For Quick Alerts
ALLOW NOTIFICATIONS  
For Daily Alerts
 

Yashasvi Jaiswal: ಯಶಸ್ವಿ ಜೈಸ್ವಾಲ್‌ಗೆ ಜೋ ರೂಟ್ ದಾಖಲೆ ಹಿಂದಿಕ್ಕುವ ಅವಕಾಶ

ಭಾರತ ಮತ್ತು ಆಸ್ಟ್ರೇಲಿಯಾ ನಡವುಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಡಿಸೆಂಬರ್‌ 6 ರಿಂದ ಆಡಿಲೇಡ್‌ನಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್‌ ಹಾಗೂ ಎರಡನೇ ಟೆಸ್ಟ್‌ ನಡುವೆ ಹೆಚ್ಚಿನ ದಿನಗಳ ಅಂತರವನ್ನು ನೀಡಲಾಗಿದೆ. ಕಾರಣ ಎರಡನೇ ಟೆಸ್ಟ್‌ ಡೇ-ಆಂಡ್ ನೈಟ್‌ ಆಗಿರಲಿದೆ. ಇದಕ್ಕಾಗಿ ಉಭಯ ತಂಡಗಳು ತಯಾರಿ ನಡೆಸಿವೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಸೆ ಟೀಮ್ ಇಂಡಿಯಾದ್ದಾಗಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಅವರ ಮೇಲೆ ನೆಟ್ಟಿರಲಿದೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಹಾಗೂ ವಿರಾಟ್‌ ಕೊಹ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಎರಡನೇ ಟೆಸ್ಟ್‌ನಲ್ಲೂ ತಮ್ಮ ಅಮೋಘ ಫಾರ್ಮ್‌ ಮುಂದುವರೆಸುವ ಆಸೆ ಇಬ್ಬರೂ ಆಟಗಾರರಾದ್ದಾಗಿದೆ. ಈ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್‌ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಪಂದ್ಯದಲ್ಲಿ ಯಶಸ್ವಿ ಬರೆಯಲಿರುವ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Yashasvi Jaiswal Eyes Record as India Prepares for Second Border-Gavaskar Test in Adelaide

ದಾಖಲೆಯ ಮೇಲೆ ಜೈಸ್ವಾಲ್ ಕಣ್ಣು

ಬಾರ್ಡರ್‌ ಗವಾಸ್ಕರ್‌ ಸರಣಿಯೂ ಸಹ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಡಿಯಲ್ಲಿ ಆಡಲಾಗುತ್ತಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸಿದ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ನೇರ ಅರ್ಹತೆ ಪಡೆಯಬಹುದಾಗಿದೆ. ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಎರಡೂ ಇನಿಂಗ್ಸ್‌ಗಳಲ್ಲಿ ಆಡುವ ಸಾಧ್ಯತೆ ಇದೆ. ಈ ವೇಳೆ ಯಶಸ್ವಿ ಒಮ್ಮೆ 50 ಅಥವಾ ಅದಕ್ಕಿಂತ ಹೆಚ್ಚಿನ ರನ್‌ ಕಲೆ ಹಾಕಿದರೆ, ಜೋ ರೂಟ್‌ ಅವರ ದಾಖಲೆಯನ್ನು ಮೀರಿ ನಿಲ್ಲಬಹುದು.

ಜೋ ರೂಟ್ 36 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 12 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇಷ್ಟೇ ಸಂಖ್ಯೆಯನ್ನು ಟೀಮ್ ಇಂಡಿಯಾದ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಕೇವಲ 28 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಮುಟ್ಟಿದ್ದಾರೆ. ಈ ಇಬ್ಬರು ಬ್ಯಾಟರ್‌ಗಳ ನಂತರ ಶ್ರೀಲಂಕಾದ ಧನಂಜಯ್ ಡಿ ಸಿಲ್ವಾ ಇದ್ದು, ಇವರು 18 ಟೆಸ್ಟ್ ಪಂದ್ಯಗಳಲ್ಲಿ 50 ಕ್ಕೂ ಹೆಚ್ಚು ರನ್‌ಗಳನ್ನು 10 ಬಾರಿ ಸಿಡಿಸಿದ್ದಾರೆ.

Yashasvi Jaiswal Eyes Record as India Prepares for Second Border-Gavaskar Test in Adelaide

ಆಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತೊಮ್ಮೆ 50ಕ್ಕೂ ಹೆಚ್ಚು ರನ್‌ ಬಾರಿಸಿ ಅಬ್ಬರಿಸಿದರೆ, ಈ ಪಟ್ಟಿಯಲ್ಲಿ ಇವರು ನಂಬರ್ 1 ಸ್ಥಾನವನ್ನು ತಲುಪುತ್ತಾರೆ. ಯಶಸ್ವಿ ಜೈಸ್ವಾಲ್‌ ಒಮ್ಮೆ ನೆಲಕ್ಕೂರಿ ಬ್ಯಾಟ್ ಮಾಡಲು ಆರಂಭಿಸಿದರೆ, ಬಿಗ್ ಇನಿಂಗ್ಸ್‌ ಫಿಕ್ಸ್‌. ಇವರು ಶತಕ ಸಿಡಿಸಿದ ಮೇಲೆಯೂ, ಅದನ್ನು ದೊಡ್ಡದಾಗಿಸುವ ಗುರಿಯನ್ನು ಹೊಂದಿರುತ್ತಾರೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಈ ವೇಳೆ ಅವರು ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ಗಳ ಅಮೋಘ ಇನಿಂಗ್ಸ್‌ ಕಟ್ಟಿದ್ದರು, ಹೀಗಾಗಿ ಟೀಮ್ ಇಂಡಿಯಾ ಇವರ ಮೇಲೆ ಬೆಟ್ಟದಷ್ಟು ಆಸೆಯನ್ನು ಇಟ್ಟುಕೊಂಡಿದೆ.

Story first published: Monday, December 2, 2024, 18:04 [IST]
Other articles published on Dec 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+