518 ದಿನಗಳಲ್ಲಿ ಬದಲಾಯಿತು RCB ಪ್ಲೇಯರ್ ಅದೃಷ್ಟ: ಟೆಸ್ಟ್ ತಂಡ ಸೇರಿದ ಯಶ್ ದಯಾಳ್
ಬಾಂಗ್ಲಾದೇಶದ ವಿರುದ್ಧ ಭಾರತದಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಮೊದಲ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗೆ ಅವಕಾಶ ಲಭಿಸಿದೆ. 518 ದಿನಗಳ ಹಿಂದೆ ನಡೆದಿದ್ದ ಆ ಒಂದು ಓವರ್‌ನ ನೆನಪಿನಲ್ಲೇ, ಈ ಬೌಲರ್ ಕುಳಿತು ಬಿಟ್ಟಿದರೆ, ಟೀಮ್ ಇಂಡಿಯಾ ಸೇರುವ ಕನಸು ದೂರವಾಗುತ್ತಿತ್ತು. ಆದರೆ ಈ ಪ್ರತಿಭೆ ಛಲ ಬಿಡದ ತ್ರಿವಿಕ್ರಮನಂತೆ ಹಗಲಿರುಳು ಶ್ರಮಿಸಿದರ ಫಲವೇ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಲಭಿಸಿದೆ.
2023ರ ಐಪಿಎಲ್ ಬಳಿಕ ಗುಜರಾತ್ ಟೈಟನ್ಸ್ ತಂಡ ಒಬ್ಬ ವೇಗಿಯನ್ನು ಕೈ ಬಿಟ್ಟಿತು. ಈ ವೇಗಿಯನ್ನು ಆರ್‌ಸಿಬಿ ಹರಾಜಿನಲ್ಲಿ ಐದು ಕೋಟಿ ನೀಡಿ ಖರೀದಿಸಿತು. ಆಗ ಎಲ್ಲರೂ, ಆರ್‌ಸಿಬಿ ಈ ನಡೆಗೆ ಟೀಕಿಸಿದ್ದರು. ಆದರೆ, ಈ ವೇಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ಮಾಡಿ ತೋರಿಸಿ, ಡೆತ್ ಓವರ್ ಸ್ಪೇಷಲಿಸ್ಟ್ ಎನಿಸಿಕೊಂಡರು. ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ ಯುವ ವೇಗದ ಬೌಲರ್ ಯಶ್ ದಯಾಳ್..

ರಿಂಕು ಐದು ಸಿಕ್ಸರ್
ಯಶ್ ದಯಾಳ್ ಅವರ ಹೆಸರು ಕೇಳಿದ್ರೆ ಸಾಕು ಏಪ್ರಿಲ್ 9, 2023ರ ಐಪಿಎಲ್ ಪಂದ್ಯ ನೆನಪಿಗೆ ಬರುತ್ತದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಬೌಲ್ ಮಾಡಿದ ಯಶ್ ದಯಾಳ್, ಎದುರಾಳಿಗಳಿಗೆ ರನ್ ನೀಡದಂತೆ ತಡೆಯುವಲ್ಲಿ ವಿಫರಾದರು. ಕೆಕೆಆರ್ ಪರ ಐದು ಸಿಕ್ಸರ್ ಬಾರಿಸಿದ ರಿಂಕು ಸಿಂಗ್, ಈ ಪಂದ್ಯದ ಬಳಿಕ ರಾತೋ ರಾತ್ರಿ ಹೀರೋ ಆದರು. ಈ ಪಂದ್ಯದ ಬಳಿಕ ಯಶ್ ದಯಾಳ್ ಖಿನ್ನತೆ ಒಳಗಾದರು. ಆದರೆ ತಮ್ಮ ಕ್ರೀಡಾ ಉತ್ಸಾಹವನ್ನು ಮಾತ್ರ ಕಡಿಮೆ ಮಾಡಲಿಲ್ಲ.
ಆರ್‌ಸಿಬಿಗೆ ನೀಡಿದ ಸಂದರ್ಶನ ಒಂದರಲ್ಲಿ ಯಶ್ ದಯಾಳ್, ರಿಂಕು ಬಾರಿಸಿದ ಆ ಐದು ಸಿಕ್ಸರ್ ಬಗ್ಗೆ ನೆನಪಿಸಿಕೊಂಡಿದ್ದರು. ಆ ಓವರ್‌ನ ನಂತರ ನನ್ನ ಕುಟುಂಬ ತುಂಬಾ ದುಃಖಿತವಾಗಿತ್ತು. ನನ್ನ ತಾಯಿ ತುಂಬಾ ಭಾವುಕರಾದರು. ಇದಾದ ನಂತರ ಹಲವು ದಿನಗಳ ಕಾಲ ಆಹಾರ ಸೇವಿಸಿರಲಿಲ್ಲ. ಆ ಪಂದ್ಯದ ನಂತರ ನಾನು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಬೇಕಾಯಿತು. ಈ ವೇಳೆ ಖಿನ್ನತೆಗೆ ಒಳಗಾಗಿದ್ದೇನು ಎಂದು ತಿಳಿಸಿದ್ದರು.

ಆರ್‌ಸಿಬಿ ಪರ ಕಮಾಲ್ ಪ್ರದರ್ಶನ
ಐಪಿಎಲ್ 2024ರಲ್ಲಿ ಯಶ್ ದಯಾಳ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆರ್‌ಸಿಬಿ ಮ್ಯಾನೇಜ್ಮೆಂಟ್ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಆದರು. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಯಶ್ ದಯಾಳ್ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. ಕಳೆದ ಐಪಿಎಲ್‌ನಲ್ಲಿ ಇವರು 15 ವಿಕೆಟ್ ಪಡೆದರು. ಅಲ್ಲದೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ದುಲೀಪ್ ಟ್ರೋಫಿಯಲ್ಲಿ ಸಂಚಲನ
ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದಲ್ಲಿ ಯಶ್ ದಯಾಳ್ ಸ್ಥಾನ ಪಡೆದರು. ಒಟ್ಟಾರೆ ಎರಡೂ ಇನಿಂಗ್ಸ್ ಸೇರಿ ನಾಲ್ಕು ವಿಕೆಟ್ ಪಡೆದು ಅಬ್ಬರಿಸಿದರು. ಈ ವೇಳೆ ಅವರು ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್ ಮೂಲಕ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications