ಆಗಸ್ಟ್ 8 ಗುರುವಾರ, ಶ್ರೀಲಂಕಾ ಎದುರು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಮುಖಭಂಗ ಎದುರಿಸಬೇಕಾಯಿತು. ರೋಹಿತ್ ಶರ್ಮಾ ನಾಯಕತ್ವದ ಸ್ಟಾರ್ ಆಟಗಾರರಿದ್ದ ಟೀಮ್ ಇಂಡಿಯಾವನ್ನು ಆತಿಥೇಯ ಶ್ರೀಲಂಕಾ ತಂಡವು 2-0 ಅಂತರದಿಂದ ಸೋಲಿಸಿತು.
ಈ ಸರಣಿಯ ಸೋಲಿನ ನಂತರ ರೋಹಿತ್ ಶರ್ಮಾ ಕೂಡ ತುಂಬಾ ಕೋಪಗೊಂಡಿದ್ದಾರೆ. ರೋಹಿತ್ ಶರ್ಮಾ ಭವಿಷ್ಯದಲ್ಲಿ ಭಾರತ ಏಕದಿನ ತಂಡದಲ್ಲಿ ಆಗುವ ಬದಲಾವಣೆಗಳ ಸುಳಿವು ನೀಡಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಶಿವಂ ದುಬೆ ಅವರಂತಹ ಬ್ಯಾಟರರ್ಸ್ ಅಬ್ಬರಿಸಲಿಲ್ಲ.

ಪರಿಣಾಮ ಮುಂಬರುವ ಏಕದಿನ ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು. ಇನ್ನೊಂದೆಡೆ ಭಾರತದ ಏಕದಿನ ತಂಡದಲ್ಲಿ ಸ್ಪೋಟಕ ಬ್ಯಾಟರ್‌ನನ್ನು ಕಣಕ್ಕಿಳಿಸುವ ಸಮಯ ಕೂಡ ಬಂದಿದೆ.
ಈಗಾಗಲೇ ಟೀಮ್ ಇಂಡಿಯಾ ಪರ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿಯೂ ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಬೌಲರ್ಸ್ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಈ ಪ್ರತಿಭಾವಂತ ಬ್ಯಾಟರ್ ಬೇರೆ ಯಾರೂ ಅಲ್ಲ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್.
ಶ್ರೀಲಂಕಾ ಪ್ರವಾಸದಲ್ಲಿ ಸ್ಟಾರ್ ಬ್ಯಾಟರ್ಸ್ ವೈಫಲ್ಯದಿಂದಾಗಿ ಇದೀಗ ಭಾರತ ಏಕದಿನ ತಂಡದಲ್ಲಿ ಅಪಾಯಕಾರಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸುವ ಸಮಯ ಬಂದಿದೆ. ಯಶಸ್ವಿ ಜೈಸ್ವಾಲ್ ಭಾರತಕ್ಕಾಗಿ ಇನ್ನೂ ಯಾವುದೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.
ಆದರೆ ಅವರಿಗೆ ಅವಕಾಶ ಸಿಕ್ಕರೆ ಈ ಸ್ವರೂಪದಲ್ಲಿ ರನ್ ಗಳಿಸುವ ಸಾಮರ್ಥ್ಯವಿದೆ. ಯಶಸ್ವಿ ಜೈಸ್ವಾಲ್ ಎಂಥದೇ ಸಂದರ್ಭದಲ್ಲೂ ಪಂದ್ಯವನ್ನು ಕ್ಷಣಮಾತ್ರದಲ್ಲಿ ಬದಲಾಯಿಸುವುದರಲ್ಲಿ ನಿಪುಣರಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಅತಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದು, ಮುಂದಿನ ಏಕದಿನ ಸರಣಿಗಳಿಗೆ ಟೀಮ್ ಇಂಡಿಯಾ ಪರ ಪಾರ್ದಪಣೆ ಮಾಡುವ ಸಾಧ್ಯತೆಗಳಿವೆ.
ಯಶಸ್ವಿ ಜೈಸ್ವಾಲ್ ಭಾರತದ ಏಕದಿನ ತಂಡದಲ್ಲಿ ಅವಕಾಶ ಸಿಕ್ಕರೆ ಆರಂಭಿಕ ಬ್ಯಾಟರ್ ಆಗಿ ರನ್ ಹೊಳೆ ಹರಿಸಬಹದು.
ಜೈಸ್ವಾಲ್ ಏಕದಿನ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ಪಡೆದರೆ, ಅವರು ಟೀಮ್ ಇಂಡಿಯಾಗೆ ಎಡಗೈ ಆರಂಭಿಕ ಬ್ಯಾಟರ್ ಆಯ್ಕೆಯಾಗಿರುತ್ತಾರೆ.
ಬಲ ಮತ್ತು ಎಡ ಆರಂಭಿಕ ಸಂಯೋಜನೆಯು ಯಾವುದೇ ತಂಡಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರೊಂದಿಗೆ, ಪವರ್-ಪ್ಲೇ ಸಮಯದಲ್ಲಿ ಫೀಲ್ಡಿಂಗ್ ತಂಡದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬಹುದು. ಜೊತೆಗೆ ವೇಗವಾಗಿ ರನ್ ಗಳಿಸಬಹುದು. ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ಸಿಕ್ಕರೆ, ಶುಭಮನ್ ಗಿಲ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆ.
ಯಶಸ್ವಿ ಜೈಸ್ವಾಲ್ ಏಕದಿನ ತಂಡದಲ್ಲಿ ಆರಂಭಿಕರಾಗಿ ಸ್ಥಾನ ಪಡೆದರೆ, ಶುಭಮನ್ ಗಿಲ್ ಅವರನ್ನು 4ನೇ ಸ್ಥಾನಕ್ಕೆ ಬದಲಾಯಿಬೇಕಾಗುತ್ತದೆ. ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೂಡ ಮಾಡಿದ್ದಾರೆ.
ಹೀಗಾಗಿ ಬ್ಯಾಟಿಂಗ್ ಕ್ರಮಾಂಕ 3 ಮತ್ತು 4ರ ಸ್ಥಾನಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದಲ್ಲಿ ಶುಭಮನ್ ಗಿಲ್ ಯಶಸ್ವಿಯಾದರೆ, ಏಕದಿನ ಕ್ರಿಕೆಟ್‌ನಲ್ಲಿ ಸುಲಭವಾಗಿ 4ನೇ ಕ್ರಮಾಂಕದಲ್ಲಿ ರನ್ ಗಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡುವ ಹಾದಿ ಸುಗಮವಾಗಲಿದೆ.