ಒಂದು ಕಡಲ ದಡದಿಂದ ಇನ್ನೊಂದು ಕಡಲ ದಡಕ್ಕೆ "ಯಶಸ್ವಿ" ಪಯಣ
ಟೀಮ್ ಇಂಡಿಯಾದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ. ಈ ಮೂಲಕ ಹುಟ್ಟಿ ಬೆಳೆದು ಆಡಿದ ನಾಡಿನಿಂದ ಬೇರೆ ನಾಡಿಗೆ ಪಲಾಯನ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಮುಂಬೈ ತಂಡದ ಪ್ರತಿಭಾವಂತ ಬ್ಯಾಟರ್ ಒಂದು ಕಡಲದ ದಡದಿಂದ ಮತ್ತೊಂದು ಕಡಲ ದಡಕ್ಕೆ ಹಾರುವ ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಎಕ್ಸ್‌ಕ್ಲ್ಯೂಸಿವ್ ವರದಿಯನ್ನು ಮಾಡಿದೆ. ಯಶಸ್ವಿ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಒಂದು ಮೇಲೆ ಮಾಡಿದ್ದು, ಈ ಮೇಲ್‌ನಲ್ಲಿ ನೋ ಆಬಕ್ಷನ್ ಸರ್ಟಿಫಿಕೆಟ್ ಕೋರಿದ್ದಾರೆ. ಯಶಸ್ವಿ ಜೈಸ್ವಾಲ್ ಮುಂದಿನ ದೇಶೀಯ ಟೂರ್ನಿಯಲ್ಲಿ ಗೋವಾ ಪರ ಆಡುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಎಂಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು "ಯಶಸ್ವಿ ಎನ್‌ಒಸಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್ ಅವರ ಆಪ್ತ ಮೂಲಗಳು ಸಹ ಇವರು ಮುಂಬೈನಿಂದ ಗೋವಾಕ್ಕೆ ಹಾರಲಿದ್ದಾರೆ ಎಂಬುದನ್ನು ಕನ್ಫರ್ಮ್ ಮಾಡಿದೆ.

ಕಡಲ ಪಯಣ
23 ವರ್ಷದ ಯಶಸ್ವಿ ಜೈಸ್ವಾಲ್ ದೊಡ್ಡ ಹೆಜ್ಜೆ ಇಡಲಿದ್ದಾರೆ. ಗೋವಾ ಕಳೆದ ಋತುವಿನಲ್ಲಿ ನಾಕೌಟ್ ಹಂತಕ್ಕೆ ಕ್ವಾಲಿಫೈ ಆಗಿತ್ತು. ಇವರು ಅರ್ಜುನ್ ತೆಂಡೂಲ್ಕರ್ ಹಾಗೂ ಸಿದ್ಧೇಶ್ ಲಾಡ್ ಅವರ ಹಾದಿಯನ್ನು ಹಿಡಿದಿದ್ದಾರೆ. ಬಿಸಿಸಿಐ ಎಲ್ಲ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡುವುದು ಕಡ್ಡಾಯ ಎಂದು ಮಾಡಿದಾಗ ಜೈಸ್ವಾಲ್ ಮುಂಬೈ ತಂಡದ ಪರ ಕಣಕ್ಕೆ ಇಳಿದಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದೇ ಇದ್ದಾಗ ದೇಶೀಯ ಟೂರ್ನಿಗಳಲ್ಲಿ ಭಾಗವಹಿಸುವಂತೆ ಆಟಗಾರರ ತಿಳಿಸಲಾಗಿತ್ತು. ಇದರಂತೆ ಯಶಸ್ವಿ ಜಮ್ಮು ಕಾಶ್ಮೀರ್ ವಿರುದ್ಧದ ಪಂದ್ಯದಲ್ಲಿ 4 ಹಾಗೂ 26 ರನ್ ಸಿಡಿಸಿ ನಿರಾಸೆ ಮೂಡಿಸಿದ್ದರು.
ಚಾಂಪಿಯನ್ಸ್ ಟ್ರೋಫಿ ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದಿದ್ದ ಜೈಸ್ವಾಲ್ ಬಳಿಕ, ಸ್ಥಾನ ಕಳೆದುಕೊಂಡರು. ಅಲ್ಲದೆ ಕಾಯ್ದಿರಿಸಿದ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಇವರಿಗೆ ಮುಂಬೈ ರಣಜಿ ಸೆಮಿಫೈನಲ್ ತಂಡದಲ್ಲಿ ಸ್ಥಾನ ಪಡೆದರು. ವಿದರ್ಭ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಇವರು ಅಂಗಳಕ್ಕೆ ಇಳಿದಿರಲಿಲ್ಲ. ಮುಂಬೈ ತಂಡದ ಪರ ಜೈಸ್ವಾಲ್ ಅಂಡರ್ 19 ಇದ್ದಾಗಿನಿಂದಲೂ ಆಡುತ್ತಿದ್ದಾರೆ. ಬಳಿಕ ಇವರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಾನ ನೀಡಲಾಯಿತು. ಇವರು ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಫಲವಾಗಿ ಇವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಯಿತು.

ಜೈಸ್ವಾಲ್ ಸಾಧನೆ
ಯಶಸ್ವಿ ಜೈಸ್ವಾಲ್ 19 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಹಾಗೂ 10 ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ವೇಳೆ ಇವರ ಸರಾಸರಿ 52 ಆಗಿದೆ. ಇನ್ನು ಜೈಸ್ವಾಲ್ 23 ಟಿ20 ಪಂದ್ಯಗಳಲ್ಲಿ 164ರ ಸರಾಸರಿಯಲ್ಲಿ 723 ರನ್ ಸಿಡಿಸಿದ್ದಾರೆ. ಇವರು ಐಪಿಎಲ್‌ನಲ್ಲೂ ಮಿಂಚು ಹರಿಸುತ್ತಿದ್ದು ರಾಜಸ್ಥಾನ ರಾಯಲ್ಸ್ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications