WTC Final 2023: ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ 5ನೇ ಬ್ಯಾಟರ್ ವಿರಾಟ್ ಕೊಹ್ಲಿ
ಭಾರತದ ಸ್ಟಾರ್ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂದೇ ಖ್ಯಾತರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಸರದಾರನಾಗಿರುವ ಕೊಹ್ಲಿ, ಇದೀಗ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶನಿವಾರ, ಜೂನ್ 10 ರಂದು ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಭಾರತೀಯ ಬ್ಯಾಟರ್‌ಗಳ ಗಣ್ಯರ ಪಟ್ಟಿಗೆ ಸೇರ್ಪಡೆಗೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2,000 ರನ್ ಗಳಿಸಿದ ಭಾರತದ 5ನೇ ಬ್ಯಾಟ್ಸ್‌ಮನ್ ಎನಿಸಿದರು.

ವಿರಾಟ್ ಕೊಹ್ಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಹೋಗುವ ಮೊದಲು ಆಸ್ಟ್ರೇಲಿಯಾ ವಿರುದ್ಧ 2000 ರನ್ ಮೈಲಿಗಲ್ಲು ಪೂರ್ಣಗೊಳಿಸಲು 21 ರನ್‌ಗಳ ಅಗತ್ಯವಿತ್ತು. ಆದರೆ, ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 14 ರನ್‌ಗಳಿಗೆ ಔಟಾಗಿದ್ದರು.
ಸದ್ಯ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ನೀಡಿರುವ ಬೃಹತ್ 444 ರನ್‌ಗಳ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು, ಭಾರತದ ಐಸಿಸಿ ಪ್ರಶಸ್ತಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಬೇಕಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೆಚ್ಚು ರನ್ ಗಳಿಸಿದ ಭಾರತೀಯರು
* ಸಚಿನ್ ತೆಂಡೂಲ್ಕರ್ - 39 ಪಂದ್ಯಗಳಲ್ಲಿ 3630 ರನ್ - 11 ಶತಕಗಳು
* ವಿವಿಎಸ್ ಲಕ್ಷ್ಮಣ್ - 29 ಪಂದ್ಯಗಳಲ್ಲಿ 2434 ರನ್ - 6 ಶತಕಗಳು
* ರಾಹುಲ್ ದ್ರಾವಿಡ್ - 32 ಪಂದ್ಯಗಳಲ್ಲಿ 2143 ರನ್ - 2 ಶತಕ
* ಚೇತೇಶ್ವರ ಪೂಜಾರ - 25 ಪಂದ್ಯಗಳಲ್ಲಿ 2074 ರನ್ - 5 ಶತಕ
* ವಿರಾಟ್ ಕೊಹ್ಲಿ - 25 ಪಂದ್ಯಗಳಲ್ಲಿ 2025 ರನ್ - 8 ಶತಕಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ತಂಡದ ವಿರುದ್ಧ 2000 ರನ್‌ಗಳಿಗಿಂತ ಹೆಚ್ಚು ರನ್ ಗಳಿಸದ ಕಾರಣ ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿಯ ನೆಚ್ಚಿನ ಶತ್ರು ತಂಡವಾಗಿದೆ.
ಇನ್ನು ಅವರ ಸಮಕಾಲೀನ ಆಟಗಾರ ಸ್ಟೀವ್ ಸ್ಮಿತ್ ಅವರು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ವಿರುದ್ಧ 2000 ರನ್‌ಗಳನ್ನು ಪೂರ್ಣಗೊಳಿಸಿದರು. ಸ್ಟೀವ್ ಸ್ಮಿತ್ 121 ರನ್ ಬಾರಿಸಿದಾಗ ಆಸ್ಟ್ರೇಲಿಯಾ ಬೃಹತ್ ಮೊತ್ತವನ್ನು ಗಳಿಸಲು ನೆರವಾದರು.
ದಶಕದ ನಂತರ ಐಸಿಸಿ ಪ್ರಶಸ್ತಿ ಗೆಲ್ಲುತ್ತಾ ಭಾರತ?
ಆಸ್ಟ್ರೇಲಿಯಾ ನೀಡಿರುವ 444 ರನ್‌ಗಳ ದೊಡ್ಡ ಮೊತ್ತದ ಚೇಸಿಂಗ್‌ನಲ್ಲಿರುವ ರೋಹಿತ್ ಶರ್ಮಾ ಬಳಗ, ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದೆ. ಐದನೇ ಹಾಗೂ ಅಂತಿಮ ದಿನದಂದು ಭಾರತದ ಗೆಲುವಿಗೆ ಇನ್ನೂ 280 ರನ್‌ಗಳ ಅವಶ್ಯಕತೆ ಇದ್ದು, ಕೈಯಲ್ಲಿ 7 ವಿಕೆಟ್ ಉಳಿದಿವೆ.
ಆಸ್ಟ್ರೇಲಿಯಾ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮಧ್ಯೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ದೃಢವಾಗಿ ನಿಂತು ಆಡುತ್ತಿದ್ದು, ಭಾರತ ಇತಿಹಾಸ ಸೃಷ್ಟಿಸಲು ಇನ್ನೂ 280 ರನ್‌ಗಳ ಅಗತ್ಯವಿದೆ. ಫೈನಲ್ ಪಂದ್ಯದ ಅಂತಿಮ ದಿನವಾದ ಭಾನುವಾರ, ಜೂನ್ 11 ಕುತೂಹಲಕಾರಿ ಕೆರಳಿಸಿದೆ.
ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅಜಿಂಕ್ಯ ರಹಾನೆ 20 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ನಾಲ್ಕನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications