Yashasvi Jaiswal: ಮೆಕಲಮ್, ಸ್ಟೋಕ್ಸ್ ದಾಖಲೆಯ ಮೇಲೆ ಯಶ್ವಸ್ವಿ ಜೈಸ್ವಾಲ್ ಕಣ್ಣು
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್, ಭಾರತ ಪ್ರವಾಸವನ್ನು ಬೆಳೆಸಿದ್ದಾಗ ಪ್ರವಾಸಿ ತಂಡದ ವಿರುದ್ಧ ರನ್ ಬೇಟೆ ನಡೆಸಿದ್ದ ಪ್ಲೇಯರ್. ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 700ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದ ಯಶಸ್ವಿ, ಭರವಸೆ ಮೂಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಯಶಸ್ವಿ, ಮತ್ತೊಂದು ದೊಡ್ಡ ದಾಖಲೆಯನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಈ ಮೂಲಕ ಸ್ಟಾರ್ ಆಟಗಾರರನ್ನು ಹಿಂದಿಕ್ಕುವ ಕನಸಿನಲ್ಲಿದ್ದಾರೆ.

ಯಾವ ದಾಖಲೆಯ ಮೇಲೆ ಯಸಶ್ವಿ ಕಣ್ಣು?
ಯಶಸ್ವಿ ಜೈಸ್ವಾಲ್ ಅವರು ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರ ವಿಶೇಷ ದಾಖಲೆಯ ಮೇಲೆ ಚಿತ್ತ ನೆಟ್ಟಿದ್ದಾರೆ. ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಯಶಸ್ವಿ ಮೇಲಿದೆ. ಈ ಸಮಯದಲ್ಲಿ, ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿವು ಕನಸು ಹೊಂದಿದ್ದಾರೆ.
ಯಶಸ್ವಿ ಬಾರಿಸಿದ ಸಿಕ್ಸರ್ ಎಷ್ಟು?
ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಕೀರ್ತಿ ನ್ಯೂಜಿಲೆಂಡ್ ತಂಡದ ಮೆಕಲಮ್ ಅವರದ್ದಾಗಿದೆ. ಇವರನ್ನು ಹಿಂದಿಕ್ಕಲು ಯಶಸ್ವಿ ಅವರಿಗೆ ಇನ್ನು 8 ಸಿಕ್ಸರ್ ಅವಶ್ಯಕತೆ ಇದೆ. 2024 ರಲ್ಲಿ, ಜೈಸ್ವಾಲ್ ಭಾರತದ ಪರ ಆರು ಟೆಸ್ಟ್ ಪಂದ್ಯಗಳಲ್ಲಿ 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್‌ನೊಂದಿಗೆ, ಯಶಸ್ವಿ ಜೈಸ್ವಾಲ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ಸ್ಟೋಕ್ಸ್ 26 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದರು.
ಮೆಕಲಮ್ ಬಾರಿಸಿದ ಸಿಕ್ಸರ್ ಎಷ್ಟು?
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಡಂ ಮೆಕಲಮ್ ಮೊದಲ ಸ್ಥಾನದಲ್ಲಿದ್ದಾರೆ. ಇವರು 2014ರಲ್ಲಿ 33 ಸಿಕ್ಸರ್ ಬಾರಿದ್ದರು. ಬಾಂಗ್ಲಾದೇಶದ ವಿರುದ್ಧ ಜೈಸ್ವಾಲ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಮೆಕಲಮ್ ಅವರ ದಾಖಲೆಯನ್ನು ಹಿಂದಿಕ್ಕಬಹುದು.
2024ರಲ್ಲಿ ಯಶಸ್ವಿ ಜೈಸ್ವಾಲ್ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಈ ವೇಳೆ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಇದೇ ಫಾರ್ಮ್ ಮುಂದುವರೆಸುವ ಯೋಜನೆ ಹೊಂದಿದ್ದಾರೆ. 2024 ರಲ್ಲಿ 14 ಪಂದ್ಯಗಳಲ್ಲಿ 1033 ರನ್ ಗಳಿಸಿರುವ ಜೈಸ್ವಾಲ್ ಭರವಸೆ ಮೂಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರು ಮೆಕಲಮ್ ಅವರ ದಾಖಲೆಯನ್ನು ಯಾವ ಪಂದ್ಯದಲ್ಲಿ ಮುರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications