Yash Raj Punja: ಐಪಿಎಲ್‌ಗೆ ಮತ್ತೊಬ್ಬ ಕರ್ನಾಟಕದ ಆಟಗಾರ ಎಂಟ್ರಿ: ಯಾರು ಯಶ್ ರಾಜ್ ಪುಂಜಾ?
19ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಈ ಲೀಗ್‌ನಲ್ಲಿ 10 ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಎರಡನೇ ಬಾರಿ ಚಾಂಪಿಯನ್ ಪಟ್ಟದ ಮೇಲೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಸಹ ಕಣ್ಣು ನೆಟ್ಟಿದೆ. ಈ ನಿಟ್ಟಿನಲ್ಲಿ ಆರ್‌ಆರ್ ಭರ್ಜರಿ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ ತಂಡದ ಪರ ಯುವ ಆಟಗಾರ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಈ ಸಾಲಿಗೆ ಇನ್ನೊಬ್ಬ ಆಟಗಾರ ಸೇರಿಕೊಂಡಿದ್ದಾರೆ. ಅವರೇ ಕರ್ನಾಟಕದ 19 ವರ್ಷದ ಯುವ ಲೆಗ್ ಸ್ಪಿನ್ ಬೌಲರ್ ಯಶ್ ರಾಜ್ ಪುಂಜಾ.
ಭಾನುವಾರ ನಡೆದ ಪಂದ್ಯದಲ್ಲಿ ಯಶ್ ರಾಜ್ ಪುಂಜಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಇಳಿದರು. 6.5 ಅಡಿ ಉದ್ದದ ಯಶ್ ತಮ್ಮ ಲೆಗ್ ಸ್ಪಿನ್ ಮಾಡಲು ಮುಂದಾದರು. ಇವರು ತಮ್ಮ 17ನೇ ವಯಸ್ಸಿನಲ್ಲೇ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್ ಸೇರಿಕೊಂಡಿದ್ದರು. ಆದರೆ ಅವರು 2 ವರ್ಷ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ಭಾನುವಾರ ಇವರಿಗೆ ಆಡುವ ಅವಕಾಶವನ್ನು ನೀಡಲಾಯಿತು.

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಯಶ್ ರಾಜ್ ಅಬ್ಬರಿಸಿದರು. ಇವರು 4 ಓವರ್ ಬೌಲ್ ಮಾಡಿ 25 ರನ್ ನೀಡಿ 1 ವಿಕೆಟ್ ಪಡೆದರು. ಈ ಮೂಲಕ ತಮ್ಮ ಪದಾರ್ಪಣೆಯನ್ನು ಸ್ಮರಣೀಯವಾಗಿಸಿಕೊಂಡರು.
ಯಾರು ಯಶ್ ರಾಜ್?
ಯಶ್ ರಾಜ್ ಭಾರತದ ಪ್ರತಿಭಾವಂತ ಸ್ಪಿನ್ ಬೌಲರ್. ಇವರು ಜೂನ್ 26, 2006 ರಂದು ಅಬುಧಾಬಿಯಲ್ಲಿ ಜನಿಸಿದರು. ಇವರ ತಂದೆ ಧೀರಜ್ ಹಾಗೂ ತಾಯಿ ಶಿಲ್ಪಾ ಪುಂಜಾ. ಸದ್ಯ ಇವರು ಕರ್ನಾಟಕದ ಪರ ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಅಲ್ಲದೆ ರಾಜಸ್ಥಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಶ್ ರಾಜ್ ಅವರು ಯುಎಇನಲ್ಲಿ ಬೆಳೆದಿದ್ದು, ಅಬುಧಾಬಿಯ ಕ್ಯಾಂಬ್ರಿಡ್ಜ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರ ಸಹೋದರ ಯೋಧಿನ್ ಪುಂಜಾ ಸಲಹೆಯಂತೆ ಇವರು ಲೆಗ್ ಸ್ಪಿನ್ ಮಾಡಲು ಮುಂದಾದರು. ಇವರು 2023ರಲ್ಲಿ ಶಾಲಾಭ್ಯಾಸ ಮುಗಿದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇಲ್ಲಿ ಇವರು ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಕರ್ನಾಟಕದ ಸ್ಥಳೀಯ ಲೀಗ್‌ಗಳಲ್ಲಿ ಆಡುವ ಮೂಲಕ ರಾಜ್ಯದ ಕ್ರಿಕೆಟ್ ವಲಯಕ್ಕೆ ಪರಿಚಿತರಾದರು. ರಾಜಸ್ಥಾನ ಈ ಬಾರಿಯ ಹರಾಜಿನಲ್ಲಿ ಇವರಿಗೆ 30 ಲಕ್ಷ ನೀಡಿ ಖರೀದಿ ಮಾಡಿತು.
ಯಶ್ ಸಾಧನೆ
ಯಶ್ ರಾಜ್ 2025ರ ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕೆ ಇಳಿದರು. ಇವರು ಈ ಲೀಗ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ 23 ವಿಕೆಟ್ ಪಡೆದರು. ಈ ಮೂಲಕ ಯಶ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಐಪಿಎಲ್‌ನಲ್ಲಿ ಯಶ್ ರಾಜ್ ಮಿಂಚಿ ಭಾರತದ ಪರ ಆಡಲಿ ಎಂಬುದೇ ಅಭಿಮಾನಿಗಳ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications