For Quick Alerts
ALLOW NOTIFICATIONS  
For Daily Alerts
 

ICC Ranking: ಯಶಸ್ವಿ ಜೈಸ್ವಾಲ್‌ಗೆ ಗುಡ್ ನ್ಯೂಸ್; ವಿರಾಟ್-ಪಂತ್‌ಗೆ ಶಾಕ್

ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ತಪ್ಪಿಸುವತ್ತ ಭಾರತ ಕಣ್ಣಿಟ್ಟಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ನವೆಂಬರ್ 1 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಕಿಂಗ್ ಬಿಡುಗಡೆ ಮಾಡಿದೆ.

ಭಾರತ ತಂಡದ ಸ್ಟಾರ್ ಆಟಗಾರರಾದ ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಕಿಂಗ್‌ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರಿಗೆ ಐಸಿಸಿಯಿಂದ ಗುಡ್‌ ನ್ಯೂಸ್ ಸಿಕ್ಕಿದೆ.

Yashasvi Jaiswal rises in ICC Test rankings while Rishabh Pant and Virat Kohli have come down

ಐಸಿಸಿ ಇತ್ತೀಚಿನ ರ‍್ಯಾಕಿಂಗ್‌ ಬಿಡುಗಡೆ ಮಾಡಿದೆ. ಇದರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ರ‍್ಯಾಕಿಂಗ್‌ ಗಳಿಸಿದ್ದಾರೆ. ಇನ್ನೊಂದೆಡೆ ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ರ‍್ಯಾಕಿಂಗ್‌ನಲ್ಲಿ ಕೆಳಗೆ ಜಾರಿದ್ದಾರೆ.

ಪುಣೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 30 ಮತ್ತು 77 ರನ್‌ಗಳನ್ನು ಗಳಿಸಿದ್ದರು. ಈ ಇನ್ನಿಂಗ್ಸ್‌ ನಂತರ ಯಶಸ್ವಿ ಒಂದು ಸ್ಥಾನ ಮೇಲೇರಿ 3ನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಭಾರತದ ಅಗ್ರ ಶ್ರೇಯಾಂಕದ ಬ್ಯಾಟರ್‌ ಆಗಿ ಉಳಿದಿದ್ದಾರೆ. ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕುಸಿತ ಕಂಡುಬಂದಿದೆ. ಪಂತ್ 5 ಸ್ಥಾನ ಕುಸಿದು 11ನೇ ಸ್ಥಾನಕ್ಕೆ ತಲುಪಿದ್ದಾರೆ. ಕೊಹ್ಲಿ 6 ಸ್ಥಾನ ಕುಸಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ.

ನ್ಯೂಜಿಲೆಂಡ್‌ ಬ್ಯಾಟರ್‌ಗಳಿಗೆ ಲಾಭ

ನ್ಯೂಜಿಲೆಂಡ್‌ ತಂಡದ ಡೆವೊನ್ ಕಾನ್ವೇ 8 ಸ್ಥಾ ಮೇಲೇರಿ 28ನೇ ಸ್ಥಾನಕ್ಕೆ, ನಾಯಕ ಟಾಮ್ ಲ್ಯಾಥಮ್ 6 ಸ್ಥಾನ ಮೇಲೇರಿ 34ನೇ ಸ್ಥಾನ ಮತ್ತು ಗ್ಲೆನ್ ಫಿಲಿಪ್ಸ್ 16 ಸ್ಥಾನ ಮೇಲೇರಿ 45ನೇ ಸ್ಥಾನ ಗಳಿಸಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಕೈಲ್ ವೆರೀನ್ 14 ಸ್ಥಾನ ಮೇಲೇರಿ 32ನೇ ಸ್ಥಾನವನ್ನು ಟೆಸ್ಟ್ ಕ್ರಿಕೆಟ್ ಪಡೆದಿದ್ದಾರೆ.

ಆಲ್‌ರೌಂಡರ್ ರ‍್ಯಾಕಿಂಗ್‌

ಇದಲ್ಲದೆ, ಟೆಸ್ಟ್ ಆಲ್‌ರೌಂಡರ್ ರ‍್ಯಾಕಿಂಗ್‌ನಲ್ಲಿ ಭಾರತದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಜಡೇಜಾ ಮೊದಲ ಸ್ಥಾನದಲ್ಲಿದರೆ, ಅಶ್ವಿನ್ ಎರಡನೇ ಸ್ಥಾನವನ್ನು ಆಕ್ರಮಣ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯ ಟೆಸ್ಟ್ ಸರಣಿಯಲ್ಲಿ ಜಡೇಜಾ ಮತ್ತು ಅಶ್ವಿನ್ ಅಮೋಘ ಪ್ರದರ್ಶನ ನೀಡಿದ್ದರು.

ಜೊತೆಗೆ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದರು. ಬಾಂಗ್ಲಾದೇಶದ ಸ್ಟಾರ್ ಆಟಗಾರ ಮೆಹದಿ ಹಸನ್ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು 3ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೆಹದಿ ಹಸನ್ ಅದ್ಭುತ ಆಲ್‌ರೌಂಡರ್ ನೀಡಿದ್ದರು.

Story first published: Wednesday, October 30, 2024, 20:10 [IST]
Other articles published on Oct 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+