Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Points Table: ನಾಲ್ಕನೇ ಟೆಸ್ಟ್‌ನಲ್ಲಿ ಸೋಲು: ಟೀಮ್ ಇಂಡಿಯಾಗೆ ಭಾರೀ ನಷ್ಟ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡ ಭರ್ಜರಿ ಜಯ ಸಾಧಿಸಿದೆ. ಆಸೀಸ್ ಪ್ರವಾಸದಲ್ಲಿ ಮೂರನೇ ಬಾರಿಗೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಎತ್ತುವ ಕನಸಿಗೆ ಭಾರತಕ್ಕೆ ಹಿನ್ನಡೆ ಆಗಿದೆ. ಮೆಲ್ಬೋರ್ನ್‌ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿ, ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸುವ ಕನಸನ್ನು ಕಾಣುತ್ತಿದ್ದ ಭಾರತದ ಆಸೆಗೆ ಆಸೀಸ್‌ ಪೆಟ್ಟು ನೀಡಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲುತ್ತಿದ್ದಂತೆ ಅಂಕ ಪಟ್ಟಿಯಲ್ಲಿ ಮತ್ತಷ್ಟು ಕುಸಿತ ಕಂಡಿದೆ.

ಟೀಮ್ ಇಂಡಿಯಾ ಮೆಲ್ಬೋರ್ನ್‌ನಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡಿತು. ಈ ವೇಳೆ ಟೀಮ್ ಇಂಡಿಯಾದ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ಆಟಗಾರರ ಹೆಸರುಗಳ ಮೊದಲು ಬರವು ಸ್ಟಾರ್ ಎಂಬ ಪದಕ್ಕೆ ತಕ್ಕಂತೆ ಆಟವನ್ನೇ ಆಡಲಿಲ್ಲ. ಸ್ಟಾರ್‌ ಗಿರಿಯನ್ನು ಎಲ್ಲಾ ನಮ್ಮದೇ ದೇಶದಲ್ಲಿ ಬಿಟ್ಟು, ಆಸ್ಟ್ರೇಲಿಯಾಕ್ಕೆ ಹೋದಂತೆ ಕಂಡು ಬಂದಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಾ ಸಾಗಿದರು. ಹೀಗಾಗಿ ಲೈವ್‌ ಮ್ಯಾಚ್‌ ಸಹ ರಿಪ್ಲೇ ನೋಡಿದಂತೆ ಕಂಡು ಬಂದಿತು.

WTC Points Table Australia Near Final India Slip After MCG Loss

ಬಹಳ ರಕ್ಷಣಾತ್ಮಕವಾಗಿ ಆಡುತ್ತಿದ್ದ ರೋಹಿತ್‌ ಶರ್ಮಾ 40ನೇ ಎಸೆತದಲ್ಲಿ ತಾಳ್ಮೆ ಕಳೆದುಕೊಂಡರು. ಇದೇ ವೇಳೆ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಪರಿಣಾಮ ಮತ್ತೆ ಎಂದಿನಂತೆ ಬೌಲರ್‌ಗಳ ಮೇಲೆ ರನ್‌ ಕಲೆ ಹಾಕುವ ಒತ್ತಡ ಬಿದ್ದಿತು. ಪರಿಣಾಮ ಡ್ರಾ ಸಾಧಿಸಬಹುದಾಗಿದ್ದ ಪಂದ್ಯವನ್ನು ಟೀಮ್ ಇಂಡಿಯಾ ಕೈ ಚೆಲಿತು. ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ಪಂದ್ಯವನ್ನು 184 ರನ್‌ಗಳಿಂದ ಸೋತಿತು. ಈ ಸರಣಿಯಲ್ಲಿ ಎರಡು ಟೆಸ್ಟ್‌ ಗೆದ್ದಿರುವ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸುತ್ತಿದ್ದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಅಂಕ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ.

ದಕ್ಷಿಣ ಆಫ್ರಿಕಾ ಕ್ವಾಲಿಫೈ

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಫೈನಲ್‌ ಪ್ರವೇಶಿಸಿದೆ. ತವರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಎರಡು ವಿಕೆಟ್‌ಗಳಿಂದ ಗೆದ್ದ ಆಫ್ರಿಕಾ ತಂಡ, ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಆಡಿದ 11 ಪಂದ್ಯಗಳಲ್ಲಿ ಏಳು ಗೆಲುವು ದಾಖಲಿಸಿದ್ದು, ಗೆಲುವಿನ ಶೇಕಡಾವಾರು 66.67ರೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದೆ.

WTC Points Table Australia Near Final India Slip After MCG Loss

ಈ ಸರಣಿ ಆರಂಭವಾಗುವ ಮೊದಲು ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಈಗ ಸರಣಿಯಲ್ಲಿ ಎರಡನೇ ಸೋಲನ್ನು ಕಾಣುತ್ತಿದ್ದಂತೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆಸ್ಟ್ರೇಲಿಯಾ ಆಡಿದ 16 ಪಂದ್ಯಗಳಲ್ಲಿ 10 ಜಯ ಸಾಧಿಸಿದ್ದು, ಗೆಲುವಿನ ಶೇಕಡಾ ವಾರು 61.46 ಆಗಿದೆ. ಇನ್ನು ಟೀಮ್ ಇಂಡಿಯಾ 18 ಪಂದ್ಯಗಳಲ್ಲಿ 7ನೇ ಸೋಲು ಕಂಡಿದ್ದು, 52.78 ಗೆಲುವಿನ ಸರಾಸರಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.

Story first published: Monday, December 30, 2024, 14:39 [IST]
Other articles published on Dec 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+