Yashasvi Jaiswal: 22 ರನ್‌ಗಳ ಇನಿಂಗ್ಸ್‌ನಲ್ಲಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ನಡೆಯುತ್ತಿದೆ. ಎರಡನೇ ದಿನದಂದು ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ಆರಂಭಿಸಿತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆಟವಾಡಿದರು. ಇವರು ತಾವು ಎದುರಿಸಿದ ಮೊದಲ ಓವರ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾಕ್ಕೆ ಭರ್ಜರಿ ಆರಂಭ ನೀಡಿದರು. ಇವರ ಇನಿಂಗ್ಸ್ 22 ರನ್‌ಗಳಿಗೆ ಕೊನೆ ಗೊಂಡಿತು. ಆದರೆ ಈ ಚಿಕ್ಕ ಇನಿಂಗ್ಸ್‌ನಲ್ಲಿ ಜೈಸ್ವಾಲ್ ಹಲವು ದಾಖಲೆ ಬರೆದಿದ್ದಾರೆ.
ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 4 ರನ್‌ಗಳಿಂದ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅಗ್ರೇಸಿವ್ ಬ್ಯಾಟಿಂಗ್ ನಡೆಸಿ 35 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 22 ರನ್ ಸಿಡಿಸಿದರು. ಇವರ ಈ ಅಮೋಘ ಇನಿಂಗ್ಸ್ ನೆರವಿನಿಂದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಅಭಿಯಾನ ಅಂತ್ಯವಾಗಿದೆ.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ, ಜೈಸ್ವಾಲ್ ಎಲ್ಲಾ 10 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, 391 ರನ್ ಸಿಡಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೈಸ್ವಾಲ್ ಈಗ ಆರನೇ ಸ್ಥಾನಕ್ಕೆ ತಲುಪಿದ್ದಾರೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರು
- ಮುರುಳಿ ವಿಜಯ್, 482 ರನ್
- ವೀರೇಂದ್ರ ಸೆಹ್ವಾಗ್, 464 ರನ್
- ಗೌತಮ್ ಗಂಭೀರ್, 463 ರನ್
- ಮುರುಳಿ ವಿಜಯ್, 430 ರನ್
- ಕೆಎಲ್ ರಾಹುಲ್, 393 ರನ್
- ಯಶಸ್ವಿ ಜೈಸ್ವಾಲ್, 391 ರನ್

ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಯಶಸ್ವಿ ಜೈಸ್ವಾಲ್ ವಿರುದ್ಧ ಆಸ್ಟ್ರೇಲಿಯಾ , ಸಿಡ್ನಿ, 16 ರನ್
ಮೈಕೆಲ್ ಸ್ಲೇಟರ್ ವಿರುದ್ಧ ಇಂಗ್ಲೆಂಡ್, ಬರ್ಮಿಂಗ್ಹ್ಯಾಮ್, 16 ರನ್
ಕ್ರಿಸ್ ಗೇಲ್ ವಿರುದ್ಧ ನ್ಯೂಜಿಲೆಂಡ್, ಆಂಟಿಗುವಾ, 16 ರನ್
ಓಷಾದ ಫೆರ್ನಾಂಡೋ ವಿರುದ್ಧ ಬಾಂಗ್ಲಾದೇಶ, ಮೀರ್‌ಪುರ್, 16 ರನ್
ಭಾರತದ ಟೆಸ್ಟ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ಸ್
ಯಶಸ್ವಿ ಜೈಸ್ವಾಲ್, 2025 ರಲ್ಲಿ ಸಿಡ್ನಿ, ಆಸ್ಟ್ರೇಲಿಯಾ ವಿರುದ್ಧ 16 ರನ್
ರೋಹಿತ್ ಶರ್ಮಾ, 2023 ರಲ್ಲಿ ನಾಗ್ಪುರ್, ಆಸ್ಟ್ರೇಲಿಯಾ ವಿರುದ್ಧ 13 ರನ್
ವೀರೇಂದ್ರ ಸೆಹ್ವಾಗ್, 2005ರಲ್ಲಿ ಕೋಲ್ಕತ್ತಾ, ಪಾಕಿಸ್ತಾನ ವಿರುದ್ಧ 13 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications