ನವದೆಹಲಿ, ಡಿಸೆಂಬರ್ 11: ಬಹುನಿರೀಕ್ಷಿತ WWE ಲೈವ್ ಇವೆಂಟ್ ನಲ್ಲಿ ಭಾರತೀಯ ಮೂಲದ ಮಾಜಿ ಚಾಂಪಿಯನ್ ಜಿಂದರ್ ಮಹಲ್ ಅವರು ಟ್ರಿಪಲ್ ಎಚ್ ವಿರುದ್ಧ ಸೋಲು ಕಂಡಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿದೆ.
ಭಾರತ ಪ್ರವಾಸದಲ್ಲಿರುವ WWE ಸೂಪರ್ ಸ್ಟಾರ್ ಜಿಂದರ್ ಅವರು ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಮುನ್ನಡೆ ಪಡೆದರೂ ಅಂತಿಮವಾಗಿ ಸೋಲು ಕಂಡರು.

1996ರ ನಂತರ ಇದೇ ಮೊದಲ ಬಾರಿಗೆ ಭಾರತದ ರೆಸ್ಲಿಂಗ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತದಲ್ಲಿ ಮುಂದೊಂದು ದಿನ ಕುಸ್ತಿ ಚಾಂಪಿಯನ್ ಶಿಪ್ ಗೆಲ್ಲುವುದಾಗಿ ಜಿಂದರ್ ಶಪಥ ಮಾಡಿದರು.
ರೋಮನ್ ರೈನ್ಸ್, ಡೀನ್ ಅಂಬ್ರೋಸ್, ಸೇಥ್ ರೊಲಿನ್ಸ್, ಕೇನ್, ಬ್ರಾನ್ ಸ್ಟ್ರಾಮನ್, ಅಲೆಕ್ಸಾ ಬ್ಲಿಸ್ ಮುಂತಾದವರು ಮಂಡೇ ನೈಟ್ ರಾದಲ್ಲಿ ಕಾಣಿಸಿಕೊಂಡರು.