Yashasvi Jaiswal: ವಿರಾಟ್ ಕೊಹ್ಲಿ ದಾಖಲೆಗಳಿಗೆ ಅಪಾಯ: ಮೂರು ದಾಖಲೆಯ ಮೇಲೆ ಯಶಸ್ವಿ ಜೈಸ್ವಾಲ್ ಕಣ್ಣು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಮಾರ್ಚ್ 07 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್ ಅವರ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಈಗಾಗಲೇ ಸರಣಿಯಲ್ಲಿ ರನ್ ಮಹಲ್ ಕಟ್ಟಿರುವ ಯಶಸ್ವಿ ಮತ್ಯಾವ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂಬುದನ್ನು ಇಲ್ಲಿದೆ ನೋಡಿ.
ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗಿರುವ ವಿರಾಟ್ ಕೊಹ್ಲಿ ಅವರ ಅನುಸಪ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಸ್ಟಾರ್ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಬ್ಯಾಟಿಂಗ್ ವಿಭಾಗದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಕೆಲವು ಆಟಗಾರರು ಮಾತ್ರ ಸಿಕ್ಕ ಅವಕಾಶದಲ್ಲಿ ಅಬ್ಬರಿಸುವಲ್ಲಿ ವಿಫಲರಾದರೂ, ಆರಂಭಿಕ ಯಶಸ್ವಿ ಜೈಸ್ವಾಲ್ ಎದುರಾಳಿ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದಾರೆ.

ಈ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಆಟಗಾರ ಯಶಸ್ವಿ ಜೈಸ್ವಾಲ್.. ಇವರು ವಿರಾಟ್ ಕೊಹ್ಲಿಯ ಮೂರು ದೊಡ್ಡ ದಾಖಲೆಗಳ ಮುರಿಯುವ ಸನಿಹದಲ್ಲಿದ್ದಾರೆ. ಇದುವರೆಗೆ ಸರಣಿಯಲ್ಲಿ ಎರಡು ದ್ವಿಶತಕ ಸಿಡಿಸಿರುವ ಜೈಸ್ವಾಲ್, ಧರ್ಮಶಾಲಾದಲ್ಲಿ ಕೊಹ್ಲಿ ದಾಖಲೆಗಳನ್ನು ಮುರಿಯುವ ಮೂಲಕ ಉತ್ತಮ ಸಾಧನೆ ಮಾಡಬಹುದು.
ಮೊದಲ ದಾಖಲೆ
ಜೈಸ್ವಾಲ್ ಇದುವರೆಗೆ ಸರಣಿಯ ನಾಲ್ಕು ಪಂದ್ಯಗಳಲ್ಲಿ 93.57 ಸರಾಸರಿಯಲ್ಲಿ 655 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 2016 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 655 ರನ್ ಗಳಿಸಿದ್ದರು. ಈಗ ಇಬ್ಬರೂ ಆಟಗಾರರು ಸಮಬಲ ಸಾಧಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜೈಸ್ವಾಲ್ ಅವರು ಧರ್ಮಶಾಲಾ ಟೆಸ್ಟ್‌ನಲ್ಲಿ ಕೇವಲ ಒಂದು ರನ್ ಗಳಿಸುವ ಮೂಲಕ ಕೊಹ್ಲಿ ಅವರ ದಾಖಲೆಯನ್ನು ಮುರಿದು ಅವರಿಗಿಂತ ಮುಂದೆ ಹೋಗುತ್ತಾರೆ. ಅಂದರೆ ಪಂದ್ಯದಲ್ಲಿ ಖಾತೆ ತೆರೆದ ತಕ್ಷಣ ಕೊಹ್ಲಿ ದಾಖಲೆ ಉಡೀಸ್.
ಎರಡನೇ ದಾಖಲೆ
2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಸರಣಿಯಲ್ಲಿ ವಿರಾಟ್ ಕೊಹ್ಲಿ 692 ರನ್ ಗಳಿಸಿದ್ದರು, ಇದು ಕೊಹ್ಲಿಯ ಅತ್ಯುತ್ತಮ ಪ್ರದರ್ಶನ. ಇದೀಗ ಜೈಸ್ವಾಲ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನದ ದಾಖಲೆಯನ್ನು ಮುರಿಯಲು ಕೇವಲ 38 ರನ್‌ಗಳ ದೂರದಲ್ಲಿದ್ದಾರೆ. ಜೈಸ್ವಾಲ್ ಅವರು ಧರ್ಮಶಾಲಾ ಟೆಸ್ಟ್‌ನಲ್ಲಿ 38 ರನ್ ಗಳಿಸಿದ ತಕ್ಷಣ ಕೊಹ್ಲಿಯ ಈ ದಾಖಲೆಯನ್ನು ಮುರಿಯಲಿದ್ದಾರೆ.

ಮೂರನೇ ದಾಖಲೆ
35 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು 26 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ಇದುವರೆಗೆ 8 ಟೆಸ್ಟ್‌ಗಳನ್ನು ಆಡಿದ್ದಾರೆ, ಅದರಲ್ಲಿ ಅವರು ಕೊಹ್ಲಿಯಷ್ಟು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಇದೀಗ ಕೊಹ್ಲಿಯನ್ನು ಹಿಂದಿಕ್ಕಲು ಜೈಸ್ವಾಲ್‌ಗೆ ಕೇವಲ 1 ಸಿಕ್ಸರ್ ಬೇಕಾಗಿದೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂದು ಸಿಕ್ಸರ್ ಬಾರಿಸಿದ ತಕ್ಷಣ, ಕೊಹ್ಲಿಗಿಂತ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಆಗುತ್ತಾರೆ. ಅಂದರೆ ಕೊಹ್ಲಿ 113 ಟೆಸ್ಟ್‌ಗಳಲ್ಲಿ ಮಾಡಲಾಗದ್ದನ್ನು ಜೈಸ್ವಾಲ್ 9ನೇ ಟೆಸ್ಟ್‌ನಲ್ಲಿ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications