Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yashasvi Jaiswal: ಜೋ ರೂಟ್‌ ದಾಖಲೆಯನ್ನು "ಯಶಸ್ವಿ"ಯಾಗಿ ಬ್ರೇಕ್ ಮಾಡ್ತಾರಾ ಜೈಸ್ವಾಲ್‌?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಈ ವೇಳೆ ಉಭಯ ತಂಡಗಳ ಮೂರನೇ ಟೆಸ್ಟ್‌ ಪಂದ್ಯಕ್ಕೆ ಬ್ರಿಸ್ಬೇನ್‌ ಅಂಗಳ ಸಿದ್ದವಾಗುತ್ತಿದೆ. ಈ ಪಂದ್ಯದಲ್ಲಿ ಕ್ರಿಕೆಟ್‌ ಅಭಿಮಾನಿಗಳ ಕಣ್ಣು, ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಮೇಲೆ ನೆಟ್ಟಿರಲಿದೆ. ಇವರು ಪ್ರಸಕ್ತ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಯಶಸ್ವಿ ಅವರಿಗೆ ಈ ವರ್ಷ ಇನ್ನು ಎರಡು ಟೆಸ್ಟ್‌ ಪಂದ್ಯಗಳು ಆಡಲು ಸಿಗಲಿದ್ದು, ದೊಡ್ಡ ಮೈಲಿಗಲ್ಲು ಮೇಲೆ ಅವರ ಚಿತ್ತ ನೆಟ್ಟಿದೆ.

ಟೀಮ್ ಇಂಡಿಯಾದ ಪರ 2024ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಅವರಿಗೆ ಸಲ್ಲುತ್ತದೆ. ಇವರು ಈ ವರ್ಷ ಹಲವು ಬಿಗ್ ಇನಿಂಗ್ಸ್ ಕಟ್ಟಿದ್ದಾರೆ. ಈ ಮೂಲಕ ಹಲವು ಪಂದ್ಯಗಳಲ್ಲಿ ಹೀರೋ ರೀತಿ ಮಿಂಚಿದ್ದಾರೆ. ಈ ಬಾರಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಯಶಸ್ವಿ ಜೈಸ್ವಾಲ್‌ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎರಡು ಟೆಸ್ಟ್‌ ಪಂದ್ಯಗಳಲ್ಲಿ ಜೈಸ್ವಾಲ್‌ ರೂಟ್‌ ಅವರ ದಾಖಲೆಯನ್ನು ಅಳಿಸುವ ಕನಸು ಕಾಣುತ್ತಿದ್ದಾರೆ.

Yashasvi Jaiswal Eyes Joe Root s Record as Team India Prepares for Third Test in Brisbane

ರೂಟ್‌ ದಾಖಲೆಯ ಮೇಲೆ ಕಣ್ಣು

ಬ್ರಿಸ್ಬೇನ್‌ನಲ್ಲಿ ಹಾಗೂ ನಂತರ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಉತ್ತಮ ಆಟವನ್ನು ಆಡಿದ್ದೇ ಆದಲ್ಲಿ ಜೋ ರೂಟ್‌ ಅವರ ಗರಿಷ್ಠ ರನ್‌ ದಾಖಲೆಗೆ ಕುತ್ತು ಬರಲಿದೆ. ಜೈಸ್ವಾಲ್ ಈ ವರ್ಷ ಇದುವರೆಗೆ ಟೆಸ್ಟ್‌ನಲ್ಲಿ 13 ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 54.33 ಸರಾಸರಿಯಲ್ಲಿ 1304 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕ ಮತ್ತು 7 ಅರ್ಧಶತಕಗಳ ಸೇರಿವೆ. ಇನ್ನು ಜೋ ರೂಟ್‌ 2024 ರಲ್ಲಿ 16 ಟೆಸ್ಟ್ ಪಂದ್ಯಗಳಲ್ಲಿ 56.53 ಸರಾಸರಿಯಲ್ಲಿ 1470 ರನ್ ಗಳಿಸಿದ್ದಾರೆ.

ಇನ್ನು ಎಷ್ಟು ರನ್ ಬೇಕು?

ಯಶಸ್ವಿ ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ 166ಕ್ಕೂ ಹೆಚ್ಚು ರನ್‌ ಬಾರಿಸಿದರೆ, ರೂಟ್‌ ದಾಖಲೆಯನ್ನು ಅಳಿಸಿ ಹಾಕಬಹುದು. ರೂಟ್‌ ಸಹ ಈ ವರ್ಷ ಇನ್ನೂ ಒಂದು ಟೆಸ್ಟ್ ಪಂದ್ಯವನ್ನು ಆಡಲು ಅವಕಾಶ ಇದೆ. ಇದು ಅವರ ರನ್‌ಗಳ ವ್ಯತ್ಯಾಸವನ್ನು ಇನ್ನು ಹೆಚ್ಚಿಸಬಹುದು.

Yashasvi Jaiswal Eyes Joe Root s Record as Team India Prepares for Third Test in Brisbane

ಡಿಸೆಂಬರ್‌ 14ರಿಂದ ಮೂರನೇ ಟೆಸ್ಟ್‌

ಇಂಗ್ಲೆಂಡ್ ಸದ್ಯ ನ್ಯೂಜಿಲೆಂಡ್‌ ಪ್ರವಾಸದಲ್ಲಿದೆ. ಈ ವೇಳೆ ಇಂಗ್ಲೆಂಡ್ ಹಾಗೂ ಆತಿಥೇಯ ತಂಡಗಳ ನಡುವೆ ಮೂರು ಟೆಸ್ಟ್‌ ಪಂದ್ಯಗಳ ಸರಣಿ ಆಡಲಾಗುತ್ತಿದೆ. ಈ ವೇಳೆ ಇಂಗ್ಲೆಂಡ್ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ಹ್ಯಾಮಿಲ್ಟಂನ್‌ನಲ್ಲಿ ಉಭಯ ದೇಶಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 14 ರಿಂದ ಆರಂಭವಾಗಲಿದೆ. ಈ ವೇಳೆ ಜೋ ರೂಟ್‌ ಮತ್ತೊಮ್ಮೆ ಟೆಸ್ಟ್‌ ಆಡುವುದನ್ನು ಕಾಣಬಹುದು. ಇದಾದ ಬಳಿಕ ಇಂಗ್ಲೆಂಡ್ ಈ ವರ್ಷ ಯಾವುದೇ ಟೆಸ್ಟ್‌ ಸರಣಿ ಆಡುವುದಿಲ್ಲ. ಹೀಗಾಗಿ ಯಾಶಸ್ವಿ ಜೈಸ್ವಾಲ್‌ಗೆ ಉತ್ತಮ ಅವಕಾಶ ಸಿಗಲಿದೆ. ಮೆಲ್ಬೋರ್ನ್‌ನಲ್ಲಿ ಆಡಲಿರುವ ಪಂದ್ಯಕ್ಕೂ ಮುನ್ನ ಉಭಯ ಆಟಗಾರರ ನಡುವಣ ರನ್‌ ಅಂತರ ಎಷ್ಟು ಎಂಬುದು ಸ್ಪಷ್ಟವಾಗುತ್ತದೆ. ಈ ಅಂತರವನ್ನು ಕಡಿಮೆ ಮಾಡಲು ಬ್ರಿಸ್ಬೇನ್‌ನಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ.

Story first published: Thursday, December 12, 2024, 13:30 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+