Yashasvi Jaiswal: ಯಶಸ್ವಿ ಜೈಸ್ವಾಲ್ ಹೆಗಲಿಗೆ ಬೇಡದ ದಾಖಲೆ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಪಿಂಕ್ ಬಾಲ್ ಟೆಸ್ಟ್ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ರಾಹುಲ್ ಇನಿಂಗ್ಸ್ ಆರಂಭಿಸಿದರು. ಆಡಿಲೇಡ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಯಶಸ್ವಿ ಜೈಸ್ವಾಲ್ ಬೇಡದ ದಾಖಲೆಗೆ ಹೆಸರು ನಮೂದಿಸಿದ್ದಾರೆ. ಈ ಬಾರಿ ಅವರು ರನ್ ಬಾರಿಸಿ ದಾಖಲೆ ಪುಟಕ್ಕೆ ಎಂಟ್ರಿ ಪಡೆದಿಲ್ಲ. ಆದರೆ ಹೇಗೆ ಎಂಟ್ರಿ ಪಡೆದಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.
ಆಡಿಲೇಡ್‌ನಲ್ಲಿ ನಡೆಯುತ್ತಿರುವ ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ. ಈ ಚೆಂಡು ಹೇಗೆ ವರ್ತನೆ ಮಾಡುತ್ತದೆ ಎಂಬುದನ್ನು ಗುರುತಿಸುವುದೇ ದೊಡ್ಡ ಸವಾಲು. ಈ ಸವಾಲು ಎದುರಿಸುವಲ್ಲಿ ಟೀಮ್ ಇಂಡಿಯಾದ ಸ್ಟಾರ್ ಯುವ ಆಟಗಾರ ವಿಫಲರಾಗಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಿತು. ಆದರೂ, ಟೀಮ್ ಇಂಡಿಯಾದ ಭರವಸೆಯ ಆಟಗಾರ ಯಶಸ್ವಿ ಎಡವಿದರು.

ಮೊದಲ ಭಾರತೀಯ ಆಟಗಾರ
ಎರಡನೇ ಟೆಸ್ಟ್ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡ ಜೈಸ್ವಾಲ್ ಜವಾಬ್ದಾರಿ ಮರೆತು ಬ್ಯಾಟ್ ಮಾಡಿದರು. ಇವರು ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಔಟ್ ಆದರು. ಈ ಮೂಲಕ ಪಿಂಕ್ ಬಾಲ್ ಟೆಸ್ಟ್‌ನ ಮೊದಲ ಎಸೆತದಲ್ಲಿ ಔಟ್ ಆದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಮೊದಲ ಎಸೆತದಲ್ಲಿ ಔಟಾದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಯನ್ನು ಟೀಮ್ ಇಂಡಿಯಾದ ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.
ಮೂರು ಆಟಗಾರರ ಪಟ್ಟಿ
ಪಿಂಕ್ ಬಾಲ್ ಟೆಸ್ಟ್ 2015ರಲ್ಲಿ ಆರಂಭವಾಯಿತು. ಆದರೆ, ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದ ಎಸೆತದಲ್ಲಿ ವಿಕೆಟ್ ಪಡೆದಿದ್ದು, 2017ರಲ್ಲಿ. ಆಗ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಡ್ಜಾ ಮೊದಲ ಎಸೆತದಲ್ಲಿ ಔಟಾದ ಮೊದಲ ಆಟಗಾರ. ಇವರನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಮೋರ್ನೆ ಮೊರ್ಕೆಲ್ ಔಟ್ ಮಾಡಿದರು.
2021ರಲ್ಲಿ ಇಂಗ್ಲೆಂಡ್‌ನ ಜಾಕ್ ಕ್ರಾಲಿಯನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದ ಕೀರ್ತಿಯನ್ನು ಭಾರತದ ಅಕ್ಷರ್ ಪಟೇಲ್ ತಮ್ಮದಾಗಿಸಿಕೊಂಡಿದ್ದಾರೆ. ಇದು ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ನಡೆದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಕಳೆದ 9 ವರ್ಷಗಳಲ್ಲಿ, ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಹೀಗೆ ಔಟ್ ಆಗಿದ್ದಾರೆ. ಆದರೆ, ಪಿಂಕ್ ಬಾಲ್ ಟೆಸ್ಟ್ ನಿಂದ ಹೆಚ್ಚು ಸಮಯ ಕಳೆದಿಲ್ಲ. ಅಲ್ಲದೆ, ಈ ಪಂದ್ಯಗಳನ್ನು ಬಹಳ ವಿರಳವಾಗಿ ಆಡಲಾಗುತ್ತದೆ, ಆದ್ದರಿಂದ ಹೆಚ್ಚಿನ ದಾಖಲೆಗಳನ್ನು ಮಾಡಲಾಗುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications