Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ZIM: ರೋಹಿತ್ ಶರ್ಮಾ, ಇಬ್ರಾಹಿಂ ಜದ್ರಾನ್ ಹಿಂದಿಕ್ಕಿ 2024ರಲ್ಲಿ ಅಧಿಕ ರನ್ ಗಳಿಸಿದ ಯಶಸ್ವಿ ಜೈಸ್ವಾಲ್

ಬುಧವಾರ, ಜುಲೈ 10ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡದ ವಿರುದ್ಧ ಪ್ರವಾಸಿ ಭಾರತ ತಂಡವು 23 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಇದೇ ವೇಳೆ ಯಶಸ್ವಿ ಜೈಸ್ವಾಲ್ ಅವರು ಭಾರತ ತಂಡಕ್ಕೆ ಟಿ20 ವಾಪಸಾತಿ ಪಂದ್ಯದಲ್ಲಿ 27 ಎಸೆತಗಳನ್ನು ಎದುರಿಸಿ 36 ರನ್ ಗಳಿಸಿದರು. ಆಡುವ 11ರ ಬಳಗದಲ್ಲಿ ಅಭಿಷೇಕ್ ಶರ್ಮಾ ಬದಲಿಗೆ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ 4 ಭೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ನಾಯಕ ಶುಭ್ಮನ್ ಗಿಲ್ ಅವರೊಂದಿಗೆ 67 ರನ್ ಆರಂಭಿಕ ಜೊತೆಯಾಟ ರಚಿಸಿದರು.

Yashasvi Jaiswal Overtakes Rohit Sharma And Ibrahim Zadran to Become Leading Run Scorer of 2024

22 ವರ್ಷದ ಯಶಸ್ವಿ ಜೈಸ್ವಾಲ್ ತಮ್ಮ ಇತ್ತೀಚಿನ ಪ್ರದರ್ಶನದ ಮೂಲಕ 2024ರ ಬೃಹತ್ ಬ್ಯಾಟಿಂಗ್ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಈ ಹಾದಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ ಅವರನ್ನು ಹಿಂದಿಕ್ಕಿದ್ದಾರೆ.

2024ರ ಅಧಿಕ ರನ್ ಸ್ಕೋರರ್ ಎನಿಸಿದ ಯಶಸ್ವಿ ಜೈಸ್ವಾಲ್

ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಗೆಲುವಿನ ಭಾರತ ತಂಡದ ಸಂಪೂರ್ಣ ಅಭಿಯಾನದಲ್ಲಿ ಆಡುವ 11ರ ಬಳಗಕ್ಕೆ ಪ್ರವೇಶಿಸಲು ವಿಫಲವಾದ ಯಶಸ್ವಿ ಜೈಸ್ವಾಲ್, ಜುಲೈ 10ರಂದು ಜಿಂಬಾಬ್ವೆ ವಿರುದ್ಧದ ಸರಣಿಯ ತಂಡದ ಮೂರನೇ ಟಿ20 ಪಂದ್ಯಾಕ್ಕಾಗಿ ತಂಡಕ್ಕೆ ಮರಳಿದರು.

Yashasvi Jaiswal Overtakes Rohit Sharma And Ibrahim Zadran to Become Leading Run Scorer of 2024


ಭಾರತ ತಂಡದ ಪರ ತನ್ನ ಪವರ್‌ಪ್ಲೇ ಸ್ಫೋಟಕ ಆಟದ ಮೂಲಕ ಯುವ ಆಟಗಾರ ಯಶಸ್ವಿ ಜೈಸ್ವಾಲ್, ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ (844 ರನ್) ಮತ್ತು ಭಾರತದ ಲೆಜೆಂಡ್ ರೋಹಿತ್ ಶರ್ಮಾ (833 ರನ್) ಅವರನ್ನು ಹಿಂದಿಕ್ಕಿ 2024ರಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳಲ್ಲಿ ಅಧಿಕ ರನ್ ಗಳಿಸಿದ ಆಟಗಾರನಾದರು.

ಯಶಸ್ವಿ ಜೈಸ್ವಾಲ್ ಅವರ ದಾಖಲೆಯ ಪ್ರದರ್ಶನದ ನಂತರ, ಈ ವರ್ಷ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ರನ್ ಗಳಿಸಿದವರ ಪಟ್ಟಿ ಇಲ್ಲಿದೆ.

ಯಶಸ್ವಿ ಜೈಸ್ವಾಲ್ (ಭಾರತ) - 848 ರನ್ - 14 ಇನ್ನಿಂಗ್ಸ್
ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ) - 844 ರನ್ - 27 ಇನ್ನಿಂಗ್ಸ್
ರೋಹಿತ್ ಶರ್ಮಾ (ಭಾರತ) - 833 ರನ್ - 22 ಇನ್ನಿಂಗ್ಸ್
ಕುಸಾಲ್ ಮೆಂಡಿಸ್ (ಶ್ರೀಲಂಕಾ) 833 ರನ್ - 26 ಇನ್ನಿಂಗ್ಸ್
ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) - 773 ರನ್ - 25 ಇನ್ನಿಂಗ್ಸ್

ಯಶಸ್ವಿ ಜೈಸ್ವಾಲ್ ಈ ವರ್ಷ ಜನವರಿ ಮತ್ತು ಮಾರ್ಚ್ ನಡುವೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೇ 712 ರನ್ ಗಳಿಸಿದರು. ಅದಕ್ಕೂ ಮುನ್ನ ಮೂರು ಟಿ20 ಪಂದ್ಯಗಳಲ್ಲಿ ಒಂದರಲ್ಲಿ ಅಫ್ಘಾನಿಸ್ತಾನ ವಿರುದ್ಧ 34 ಎಸೆತಗಳಲ್ಲಿ 68 ರನ್ ಗಳಿಸಿದರು.

Story first published: Wednesday, July 10, 2024, 21:48 [IST]
Other articles published on Jul 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+