For Quick Alerts
ALLOW NOTIFICATIONS  
For Daily Alerts
 

Yashasvi Jaiswal: ಕೇವಲ 10 ಟೆಸ್ಟ್‌ಗಳಲ್ಲಿ ಸುನೀಲ್ ಗವಾಸ್ಕರ್ ಹಿಂದಿಕ್ಕಿದ ಯಶಸ್ವಿ ಜೈಸ್ವಾಲ್

ಟೀಮ್ ಇಂಡಿಯಾದ ಯುವ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಆದರೆ, ತಮ್ಮ ಹೋರಾಟಗಳನ್ನು ಕ್ರಿಕೆಟ್‌ಗೆ ಅಡ್ಡಿಯಾಗಲು ಬಿಡಲಿಲ್ಲ. ಪ್ರತಿಭೆ ಜೊತೆಗೆ ಅದೃಷ್ಟ ಕೂಡ ಜೈಸ್ವಾಲ್ ಕೈ ಹಿಡಿಯಿತು ಕೇವಲ 19 ವಯಸ್ಸಿಗೆ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.

ಜೈಸ್ವಾಲ್ ಕಳೆದ ವರ್ಷ ಟೀಮ್ ಇಂಡಿಯಾದಲ್ಲಿ ಆರಂಭಿಕ ಬ್ಯಾಟರ್ ಆಗಿ ಪಾದಾರ್ಪಣೆ ಮಾಡಿದರು. ಇದುವರಗೆ ಕೇವಲ 10 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ರನ್ ಮಳೆಯನ್ನು ಹರಿಸಿದ್ದಾರೆ. ಜೈಸ್ವಾಲ್ ಆಟಕ್ಕೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಕೂಡ ಹಿಂದೆ ಉಳಿದಿದ್ದು, ಅವರು ಡಾನ್ ಬ್ರಾಡ್‌ಮನ್ ಕ್ಲಬ್‌ಗೆ ಸೇರಿದ್ದಾರೆ.

Yashasvi Jaiswal overtook Sunil Gavaskar in just 10 Tests

ಬಾಂಗ್ಲಾದೇಶ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ವಿಫಲವಾದರೂ, ವಿಶೇಷ ದಾಖಲೆ ಬರೆದಿದ್ದಾರೆ. ಕೇವಲ 10 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ಹೆಸರನ್ನು ದಿಗ್ಗಜ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ರನ್ ಹೊಳೆ ಹರಿಸಿದ

ಬಾಂಗ್ಲಾದೇಶ ವಿರುದ್ಧ ಯಶಸ್ವಿ ಜೈಸ್ವಾಲ್ ತಮ್ಮ ವೃತಿಜೀವನದ 10ನೇ ಟೆಸ್ಟ್ ಆಡುತ್ತಿದ್ದಾರೆ. ಚೆಪಾಕ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಅದ್ಭುತ ಅರ್ಧಶತಕ ಬಾರಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಕೇವಲ 10 ರನ್ ಗಳಿಸಿ ಅವರು ಪೆವಿಲಿಯನ್ ಗೆ ಮರಳಿದರು. ಆದರೆ ಮೊದಲ 10 ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಜೈಸ್ವಾಲ್ ಮಾಡುವ ಮೂಲಕ ಸುನಿಲ್ ಗವಾಸ್ಕರ್ ಅವರನ್ನೂ ಹಿಂದಿಕ್ಕಿದ್ದಾರೆ.

ಮೊದಲ 10 ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಅವರು 1446 ರನ್ ಗಳಿಸಿದ್ದಾರೆ. ಇದೀಗ ಯಶಸ್ವಿ ಜೈಸ್ವಾಲ್ 10 ಟೆಸ್ಟ್‌ಗಳಲ್ಲಿ 1094 ರನ್ ಗಳಿಸಿದ್ದಾರೆ. ಇದರೊಂದಿಗೆ ಯಶಸ್ವಿ ಭಾರತೀಯ ಆಟಗಾರರ ಪೈಕಿ ಅಗ್ರಸ್ಥಾನಕ್ಕೆ ತಲುಪಿದ್ದು, ವಿಶ್ವದಲ್ಲಿ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸುನಿಲ್ ಗವಾಸ್ಕರ್ ಅವರು ಮೊದಲ 10 ಟೆಸ್ಟ್‌ಗಳಿಂದ 978 ರನ್ ದಾಖಲಿಸಿದ್ದಾರೆ.

ಬಾಂಗ್ಲಾದೇಶ ಸರಣಿಯ ನಂತರ ಯಶಸ್ವಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಟೆಸ್ಟ್ ಸರಿ ಆಡಲಿದ್ದಾರೆ. ಈ ವೇಳೆ ಕೂಡ ಅವರು ಹಲವು ದಾಖಲೆ ಮುರಿಯುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ.

Story first published: Friday, September 20, 2024, 22:53 [IST]
Other articles published on Sep 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+