Yashasvi Jaiswal ICC Ranking: ಯಶಸ್ವಿ ಜೈಸ್ವಾಲ್ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಇತಿಹಾಸ
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ ಅಬ್ಬರಿಸಿದ್ದರು. ಬ್ಯಾಟಿಂಗ್‌ಗೆ ಅಷ್ಟೊಂದು ಅನುಕೂಲಕರ ಇಲ್ಲದ ಪಿಚ್‌ನಲ್ಲಿ ನೆಲಕ್ಕೂರಿ ನಿಂತು ಬ್ಯಾಟ್ ಮಾಡಿದ ಯಶಸ್ವಿ ಜೈಸ್ವಾಲ್ ಅಮೋಘ ಸಾಧನೆ ಮಾಡಿದ್ದರು. ಇದಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಬುಧವಾರ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಇತಿಹಾಸ ನಿರ್ಮಿಸಿದ್ದಾರೆ.
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಈ ಬಾರಿಯ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಅಲ್ಪಾವಧಿಯ ಕ್ರಿಕೆಟ್ ಜೀವನದಲ್ಲಿ ದೊಡ್ಡ ಮೈಲುಗಲ್ಲು ತಲುಪಿದ್ದಾರೆ. ಇದಲ್ಲದೆ ಭಾರತೀಯ ಬ್ಯಾಟರ್‌ಗಳು ಈ ಬಾರಿಯ ಶ್ರೇಯಾಂಕದಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಭರವಸೆಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇತಿಹಾಸ ಬರೆದಿದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ನಂಬರ್ ಒನ್ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇವರ ಬುಟ್ಟಿಯಲ್ಲಿ ಸದ್ಯ 903 ರೇಟಿಂಗ್ ಪಾಯಿಂಟ್‌ಗಳು ಇವೆ. ಯಶಸ್ವಿ ಜೈಸ್ವಾಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರು 825 ರೇಟಿಂಗ್ ಹೊಂದಿದ್ದಾರೆ. ಇದು ಅವರ ಜೀವನ ಶ್ರೇಷ್ಠ ಸಾಧನೆ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಜೈಸ್ವಾಲ್ 161 ರನ್‌ಗಳನ್ನು ಗಳಿಸಿದ್ದರು. ಇವರ ಉತ್ತಮ ಪ್ರದರ್ಶನಕ್ಕೆ ಈಗ ಫಲ ಸಿಕ್ಕಿದೆ.
ಪಂತ್‌ಗೆ ಆರನೇ ಸ್ಥಾನ
ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನ, ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ನಾಲ್ಕನೇ ಸ್ಥಾನ, ಕಿವೀಸ್ ತಂಡದ ಡೇರಿಲ್ ಮಿಚೆಲ್ ಐದನೇ ಸ್ಥಾನ ಪಡೆದಿದ್ದಾರೆ. ರಿಷಭ್ ಪಂತ್ 726 ಅಂಕಗಳೊಂದಿಗೆ ಆರನೇ ಸ್ಥಾನವನ್ನು ಹೊಂದಿದ್ದಾರೆ.

ಪರ್ತ್ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. 9 ಸ್ಥಾನ ಏರಿಕೆ ಕಂಡಿರುವ ಇವರು 13 ಸ್ಥಾನ ಏರಿಕೆ ಕಂಡಿದ್ದಾರೆ. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶುಭಮನ್ ಗಿಲ್ ಒಂದು ಸ್ಥಾನ ಕುಸಿತ ಕಂಡಿದ್ದು, 17ನೇ ಸ್ಥಾನ ತಲುಪಿದ್ದಾರೆ.
ಬುಮ್ರಾ ನಂಬರ್ 1 ಸ್ಥಾನ
ಪರ್ತ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಜಸ್ಪ್ರಿತ್ ಬುಮ್ರಾ 883 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ಆಡದೇ ಇದ್ದರೂ ಅಶ್ವಿನ್ ಒಂದು ಸ್ಥಾನ ಏರಿಕೆ ಕಂಡಿದ್ದು, ನಾಲ್ಕನೇ ಸ್ಥಾನ ತಲುಪಿದ್ದಾರೆ. ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿತ ಕಂಡಿದ್ದು, ಏಳನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications