ICC Mens T20 Ranking: ಟಾಪ್ 10ರಲ್ಲಿ ಸ್ಥಾನ ಪಡೆದ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್
ಜುಲೈ 17 ಬುಧವಾರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ಟಿ20 ರ್‍ಯಾಕಿಂಗ್‌ಗಳನ್ನು ಬಿಡುಗಡೆ ಮಾಡಿದೆ. ಜಿಂಬಾಬ್ವೆ ಪ್ರವಾಸದ ನಂತರ ಶುಭ್‌ಮನ್ ಗಿಲ್ ಅವರು 6 ರ್‍ಯಾಕಿಂಗ್‌ವನ್ನು ಸಾಧಿಸುವ ಮೂಲಕ ಗಮನಾರ್ಹ ಜಿಗಿತವನ್ನು ಕಂಡಿದ್ದಾರೆ.
ಇನ್ನೊಂದೆಡೆ ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಯಶಸ್ಸಿ ಜೈಸ್ವಾಲ್ 743 ಅಂಕಗಳೊಂದಿಗೆ ಐಸಿಸಿ ಪುರುಷರ ಟಿ20 ರ್‍ಯಾಕಿಂಗ್‌ನಲ್ಲಿ 4 ರಿಂದ 6ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಮೊದಲ ಸ್ಥಾನದಲ್ಲಿದ್ದಾರೆ.

ಸೂರ್ಯಕುಮಾರ್ ಯಾದವ್ 797 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ. ಈ ಮೂಲಕ ಸೂರ್ಯ ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಸರಿಗಟ್ಟಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ನಂತರದ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ಸರಣಿಯಲ್ಲಿ ಗಿಲ್ ಭಾರತದ ಹಂಗಾಮಿ ನಾಯಕರಾಗಿ ಸಂಚಲನ ಮೂಡಿಸಿದ್ದಾರೆ. ಗಿಲ್ 36 ಸ್ಥಾನಗಳನ್ನು ಜಿಗಿದು ರ್‍ಯಾಕಿಂಗ್‌ನಲ್ಲಿ 37ನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ (42) ಮತ್ತು ವಿರಾಟ್ ಕೊಹ್ಲಿ (51)ಯನ್ನು ಹಿಂದಿಕ್ಕಿ ಟಿ20 ರ್‍ಯಾಕಿಂಗ್‌ನಲ್ಲಿ ಗಿಲ್ ಭಾರತದ ನಾಲ್ಕನೇ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ.
ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ 11 ಸ್ಥಾನಗಳ ಜಿಗಿತ ಕಂಡಿದ್ದಾರೆ. ಟಿ20 ಬೌಲರ್‌ಗಳ ರ್‍ಯಾಕಿಂಗ್‌ನಲ್ಲಿ 44 ನೇ ಸ್ಥಾನವನ್ನು ತಲುಪಿದ್ದಾರೆ. ಇದೇ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಾಷಿಂಗ್ಟನ್ ಸುಂದರ್ 36 ಸ್ಥಾನ ಜಿಗಿದು 46ರಲ್ಲಿ ಸ್ಥಾನ ಪಡೆದಿದ್ದಾರೆ.
ಮುಖೇಶ್ ಕುಮಾರ್ 21 ಸ್ಥಾನ ಮೇಲೇರಿ 73ಕ್ಕೆ ತಲುಪಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ಟಿ20 ಬೌಲರ್‌ಗಳ ರ್‍ಯಾಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಅವರು ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ನಂತರ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಒಂದು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
ಐಸಿಸಿ ಟಿ20 ರ್‍ಯಾಕಿಂಗ್
- ನಂ. 1 ಬ್ಯಾಟರ್ - ಟ್ರಾವಿಸ್ ಹೆಡ್ (844 ರೇಟಿಂಗ್ ಪಾಯಿಂಟ್‌ಗಳು)
- ನಂ. 1 ಬೌಲರ್ - ಆದಿಲ್ ರಶೀದ್ (718 ರೇಟಿಂಗ್ ಪಾಯಿಂಟ್‌ಗಳು)
- ನಂ. 1 - ಆಲ್ ರೌಂಡರ್ - ವಿನಂದು ಹಸರಂಗ (222 ರೇಟಿಂಗ್ ಪಾಯಿಂಟ್‌ಗಳು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications