For Quick Alerts
ALLOW NOTIFICATIONS  
For Daily Alerts
 

"ಆಸ್ಟ್ರೇಲಿಯಾದ ಆರನೇ ಬೌಲರ್‌ ಸ್ನಿಕೋ": ಔಟ್‌ ವಿವಾದದ ಬಗ್ಗೆ ಮಾಜಿ ಆಟಗಾರರ ಹೇಳಿಕೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡ ನಿರಾಸೆ ಅನುಭವಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ತಂಡದ ಬ್ಯಾಟಿಂಗ್ ಪ್ರದರ್ಶನ ಒಂದು ಕಡೆ ಎದ್ದು ಕಂಡರೆ, ಇನ್ನೊಂದು ಕಡೆಯಲ್ಲಿ ಭಾರತದ ವಿರುದ್ಧ ಮೂರನೇ ಅಂಪೈರ್‌ ನೀಡಿದ ತೀರ್ಪು ಎದ್ದು ಕಾಣುತ್ತಿದೆ. ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್‌ ಅವರನ್ನು ಥರ್ಡ್‌ ಅಂಪೈರ್‌ ಔಟ್‌ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಭಾರತ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಡ್ರಾದ ಆಸೆಯನ್ನು ಕಾಣುತ್ತಿತ್ತು ಎಂಬುದಕ್ಕೆ ಯಶಸ್ವಿ ಜೈಸ್ವಾಲ್‌ ಪ್ರಮುಖ ಕಾರಣ. ಇವರು ಸಿಕ್ಕ ಅವಕಾಶದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಆ ಒಂದು ಕೆಟ್ಟ ತೀರ್ಪು ಎಲ್ಲರ ಮುಖದಲ್ಲಿ ಚಿಂತೆಯ ಗೆರೆಗಳು ಏಳುವಂತೆ ಮಾಡಿವೆ.

Yashasvi Jaiswal s Controversial Dismissal via Snickometer Sparks Debate in Melbourne Test

ಆಗಿದ್ದೇನು?

ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದಾಗ ಯಶಸ್ವಿ ಜೈಸ್ವಾಲ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕ್ಯಾಚ್ ಔಟ್ ಎಂದು ಮೂರನೇ ಅಂಪೈರ್‌ ತೀರ್ಪನ್ನು ನೀಡಿದರು. ಅವರು ಔಟಾದ ರೀತಿ ಚರ್ಚೆಯ ಆರಂಭವಾಯಿತು. ಸ್ನಿಕೋಮೀಟರ್ ಬಳಸಿ ನಿರ್ಧಾರ ತೆಗೆದುಕೊಳ್ಳ ಬೇಕಾಗಿತ್ತು. ಆದರೆ ಸ್ನಿಕೋ ಮೀಟರ್‌ನಲ್ಲಿ ಈ ವೇಳೆ ಯಾವುದೇ ಬಗ್ಗೆ ಸ್ಪಷ್ಟತೆ ಸಿಗದೇ ಇದಲ್ಲಿ ಮತ್ತೆ ರಿಪ್ಲೇ ಮಾಡಿ ನೋಡಿ, ಚೆಂಡು ಬ್ಯಾಟ್‌ಗೆ ಬಡೆದಿದೆ ಎಂದು ಅಂಪೈರ್‌ ಘೋಷಿಸಿದರು.

ಯಶಸ್ವಿ ಜೈಸ್ವಾಲ್‌ ಅಷ್ಟೇ ಅಲ್ಲ ಆಕಾಶ್ ದೀಪ್‌ ಜೊತೆಗೂ ಇದೇ ರೀತಿ ಆಯಿತು. ಆಕಾಶ್‌ ದೀಪ್‌, ಬೋಲೆಂಡ್‌ ಎಸೆತವನ್ನು ಡಿಫೆನ್ಸ್‌ ಮಾಡಲು ಬ್ಯಾಟ್ ಮುಂದೆ ಇಟ್ಟರು. ಆದರೆ ಚೆಂಡು ಪ್ಯಾಡ್‌ಗೆ ಬಡೆದು ಫಾರ್ವಡ್‌ ಶಾರ್ಟ್‌ ಲೆಗ್ ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಟ್ರಾವಿಸ್ ಹೆಡ್ ಕೈ ಸೇರಿತು. ಅಂಪೈರ್‌ ನಾಟೌಟ್ ಎಂದು ನೀಡಿದರು ಸಹ, ಮೂರನೇ ಅಂಪೈರ್‌ ಔಟ್ ಎಂದು ತೀರ್ಪು ನೀಡಿದರು. ಈ ವಿಕೆಟ್‌ಗಳು ವಿವಾದಕ್ಕೆ ಕಾರಣವಾದವು.

ಗವಾಸ್ಕರ್ ಅಸಮಾಧಾನ

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಸುನಿಲ್ ಗವಾಸ್ಕರ್, ಮೂರನೇ ಅಂಪೈರ್‌ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು. ಸ್ನಿಕೋಮೀಟರ್‌ನಲ್ಲಿ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಈ ನಿರ್ಧಾರವು ಸಂಪೂರ್ಣವಾಗಿ ತಪ್ಪು. ದೀಪ್ ದಾಸ್‌ಗುಪ್ತಾ ಮತ್ತು ಇರ್ಫಾನ್ ಪಠಾಣ್ ಕೂಡ ಈ ನಿರ್ಧಾರವನ್ನು 'ತಪ್ಪು' ಎಂದು ತಿಳಿಸಿದರು. ಆದರೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಮಾತ್ರ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ತಂತ್ರಜ್ಞಾನದಿಂದ ಆದ ಎಡವಟ್ಟನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ, ಸ್ನಿಕೋ ಆಸ್ಟ್ರೇಲಿಯಾದ ಆರನೇ ಬೌಲರ್ ಎಂದು ಹೇಳಿದರು. ಇಂದು ಸ್ನಿಕೋಮೀಟರ್ ಆಸ್ಟ್ರೇಲಿಯಾದ ಆರನೇ ಬೌಲರ್' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Story first published: Monday, December 30, 2024, 18:38 [IST]
Other articles published on Dec 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+