Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೆಸ್ಸಿ ಜೆರ್ಸಿ ತೊಟ್ಟು ಫುಟ್ಬಾಲ್ ವಿಶ್ವಕಪ್ ಪಂದ್ಯ ನೋಡಿದ ಯಶಸ್ವಿ ಜೈಸ್ವಾಲ್‌: ವಿಡಿಯೋ ವೈರಲ್‌

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಸದ್ಯ ಕ್ರಿಕೆಟ್‌ ಅಂಗಳದಿಂದ ಕೊಂಚ ದೂರ ಉಳಿದಿದ್ದಾರೆ. ಇವರು ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್‌ ನೋಡಿ ಖುಷಿ ಪಟ್ಟಿದ್ದಾರೆ. ನ್ಯೂಯಾರ್ಕ್‌ ಜೆರ್ಸಿ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡರು. ಯಶಸ್ವಿ ಫ್ರಾನ್ಸ್‌ ಹಾಗೂ ಸ್ವೀಡನ್‌ ನಡುವಣ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ. ಈ ಪಂದ್ಯದಲ್ಲಿ ಫ್ರಾನ್ಸ್‌ 3-0 ಗೋಲುಗಳಿಂದ ಸ್ವೀಡನ್ ತಂಡವನ್ನು ಮಣಿಸಿತು. ಈ ಪಂದ್ಯವನ್ನು ನೋಡಲು ಯಶಸ್ವಿ ಜೈಸ್ವಾಲ್‌ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಜೆರ್ಸಿ ತೊಟ್ಟಿದ್ದರು. ಈ ಪಂದ್ಯವನ್ನು ನೋಡಲು ಹೋದಾಗ ತೆಗೆದ ವಿಡಿಯೋಗಳು ಈಗ ವೈರಲ್ ಆಗುತ್ತಿದೆ.

ರೌಂಡ್ ಆಫ್‌ 32ರ ಪಂದ್ಯದಲ್ಲಿ ಫ್ರಾನ್ಸ್ ತಂಡದ ಕೈಲಿಯನ್ ಎಂಬಪ್ಪೆ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ಎರಡು ಗೋಲು ದಾಖಲಿಸಿರುವ ಎಂಬಪ್ಪೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಜಯದ ಮೂಲಕ ಎಂಬಪ್ಪೆ ರೌಂಡ್ 16ಗೆ ಸ್ಥಾನ ಪಡೆದಿದೆ. ಮೊದಲ ಅರ್ಧದ ಕೊನೆಯಲ್ಲಿ ಎಂಬಪ್ಪೆ ದಾಖಲಿಸಿದ ಗೋಲು ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಸಹಕಾರಿಯಾಯಿತು.

Yashasvi Jaiswal

ಎರಡನೇ ಅರ್ಧದ ಆರಂಭದಲ್ಲಿ ಬ್ರಾಡ್ಲಿ ಬಾರ್ಕೋಲಾ ಫ್ರಾನ್ಸ್‌ ಪರ ಅಮೋಘ ಗೋಲು ಸಿಡಿಸಿ ಅಂತರವನ್ನು ಹಿಗ್ಗಿಸಿದರು. ಇದೇ ಅವಧಿಯಲ್ಲಿ ಎಂಬಪ್ಪೆ 74ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಫ್ರಾನ್ಸ್‌ ಪಂದ್ಯದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು.

ಮೆಸ್ಸಿ ದಾಖಲೆಯ ಹಿಂದೆ ಬಿದ್ದಿರುವ ಎಂಬಪ್ಪೆ

27 ವರ್ಷದ ಫ್ರಾನ್ಸ್‌ ನಾಯಕ ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ 18 ಗೋಲು ಬಾರಿಸಿದ ದಾಖಲೆಯನ್ನು ಬರೆದರು. ಈ ಮೂಲಕ ಇವರು ಅರ್ಜೆಂಟೀನಾದ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ ಅವರ ದಾಖಲೆಯ ಬೆನ್ನು ಹತ್ತಿದ್ದಾರೆ. ಮೆಸ್ಸಿ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 19 ಗೋಲು ಬಾರಿಸಿದ್ದಾರೆ.

ರೌಂಡ್ ಆಫ್‌ 16 ಪಂದ್ಯದಲ್ಲಿ ಫ್ರಾನ್ಸ್ ತಂಡ ಪರುಗ್ವೆ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.

ಮ್ಯಾಚ್‌ ನೋಡಿ ಖುಷಿ ಪಟ್ಟ ಯಶಸ್ವಿ

ಯಶಸ್ವಿ ಜೈಸ್ವಾಲ್‌ ಈ ಪಂದ್ಯವನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ ಅವರು ಏಕದಿನ ಹಾಗೂ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರು ವಿಶ್ರಾಂತಿಯಲ್ಲಿದ್ದಾರೆ. ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಇವರು ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೆ ಅಮೋಘ ಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ ಇವರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಲಭಿಸಲಿಲ್ಲ. ಇವರು ಈಗ ತಮ್ಮ ಮುಂದಿನ ಪಂದ್ಯಗಳತ್ತ ಚಿತ್ತ ನೆಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ವೇಳೆ ಯಶಸ್ವಿ ಜೈಸ್ವಾಲ್‌ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.

Story first published: Thursday, July 2, 2026, 23:12 [IST]
Other articles published on Jul 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+