಸ ನಡೆಸಿತ್ತು. ಅದರ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವಿಡಿಯೋದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ, ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಿದ್ದಾರೆ. ಪ್ರಮುಖ ಟೆಸ್ಟ್ ಪಂದ್ಯವಾಗಿದ್ದರಿಂದ ಪರಸ್ಪರ ವಿಚಾರ ವಿನಿಮಯದೊಂದಿಗೆ ಕೊಹ್ಲಿ-ವಿರಾಟ್ ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡಿರುವುದು ಕಾಣಿಸಿದೆ.
ಶುಕ್ರವಾರ ಸೌತಾಂಪ್ಟನ್‌ನಲ್ಲಿ ವಿಪರೀತ ಮಳೆಯ ಕಾರಣ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಆರಂಭ ವಿಳಂಬವಾಗಿದೆ. ಇಡೀ ದಿನ ಬಿಡದೆ ಸುರಿಯುತ್ತಿದ್ದರಿಂದ 3 PMಗೆ ಆರಂಭವಾಗಬೇಕಿದ್ದ ಪಂದ್ಯ 5 PM ವರೆಗೂ ಆರಂಭವಾಗಿರಲಿಲ್ಲ. ಟಾಸ್ ಕೂಡ ನಡೆದಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications