For Quick Alerts
ALLOW NOTIFICATIONS  
For Daily Alerts
 

WTC Final: ಟೆಸ್ಟ್‌ನಲ್ಲೂ ಮುಂದುವರಿದ ರೋಹಿತ್ ಕಳಪೆ ಫಾರ್ಮ್; ಶುಬ್ಮನ್ ಗಿಲ್ ಕೂಡ ಅಗ್ಗಕ್ಕೆ ಔಟ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳ ಬೃಹತ್ ಮೊತ್ತ ಪೇರಿಸಿದ ಬಳಿಕ ಬೌಲಿಂಗ್ ದಾಳಿಗಿಳಿದ ಆಸಿಸ್ ಪಡೆ ಭಾರತವನ್ನು ಬೌಲಿಂಗ್‌ನಲ್ಲಿಯೂ ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಸಾಧಿಸಿದೆ. ಟಿ ವಿರಾಮಕ್ಕೂ ಮುನ್ನ ಭಾರತದ ಆರಂಭಿಕರಿಬ್ಬರನ್ನೂ ಔಟ್ ಮಾಡುವಲ್ಲಿ ಆಸಿಸ್ ಬೌಲಿಂಗ್ ವಿಭಾಗ ಯಶಸ್ವಿಯಾಗಿದೆ.

ಆಸ್ಟ್ರೇಲಿಯಾ ಪೇರಿಸಿದ ಬೃಹತ್ ಮೊತ್ತದ ಬಳಿಕ ಬ್ಯಾಟಿಂಗ್ ನಡೆಸಲು ಕಣಕ್ಕಿಳಿದ ಭಾರತದ ಆರಂಭಿಕ ಜೋಡಿ ಆರಂಭದಲ್ಲಿ ಸರಾಗವಾಗಿ ಬ್ಯಾಟಿಂಗ್ ನಡೆಸಲು ಆರಂಭಿಸಿದರು. ಇಬ್ಬರು ಆಟಗಾರರು ಕೂಡ ಉತ್ತಮ ಲಯದಲ್ಲಿದ್ದಂತೆ ಕಂಡುಬಂದರು. ಆದರೆ 6ನೇ ಓವರ್‌ನ ಅಂತ್ಯದಲ್ಲಿ ರೋಹಿತ್ ಶರ್ಮಾ 15 ರನ್‌ಗಳಿಸಿ ವಿಕೆಟ್ ಕಳೆದುಕೊಂಡು ಭಾರತಕ್ಕೆ ಮೊದಲ ಆಘಾತ ನೀಡಿದರು. ಮುಂದಿನ ಓವರ್‌ನಲ್ಲಿಯೇ ಶುಬ್ಮನ್ ಗಿಲ್ ಕೂಡ ಬೋಲಂಡ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಆಟ ಮುಗಿಸಿದರು.

WTC Fnal, Ind vs Aus: Rohit Sharma continus bad form, Shubman Gill out early

ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ಅನುಭವಿಸಿದ ಕಳಪೆ ಫಾರ್ಮ್‌ಅನ್ನು ಟೆಸ್ಟ್ ಮಾದರಿಯಲ್ಲಿಯೂ ಮುಂದುವರಿಸಿರುವುದು ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಮಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಎರಡು ಅರ್ಧ ಶತಕಗಳನ್ನು ಮಾತ್ರವೇ ದಾಖಲಿಸಿದ್ದು ಟೂರ್ನಿಯಲ್ಲಿ 16 ಪಂದ್ಯಗಳನ್ನು ಆಡಿ 332 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಆ ಕಳಪೆ ಫಾರ್ಮ್‌ಅನ್ನು ರೋಹಿತ್ ಮುಂದುವರಿಸಿದ್ದಾರೆ.

2021ರಲ್ಲಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಟೀಮ್ ಇಂಡಿಯಾ ಪರವಾಗಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ರೋಹಿತಗ್ ಹೊರಹೊಮ್ಮಿದ್ದರು. ಹೀಗಾಗಿ ಈ ಬಾರಿಯೂ ಇಂಗ್ಲೆಂಡ್‌ನಲ್ಲಿ ರೋಹಿತ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಮತ್ತೊಂದೆಡೆ ವರ್ಷದುದ್ದಕ್ಕೂ ರನ್ ಮಳೆ ಹರಿಸಿರುವ ಶುಬ್ಮನ್ ಗಿಲ್ ಐಪಿಎಲ್‌ನಲ್ಲಿಯೂ ದಾಖಲೆಯ ರನ್ ಪೇರಿಸಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಆ ನಿರೀಕ್ಷೆ ಸುಳ್ಳಾಗಿದೆ.

ಇನ್ನು ಟೀ ವಿರಾಮದ ಅಂತ್ಯಕ್ಕೆ ಟೀಮ್ ಇಂಡಿಯಾ 37 ರನ್‌ಗಳಿಸಿದ್ದು 2 ವಿಕೆಟ್ ಕಳೆದುಕೊಂಡಿದೆ. ಕ್ರೀಸ್‌ನಲ್ಲಿ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿಯಿದ್ದು ಈ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಚೇತೇಶ್ವರ್ ಪೂಜಾರ ಕಳೆದ ಎರಡು ತಿಂಗಳಿನಿಂದ ಯುಕೆಯಲ್ಲಿಯೇ ಇದ್ದು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಇನ್ನು ಕೊಹ್ಲಿ ಅದ್ಭುತ ಲಯದಲ್ಲಿದ್ದು ಎಲ್ಲಾ ಮಾದರಿಯಲ್ಲಿಉಯೂ ಉತ್ತಮ ರನ್‌ಗಳಿಸುತ್ತಿದ್ದಾರೆ. ಇನ್ನು ಈ ಹಂತದಲ್ಲಿ ಚೇತೇಶ್ವರ್ ಪೂಜಾರ ಕೂಡ ವಿಕೆಟ್ ಕಳೆದಯಕೊಂಡಿದ್ದು ಮೂರನೇ ವಿಕೆಟ್ ಕಳೆದುಕೊಂಡಿದೆ ಟೀಮ್ ಇಂಡಿಯಾ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್

Story first published: Thursday, June 8, 2023, 20:26 [IST]
Other articles published on Jun 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+