ಗ್ಯಾರಿ ಹಿಂದಿಕ್ಕಿದ ರಾಮನ್ ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಕೋಚ್!

ನವದೆಹಲಿ, ಡಿಸೆಂಬರ್ 20: ಮಿಥಾಲಿರಾಜ್ ವಿವಾದಕ್ಕೆ ಸಂಬಂಧಿಸಿ ತೆರವಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರರಾದ ಡಬ್ಲ್ಯೂವಿ ರಾಮನ್ ಅವರು ಆಯ್ಕೆಯಾಗಿದ್ದಾರೆ. ಗುರುವಾರ (ಡಿಸೆಂಬರ್ 20) ಕೋಚ್ ಆಯ್ಕೆಯನ್ನು ಅಂತಿಮಗೊಳಿಸಲಾಯ್ತು. 2 ವರ್ಷಗಳ ಕಾಲ ರಾಮನ್ ಅವರು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.
ಗುರುವಾರ (ಡಿಸೆಂಬರ್ 20) ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಕರೆಯಲಾದ ಸಂದರ್ಶನದಲ್ಲಿ ವಿದೇಶಿ ಅಭ್ಯರ್ಥಿಗಳೂ ಸೇರಿ ಒಟ್ಟು 11 ಮಂದಿ ಪಾಲ್ಗೊಂಡಿದ್ದರು. ಮಾಜಿ ಆಟಗಾರ ಕಪಿಲ್‌ದೇವ್, ಆಂಶುಮಾನ್ ಗಾಯಕ್ವಾಡ್ ಮತ್ತು ಶಾಂತ ರಂಗಸ್ವಾಮಿ ಅವರಿದ್ದ ತಂಡ ಸಂದರ್ಶನವನ್ನು ನಡೆಸಿತ್ತು.
ಸಂದರ್ಶನದ ಬಳಿಕ ಪ್ರಕಟಿಸಲಾದ ಮೂವರ ಶಾರ್ಟ್ ಲಿಸ್ಟ್ ನಲ್ಲಿ ಭಾರತದ ಪುರುಷರ ತಂಡವನ್ನು ನಿಭಾಯಿಸಿದ ಅನುಭವವಿದ್ದ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕಸ್ಟರ್ಸ್, ಡಬ್ಲ್ಯೂವಿ ರಾಮನ್ ಮತ್ತು ಭಾರತದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಹೆಸರುಗಳಿದ್ದವು. ಆದರೆ ಅಂತಿಮವಾಗಿ ರಾಮನ್ ಅವರು ಕೋಚ್ ಸ್ಥಾನದ ರೇಸ್ ಗೆದ್ದಿದ್ದಾರೆ.
ಕೋಚ್ ಸ್ಥಾನಕ್ಕೆ ಅಂತಿಮ ಹೆಸರು ಪ್ರಕಟಿಸುವ ಮುನ್ನ ಗ್ಯಾರಿ ಕಸ್ಟರ್ನ್ ಅವರೇ ಆಯ್ಕೆಗೊಳ್ಳುತ್ತಾರೆ ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಗ್ಯಾರಿಗೆ ಹಿನ್ನಡೆಯಾಗಿದೆ. ಕಾರಣ ಅವರು ಈಗಾಗಲೇ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications