For Quick Alerts
ALLOW NOTIFICATIONS  
For Daily Alerts
 

Yashasvi Jaiswal: ಮೆಲ್ಬೋರ್ನ್‌ ಅಂಗಳದಲ್ಲಿ ಯಶಸ್ವಿ ಜೈಸ್ವಾಲ್‌ ದೊಡ್ಡ ಇನಿಂಗ್ಸ್‌ ಕಟ್ಟಿದ್ದರೆ ದಾಖಲೆ

ಟೀಮ್‌ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಸರಣಿ ಆಡುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಭರವಸೆ ಮೂಡಿಸಿದ್ದರು. ಆದರೆ ಎರಡನೇ ಹಾಗೂ ಮೂರನೇ ಟೆಸ್ಟ್‌ನಲ್ಲಿ ಯುವ ಬ್ಯಾಟರ್‌ ಬಿಗ್‌ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ ಮೆಲ್ಬೋರ್ನ್‌ನಲ್ಲಿ ಯಶಸ್ವಿ ಬಿಗ್ ಇನಿಂಗ್ಸ್‌ ಕಟ್ಟಿದ್ದೇ ಆದಲ್ಲಿ ದೊಡ್ಡ ದಾಖಲೆ ಬರೆಯಲಿದ್ದಾರೆ. ಯಶಸ್ವಿ ಬರೆಯಲಿರುವ ದಾಖಲೆಯ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಪರ ಈ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಟಗಾರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್‌ಗೆ ಮೊದಲ ಸ್ಥಾನ. ಇವರು ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಭಾರತದಲ್ಲಿ, ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್‌ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಪ್ರಸಕ್ತ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್ ಯಶಸ್ವಿ.

Yashasvi Jaiswal Eyes Big Finish in Boxing Day Test to Challenge Joe Root s Record

ಯಾವ ದಾಖಲೆಯ ಮೇಲೆ ಕಣ್ಣು?

ಯಶಸ್ವಿ ಜೈಸ್ವಾಲ್‌ ಅವರ ಅಮೋಘ ಬ್ಯಾಟಿಂಗ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇವರು ಪ್ರಸಕ್ತ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಧಿಕ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರಿಗೆ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಸಾಧನೆ ಮಾಡುವ ಅವಕಾಶ ಒದಗಿ ಬಂದಿದೆ. ಇದು ಈ ವರ್ಷದ ಟೀಂ ಇಂಡಿಯಾದ ಕೊನೆಯ ಟೆಸ್ಟ್ ಪಂದ್ಯ. ಜೈಸ್ವಾಲ್‌ಗೆ ಖಂಡಿತವಾಗಿಯೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕುವ ಅವಕಾಶ ಇದೆ.

ಹೇಗಿದೆ ಈ ವರ್ಷದ ಸಾಧನೆ?

2024ರಲ್ಲಿ ಯಶಸ್ವಿ ಜೈಸ್ವಾಲ್‌ ಒಟ್ಟು 14 ಟೆಸ್ಟ್‌ ಪಂದ್ಯಗಳ 27 ಇನಿಂಗ್ಸ್‌ಗಳನ್ನು ಆಡಿದ್ದು 52.48ರ ಸರಾಸರಿಯಲ್ಲಿ 1312 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 7 ಅರ್ಧ ಶತಕಗಳನ್ನು ಕಂಡಿದ್ದಾರೆ. ಪ್ರಸಕ್ತ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಜೋ ರೂಟ್ ಮೊದಲ ಸ್ಥಾನದಲ್ಲಿ ನಿತಲ್ಲುತ್ತಾರೆ. ಇವರು ಆಡಿದ 17 ಟೆಸ್ಟ್‌ ಪಂದ್ಯಗಳ 31 ಇನಿಂಗ್ಸ್‌ಗಳಲ್ಲಿ 55.57 ರ ಸರಾಸರಿಯಲ್ಲಿ 1556 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 5 ಅರ್ಧಶತಕಗಳು ಸೇರಿವೆ. ಯಶಸ್ವಿ ಜೈಸ್ವಾಲ್‌ ಅವರಿಗೆ ರೂಟ್‌ ಅವರನ್ನು ಹಿಂದಿಕ್ಕಲು ಮೆಲ್ಬೋರ್ನ್‌ ಟೆಸ್ಟ್‌ ಉತ್ತಮ ವೇದಿಕೆ.

Yashasvi Jaiswal Eyes Big Finish in Boxing Day Test to Challenge Joe Root s Record

ರೂಟ್ ದಾಖಲೆ ಮುರಿಯಲು ಎಷ್ಟು ರನ್ ಬೇಕು?

ಈ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್‌ 245 ರನ್‌ ಸಿಡಿಸಿದ್ದೇ ಆದಲ್ಲಿ ರೂಟ್ ಅವರ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ. ಅಂಕಿ ಅಂಶಗಳು ನೋಡಿದರೆ ಇದು ಸುಲಭವಲ್ಲ ಎಂದು ಅನಿಸುತ್ತದೆ. ಆದರೆ ಒಂದೊಮ್ಮೆ ಜೈಸ್ವಾಲ್‌ ನೆಲಕಚ್ಚಿ ಬ್ಯಾಟ್ ಮಾಡಿದರೆ ಈ ಸಾಧನೆ ಮಾಡಬಹುದು ಎಂದು ಅನಿಸುತ್ತದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ರಲ್ಲಿ, ಯಶಸ್ವಿ ಜೈಸ್ವಾಲ್‌ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಆದರೆ ಭರವಸೆ ಮೂಡಿಸಿದ್ದಾರೆ. ಇವರು ಆಡಿದ 5 ಇನಿಂಗ್ಸ್‌ಗಳಲ್ಲಿ 193 ರನ್‌ ಸಿಡಿಸಿದ್ದಾರೆ. ಇದರಲ್ಲಿ ಪರ್ತ್‌ ಟೆಸ್ಟ್‌ನಲ್ಲಿ ಕಲೆ ಹಾಕಿದ 161 ರನ್‌ ಸೇರಿದೆ. ಮೆಲ್ಬೋರ್ನ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಸ್ವಲ್ಪ ಉತ್ತಮವಾಗಿದ್ದರೆ ಈ ಅವಕಾಶದಲ್ಲಿ ಇವರು ಅಬ್ಬರಿಸಬಲ್ಲರು.

Story first published: Wednesday, December 25, 2024, 15:23 [IST]
Other articles published on Dec 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+