Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ಶುಭ್ಮನ್ ಗಿಲ್ ವಿವಾದಾತ್ಮಕ ಔಟ್ ಬಗ್ಗೆ ರಿಕಿ ಪಾಂಟಿಂಗ್ ನೀಡಿದ ತೀರ್ಪು ಏನು?

ಶನಿವಾರ, ಜೂನ್ 10ರಂದು ನಡೆದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನ 4ನೇ ದಿನದಂದು ಶುಭ್ಮನ್ ಗಿಲ್ ಅವರನ್ನು ಔಟ್ ಎಂದು ಘೋಷಿಸುವಲ್ಲಿ ಅಂಪೈರ್‌ಗಳು ಸರಿಯಾದ ನಿರ್ಧಾರ ತೆಗೆದುಕೊಂಡರು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಶುಭ್ಮನ್ ಗಿಲ್ ಎರಡು ಬೌಂಡರಿಗಳೊಂದಿಗೆ 18 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಆಸೀಸ್‌ನ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಸ್ಲಿಪ್‌ಗೆ ಕ್ಯಾಚ್ ನೀಡಿದರು. ಈ ವೇಳೆ ಕ್ಯಾಮೆರಾನ್ ಗ್ರೀನ್ ಅವರು ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರೂ, ಚೆಂಡು ನೆಲಕ್ಕೆ ತಾಗಿದಂತೆ ಕಂಡುಬಂತು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

WTC Final: What Was Ricky Pontings Verdict On Shubman Gills Controversial Dismissal?

ಮರು ವೀಕ್ಷಣೆಯಲ್ಲಿ ಕ್ಯಾಚ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು ಮತ್ತು ಅಂತಿಮವಾಗಿ ಮೂರನೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ಅವರು ಕ್ಯಾಮೆರಾನ್ ಗ್ರೀನ್ ಪಡೆದ ಕ್ಯಾಚ್ ಕಾನೂನುಬದ್ಧವಾಗಿದೆ ಎಂದು ಪರಿಗಣಿಸಿ ಆಸ್ಟ್ರೇಲಿಯಾ ತಂಡದ ಪರ ತೀರ್ಪು ನೀಡಿದರು.

ಕ್ಯಾಚ್ ಅನ್ನು ಪೂರ್ಣಗೊಳಿಸುವಾಗ ಫೀಲ್ಡರ್ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದಾರೆಯೇ ಎಂಬ ಅಂಪೈರ್‌ಗಳ ವ್ಯಾಖ್ಯಾನದ ಮೇಲೆ, ಶುಭ್ಮನ್ ಗಿಲ್ ಅವರನ್ನು ಔಟ್ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ರಿಕಿ ಪಾಂಟಿಂಗ್ ಹೇಳಿದರು.

"ನಾನು ಗ್ರೀನ್ ಅವರು ಕ್ಯಾಚ್ ಪಡೆದಿರುವುದನ್ನು ಲೈವ್ ಆಗಿ ನೋಡಿದಾಗ, ಕ್ಯಾಚ್ ಪೂರ್ಣಗೊಳಿಸಿದ್ದಾರೆ ಎಂದು ನನಗೆ ತಿಳಿದಿತ್ತು. ಆದರೆ ನಾವು ನೋಡಿದ ಎಲ್ಲಾ ಮರು ವೀಕ್ಷಣೆಗಳಿಂದ ಅದರ ನಂತರದ ಕ್ರಮ ಏನೆಂದು ನನಗೆ ಖಚಿತವಾಗಿರಲಿಲ್ಲ," ಎಂದು ರಿಕಿ ಪಾಂಟಿಂಗ್ ಐಸಿಸಿಗೆ ತಿಳಿಸಿದರು.

WTC Final: What Was Ricky Pontings Verdict On Shubman Gills Controversial Dismissal?

"ಚೆಂಡಿನ ಒಂದು ಭಾಗವು ನೆಲವನ್ನು ಮುಟ್ಟಿದೆ ಎಂದು ನಾನು ಭಾವಿಸುತ್ತೇನೆ. ಚೆಂಡು ನೆಲಕ್ಕೆ ತಗುಲುವ ಮೊದಲು ಫೀಲ್ಡರ್ ಚೆಂಡಿನ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವವರೆಗೆ ಅದು ಔಟ್ ಆಗಿರುತ್ತದೆ ಎಂಬುದು ಅಂಪೈರ್ ವ್ಯಾಖ್ಯಾನವಾಗಿದೆ," ಎಂದು ಆಸೀಸ್ ಮಾಜಿ ನಾಯಕ ಅಭಿಪ್ರಾಯಪಟ್ಟರು.

"ಕ್ಯಾಚ್ ನಿಖರವಾಗಿ ಸಂಭವಿಸಿದೆ ಎಂದು ಅಂಪೈರ್‌ಗಳು ಔಟ್ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ನಾನು ಭಾವಿಸುತ್ತೇನೆ. ಚೆಂಡು ಬಹುಶಃ ಆರು ಅಥವಾ ಎಂಟು ಇಂಚುಗಳಷ್ಟು ನೆಲದಿಂದ ಮೇಲಿತ್ತು, ನಂತರ ನೆಲಕ್ಕೆ ತಾಗಿದೆ ಎನಿಸುತ್ತದೆ," ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಸದ್ಯ 444 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತಕ್ಕೆ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ 7.1 ಓವರ್‌ಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿದ್ದರು. ಆಗ ಗಿಲ್ ವಿವಾದಾತ್ಮಕ ತೀರ್ಪಿಗೆ ಔಟಾದರು.

WTC Final: What Was Ricky Pontings Verdict On Shubman Gills Controversial Dismissal?

"ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ ಎಂದು ನನಗೆ ಖಚಿತವಾಗಿದೆ. ಬಹುಶಃ ಆಸ್ಟ್ರೇಲಿಯಾಕ್ಕಿಂತ ಭಾರತದಲ್ಲಿ ಹೆಚ್ಚು ಚರ್ಚೆ ನಡೆಯಲಿದೆ. ಭಾರತದಲ್ಲಿ ಪ್ರತಿಯೊಬ್ಬರೂ ಇದು ಔಟ್ ಅಲ್ಲ ಎಂದು ಭಾವಿಸುತ್ತಾರೆ ಮತ್ತು ಆಸ್ಟ್ರೇಲಿಯಾದಲ್ಲಿ ಎಲ್ಲರೂ ಔಟ್ ಎಂದು ಭಾವಿಸುತ್ತಾರೆ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.

"ಔಟ್ ತೀರ್ಪನ್ನು ಮೈದಾನದಲ್ಲಿ ನೀಡಿದ್ದರೆ, ಆ ನಿರ್ಧಾರವನ್ನು ರದ್ದುಗೊಳಿಸಲು ಮೂರನೇ ಅಂಪೈರ್ ನಿರ್ಣಾಯಕ ಸಾಕ್ಷಿಗಳನ್ನು ಕಂಡು ಹಿಡಿಯಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ನಿರ್ಣಾಯಕ ಪುರಾವೆಗಳು ಇದ್ದವು ನಾನು ಭಾವಿಸುವುದಿಲ್ಲ," ಎಂದರು.

"ನಾನು ಇದನ್ನು ಹೇಳಲು ಕಾರಣವೆಂದರೆ, ಸಾಫ್ಟ್ ಸಿಗ್ನಲ್ ಇಲ್ಲದಿದ್ದರೂ, ಮೂರನೇ ಅಂಪೈರ್ ಔಟ್ ಎಂದು ಭಾವಿಸಿದರು. ಅಂತಿಮವಾಗಿ, ಬಹುಶಃ ಸರಿಯಾದ ನಿರ್ಧಾರವನ್ನು ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯಾ ನೀಡಿರುವ 444 ರನ್‌ಗಳ ದೊಡ್ಡ ಮೊತ್ತದ ಚೇಸಿಂಗ್‌ನಲ್ಲಿರುವ ರೋಹಿತ್ ಶರ್ಮಾ ಬಳಗ, ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದೆ. ಐದನೇ ಹಾಗೂ ಅಂತಿಮ ದಿನದಂದು ಭಾರತದ ಗೆಲುವಿಗೆ ಇನ್ನೂ 280 ರನ್‌ಗಳ ಅವಶ್ಯಕತೆ ಇದ್ದು, ಕೈಯಲ್ಲಿ 7 ವಿಕೆಟ್ ಉಳಿದಿವೆ.

ಆಸ್ಟ್ರೇಲಿಯಾ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮಧ್ಯೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ದೃಢವಾಗಿ ನಿಂತು ಆಡುತ್ತಿದ್ದು, ಭಾರತ ಇತಿಹಾಸ ಸೃಷ್ಟಿಸಲು ಇನ್ನೂ 280 ರನ್‌ಗಳ ಅಗತ್ಯವಿದೆ. ಫೈನಲ್ ಪಂದ್ಯದ ಅಂತಿಮ ದಿನವಾದ ಭಾನುವಾರ, ಜೂನ್ 11 ಕುತೂಹಲಕಾರಿ ಕೆರಳಿಸಿದೆ.

Story first published: Sunday, June 11, 2023, 14:47 [IST]
Other articles published on Jun 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+