Yashasvi Jaiswal: ಯಶಸ್ವಿ ಮೇಲೆ ರೋಹಿತ್ ಶರ್ಮಾ ಕೋಪ: ಜೈಸ್ವಾಲ್ ಬಸ್ ಮಿಸ್
ಆಟಗಾರರು ಟೈಮ್‌ಗೆ ಎಷ್ಟು ಮಹತ್ವ ಕೊಡುತ್ತಾರೆ ಎಂಬುದರ ಬಗ್ಗೆ ತಿಳಿದಿರಬಹುದು. ಅದಕ್ಕೆ ಒಂದು ಬೆಸ್ಟ್ ಎಕ್ಸಾಮ್ ಪಲ್ ಇಲ್ಲಿದೆ. ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ, ಆತಿಥೇಯ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಎರಡನೇ ಪಂದ್ಯ ಆಡಿಲೇಡ್‌ನಲ್ಲಿ ನಡೆದಿತ್ತು. ಟೀಮ್ ಇಂಡಿಯಾ ಮೂರನೇ ಟೆಸ್ಟ್ ಆಡಲು ಬ್ರಿಸ್ಬೇನ್‌ನತ್ತ ಮುಖ ಮಾಡಿದೆ. ಈ ವೇಳೆ ಟೀಮ್ ಇಂಡಿಯಾದ ಯುವ ಆಟಗಾರ ಒಬ್ಬ ತಂಡ ಬಸ್ ಮಿಸ್ ಮಾಡಿಕೊಂಡಿದ್ದಾರೆ ಎಂದು ಸ್ಪೋರ್ಟ್ಸ್ ತಕ್‌ನಿಂದ ತಿಳಿದು ಬಂದಿದೆ.
ಆಡಿಲೇಡ್‌ನಿಂದ ಟೀಮ್ ಇಂಡಿಯಾ ಬ್ರಿಸ್ಬೇನ್‌ಗೆ ಹೋಗಲು ಸಿದ್ಧತೆಗಳೆಲ್ಲಾ ಪುರ್ಣ ಗೊಂಡಿತ್ತು. ಇದೇ ವೇಳೆ ತಂಡದ ಆಡಿಲೇಡ್‌ನಿಂದ, ಬ್ರಿಸ್ಬೇನ್‌ಗೆ ಹೋಗಲು ತಂಡದ ಎಲ್ಲ ರೆಡಿ ಇತ್ತು. ಆದರೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಡವಾಗಿ ಬಂದಿದ್ದರಿಂದ ತಂಡದ ಬಸ್ ಮಿಸ್ ಮಾಡಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ ಕೆಲ ಕಾಲ ಬಸ್‌ನಲ್ಲಿ ಕಾಯ್ದರು ಸಹ ಜೈಸ್ವಾಲ್ ಬಾರದೆ ಇದ್ದಾಗ, ಬಸ್ ಏರ್‌ಪೋರ್ಟ್‌ನತ್ತ ಮುಖ ಮಾಡಿತು. ಟೀಮ್ ಇಂಡಿಯಾದ ಯುವ ಆಟಗಾರ 20 ನಿಮಿಷ ತಡವಾಗಿ ಬಂದರು.

ಬ್ರಿಸ್ಬೇನ್‌ನತ್ತ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಆಡಿಲೇಡ್‌ನಿಂದ ಬ್ರಿಸ್ಬೇನ್‌ಗೆ ಬೆಳಗ್ಗೆ 10ಗಂಟೆಗೆ ಪ್ರಯಾಣ ಬೆಳೆಸಿತ್ತು. ಹೀಗಾಗಿ ತಂಡ ತಾನು ತಂಗಿದ್ದ ಹೊಟೇಲ್‌ನಿಂದ ಬೆಳಗ್ಗೆ 8.30ಕ್ಕೆ ಹೊರಡಲು ಸಿದ್ಧವಾಗಿತ್ತು. ತಂಡದ ಎಲ್ಲ ಸದಸ್ಯರು ಸರಿಯಾದ ಸಮಯದಲ್ಲಿ ತಂಡದ ಬಸ್ ಹತ್ತಿ ಕುಳಿತಿದ್ದರು. ಆದರೆ ಯಶಸ್ವಿ ಜೈಸ್ವಾಲ್ ಮಾತ್ರ ತಡವಾಗಿ ಬಂದರು. ಹೀಗಾಗಿ ಯಶಸ್ವಿ ಜೈಸ್ವಾಲ್ ಮೇಲೆ ಕ್ಯಾಪ್ಟನ್ ಕೋಪಗಂಡರು.
20 ನಿಮಿಷ ತಡ
ಯಶಸ್ವಿ ಜೈಸ್ವಾಲ್ ನಿಗದಿ ಪಡಿಸಿದ ಸ್ಥಳಕ್ಕೆ 20 ನಿಮಿಷ ತಡವಾಗಿ ಬಂದರು. ಆಗ ಅಲ್ಲಿ ತಂಡದ ಬಸ್ ಅಲ್ಲಿ ಇರಲಿಲ್ಲ. ಇದನ್ನು ಕಂಡು ಗಾಬರಿ ಆದರು. ತಂಡದ ಬಸ್ ಅದಾಗಲೇ ಹೊರಟಿತ್ತು. ಯಶಸ್ವಿ ಜೈಸ್ವಾಲ್ ಅವರಿಗೆ ಅದಾಗಲೆ ಟೀಮ್ ಮ್ಯಾನೇಜ್ಮೆಂಟ್ ಒಂದು ಕಾರ್ ಸಹ ವ್ಯವಸ್ಥೆ ಮಾಡಿತ್ತು. ಹಿರಿಯ ಭದ್ರತಾ ಸಿಬ್ಬಂದಿಗಳ ಜೊತೆಗೆ ಇವರು ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಿದರು.
ಡಿಸೆಂಬರ್ 14 ರಿಂದ ಮೂರನೇ ಟೆಸ್ಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ ಈ ಟೆಸ್ಟ್ ಪಂದ್ಯಕ್ಕೆ ಮಳೆ ಬಹುವಾಗಿ ಕಾಟ ನೀಡುವ ಸಾಧ್ಯತೆ ಇದೆ. ಈಗಾಗಲೇ ಹವಾಮಾನ ಇಲಾಖೆ ನೀಡಿದ ವರದಿಯಂತೆ, ಪಂದ್ಯದ ಐದೂ ದಿನವೂ ಮಳೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಟೀಮ್ ಇಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ದೃಷ್ಟಿಯಿಂದ ಈ ಟೆಸ್ಟ್ ಮಹತ್ವದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications