WTC Points Table: ಮ್ಯಾಂಚೆಸ್ಟರ್ ಟೆಸ್ಟ್ ಡ್ರಾ ಆಗುತ್ತಲೇ ಅಂಕ ಪಟ್ಟಿಯಲ್ಲಿ ಬದಲಾವಣೆ
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಸೋಲುವ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಡ್ರಾ ಸಾಧಿಸಿದೆ. ಸುಮಾರು 143 ಓವರ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 4 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಅಂಕವನ್ನು ಹಂಚಿಕೊಳ್ಳುವಲ್ಲಿ ಸಫಲವಾಗಿದೆ. ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇದು ಎರಡನೇ ಡ್ರಾ ಆಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ಪಡೆ ನ್ಯೂಜಿಲೆಂಡ್ ವಿರುದ್ಧ ಡ್ರಾ ಸಾಧಿಸಿತ್ತು. ಈಗ ಟೀಮ್ ಇಂಡಿಯಾ ವಿರುದ್ಧ ಡ್ರಾ ಸಾಧಿಸಿದೆ.
ಭಾನುವಾರ ಟೀಮ್ ಇಂಡಿಯಾ ಮೈದಾನಕ್ಕೆ ಇಳಿದಾಗ 2 ವಿಕೆಟ್‌ಗೆ 174 ರನ್‌ಗಳು ಆಗಿದ್ದವು. ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಕನಸಿಷ್ಠ 90 ಓವರ್‌ಗಳನ್ನು ಎದುರಿಸುವ ಅವಶ್ಯಕತೆ ಇತ್ತು. ಈ ಸವಾಲನ್ನು ಟೀಮ್ ಇಂಡಿಯಾ ಬ್ಯಾಟರ್‌ಗಳು ಅಮೋಘವಾಗಿ ಮೆಟ್ಟಿನಿಂತಿದ್ದಾರೆ. ಆರಂಭದಲ್ಲಿ ಬಿದ್ದ ಎರಡ ವಿಕೆಟ್‌ಗಳ ಹೊರತಾಗಿಯೂ, ಟೀಮ್ ಇಂಡಿಯಾ ಪುಟಿದೆದ್ದ ರೀತಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೊನೆಯ ದಿನದಾಟದಲ್ಲಿ ರಾಹುಲ್ (90) ಶನಿವಾರದ ಮೊತ್ತಕ್ಕೆ ಕೇವಲ 3 ರನ್ ಸಿಡಿಸಿ ಔಟ್ ಆದಾಗ, ಏನ್ ಆಗುತ್ತದೆ ಎಂಬ ಲೆಕ್ಕಾಚಾರ ಎಲ್ಲರ ತಲೆಯಲ್ಲೂ ಇತ್ತು. ಆದರೆ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪರಿಣಾಮ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಆಸೆಯನ್ನು ಹೊಂದಿತ್ತು. ಆದರೆ ಈ ಪ್ಲ್ಯಾನ್ ಎಲ್ಲ ಉಲ್ಟಾ ಆಗಿದೆ. ಟೀಮ್ ಇಂಡಿಯಾ ಸಹ ಈ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಅಂಕಗಳನ್ನು ಹಂಚಿಕೊಂಡಿದೆ. ನಾಲ್ಕನೇ ಟೆಸ್ಟ್ ಡ್ರಾ ಬಳಿಕ ಬೆನ್ ಸ್ಟೊಕ್ಸ್ ಪಡೆ ಆಡಿರುವ 4 ಪಂದ್ಯಗಳಲ್ಲಿ 2 ಜಯ, 1 ಸೋಲು, 1 ಡ್ರಾ ಸಾಧಿಸಿದ್ದು, 26 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಗೆಲುವಿನ ಶೇಕಡಾ ವಾರು 54.17 ಆಗಿದೆ.
| ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿ | |||||
|---|---|---|---|---|---|
| ಸಂಖ್ಯೆ | ದೇಶ | ಪಂದ್ಯ | ಗೆಲುವು | ಸೋಲು | ಡ್ರಾ |
| 1 | ಆಸ್ಟ್ರೇಲಿಯಾ | 3 | 3 | 0 | 0 |
| 2 | ಶ್ರೀಲಂಕಾ | 2 | 1 | 0 | 1 |
| 3 | ಇಂಗ್ಲೆಂಡ್ | 4 | 2 | 1 | 1 |
| 4 | ಭಾರತ | 4 | 1 | 2 | 1 |
| 5 | ಬಾಂಗ್ಲಾದೇಶ | 2 | 0 | 1 | 1 |
| 6 | ವೆಸ್ಟ್ ಇಂಡೀಸ್ | 3 | 0 | 3 | 0 |
ಆಸ್ಟ್ರೇಲಿಯಾ ನಂಬರ್ 1
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಅಮೋಘ ಪ್ರದರ್ಶನ ನೀಡಿ, ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ 36 ಅಂಕ ಹಾಗೂ 100 ಗೆಲುವಿನ ಶೇಕಡಾ ದೊಂದಿಗೆ ಆಸೀಸ್ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಶ್ರೀಲಂಕಾ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾ ಸಾಧಿಸಿದ್ದು, 66.67ರ ಗೆಲುವಿನ ಶೇಕಡಾ ಹೊಂದಿದೆ. ಭಾರತ ಆಡಿರುವ 4 ಪಂದ್ಯಗಳಲ್ಲಿ, 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದ್ದು, 33.33 ಗೆಲುವಿನ ಶೇಕಡಾವಾರಿನೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications