For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್‌ ಅವರ 300 ರನ್‌ ದಾಖಲೆ ಈ ಯುವ ಆಟಗಾರ ಮುರಿಯಬಲ್ಲರು: ಕೈಫ್

ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ರಾಷ್ಟ್ರ ರಾಜ್ಯಧಾನಿ ನವದೆಹಲಿಯ ಅರುಣ್‌ ಜೇಟ್ಲಿ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್‌ಗಳು ಮೂರಂಕಿ ಮುಟ್ಟಿ ಸಾಧನೆ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ ಬಿಗ್ ಇನಿಂಗ್ಸ್ ಕಟ್ಟಿ ಮಿಂಚಿದರು. ಇವರು ದ್ವಿಶತಕದಿಂದ ವಂಚಿತರಾದರು. ಇದೇ ಇನಿಂಗ್ಸ್‌ನಲ್ಲಿ ಭಾರತದ ನಾಯಕ ಶುಭಮನ್‌ ಗಿಲ್‌ ಶತಕ ಬಾರಿಸಿ ಅಬ್ಬರಿಸಿದರು. ಪರಿಣಾಮ ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 518 ರನ್‌ ಸೇರಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಅವರ ಬ್ಯಾಟಿಂಗ್ ಕಂಡು ಮಾಜಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ದೊಡ್ಡ ಭವಿಷ್ಯ ನುಡಿದಿದ್ದಾರೆ. ಆರಂಭಿಕ ಆಟಗಾರ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುವಲ್ಲಿ ವಿಫಲರಾದರೂ ಸಹ ಇವರ ಆಟವನ್ನು ಕೈಫ್ ಕೊಂಡಾಡಿದ್ದಾರೆ.

Yashasvi Jaiswal will break Sehwag s 300-run record Mohammad Kaif s big prediction

ಯಶಸ್ವಿ ಜೈಸ್ವಾಲ್‌ ಸೆಹ್ವಾಗ್ ಅವರ 300 ರನ್ ದಾಖಲೆಯನ್ನು ಮುರಿಯುತ್ತಾರೆ ಎಂಬ ದೊಡ್ಡ ಭವಿಷ್ಯವನ್ನು ಕೈಫ್ ನುಡಿದಿದ್ದಾರೆ. ಶನಿವಾರ, ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ಕೈಫ್‌ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಯಶಸ್ವಿ ಅವರಿಗೆ ಹೊಸ ದಾಖಲೆ ನಿರ್ಮಿಸುವ ತಾಳ್ಮೆ ಇರುವುದಾಗಿ ತಿಳಿಸಿದ್ದಾರೆ. ಇವರು ಆಡಿದ ಮೊದಲ 26 ಪಂದ್ಯಗಳನ್ನು ನೋಡಿದಾಗ ಅಂಕಿ ಅಂಶಗಳು ಸಚಿನ್ ತೆಂಡೂಲ್ಕರ್ ಹಗೂ ವಿರಾಟ್ ಕೊಹ್ಲಿ ಅವರಮತೆಯೇ ಉತ್ತಮವಾಗಿವೆ. ಇವರು ಇನ್ನು ಉತ್ತಮ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ಗಳಿಸುವ ಮೂಲಕ, ಶತಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಸೆಹ್ವಾಗ್‌ ಅವರ 300 ರನ್‌ಗಳ ದಾಖಲೆಯನ್ನು ಇವರು ಮುರಿಯಬಲ್ಲರು ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಪರ ಇಬ್ಬರು ಬ್ಯಾಟರ್‌ಗಳು ಮಾತ್ರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್‌ ಪಾಕಿಸ್ತಾನ ವಿರುದ್ಧ 2004ರಲ್ಲಿ 309 ರನ್‌ ಬಾರಿಸಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ 2008ರಲ್ಲೂ 319 ರನ್‌ ಬಾರಿಸಿ ಮಿಂಚಿದ್ದರು. ಇನ್ನು ಕರ್ನಾಟಕದ ಸ್ಟಾರ್ ಆಟಗಾರ ಕರುಣ್‌ ನಾಯರ್ ಸಹ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ 300ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಜೈಸ್ವಾಲ್ ಸಾಧನೆ

24 ವರ್ಷದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್‌ ಭಾರತದ ಪರ 25 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 49.88ರ ಸರಾಸರಿಯಲ್ಲಿ 2245 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 6 ಶತಕ ಹಾಗೂ 12 ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇನ್ನು 2 ಬಾರಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಕಮಾಲ್ ಪ್ರದರ್ಶನ ನೀಡಲು ಇವರು ತುದಿಗಾಲಿನಲ್ಲಿ ನಿಂತಿದ್ದಾರೆ.

Story first published: Sunday, October 12, 2025, 11:04 [IST]
Other articles published on Oct 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+