Yashasvi Jaiswal: ಆಸ್ಟ್ರೇಲಿಯಾ ಮೊತ್ತ ಹಿಗ್ಗಿಸುವಲ್ಲಿ ನೆರವಾದ ಯಶಸ್ವಿ ಜೈಸ್ವಾಲ್ ತಪ್ಪುಗಳು
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ರೋಚಕತೆ ಹೆಚ್ಚಿಸಿದೆ. ಈ ವೇಳೆ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡಿವೆ. ಈ ವೇಳೆ ಟೀಮ್ ಇಂಡಿಯಾದ ಬ್ಯಾಟರ್‌ಗಳು ಕರಾರುವಕ್ ದಾಳಿ ನಡೆಸಿ ಎದುರಾಳಿಗಳನ್ನು ಕಟ್ಟಿ ಹಾಕಿದರೆ, ಆಸ್ಟ್ರೇಲಿಯಾದ ಬೌಲರ್‌ಗಳು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ತಂಡವನ್ನು ಇನ್ನು ಬೇಗನೇ ಟೀಮ್ ಇಂಡಿಯಾ ಕಟ್ಟಿ ಹಾಕಬಹುದಿತ್ತು. ಆದರೆ ಯುವ ಆಟಗಾರ ಮಾಡಿದ ಆ ತಪ್ಪಿನಿಂದ ಟೀಮ್ ಇಂಡಿಯಾ ಈ ಸ್ಥಿತಿಗೆ ಬಂದು ನಿಂತಿದೆ.
ಮೆಲ್ಬೋರ್ನ್ ಪಿಚ್ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತಿದೆ. ಈ ಪಂದ್ಯದ ವಿಶೇಷತೆ ಅಂದರೆ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಈ ವೇಳೆ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಟೀಮ್ ಇಂಡಿಯಾ ಇನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸಿ, ತಾನು ಸಹ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಬಹುದಿತ್ತು. ಆದರೆ ಯಶಸ್ವಿ ಜೈಸ್ವಾಲ್ ಮಾಡಿದ ಎಡವಟ್ಟು ತಂಡಕ್ಕೆ ಮುಳವಾಯಿತು.

ಟೀಮ್ ಇಂಡಿಯಾದ ಸ್ಟಾರ್ ಫೀಲ್ಡರ್‌ಗಳಲ್ಲಿ ಕಾಣಿಸಿಕೊಳ್ಳುವ ಯಶಸ್ವಿ ತನ್ನ ಅಕ್ಕ ಪಕ್ಕದಲ್ಲಿ ಬರುವ ಯಾವುದೇ ಚೆಂಡುಗಳನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಒಂದಲ್ಲಾ, ಎರಡಲ್ಲಾ, ಮೂರು ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡರು. ಇದರ ನೇರ ಪರಿಣಾಮ ಟೀಮ್ ಇಂಡಿಯಾದ ಗುರಿಯ ಮೇಲೆ ಬಿದ್ದಿದೆ. ಹಾಗಿದ್ದರೆ ಯಶಸ್ವಿ ಯಾರ ಬೌಲಿಂಗ್‌ನಲ್ಲಿ, ಯಾರ ಯಾರ ಕ್ಯಾಚ್ ಕೈ ಬಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಖವಾಜಾಗೆ ಜೀವದಾನ
ಯಶಸ್ವಿ ಜೈಸ್ವಾಲ್ ಮೊದಲ ಕ್ಯಾಚ್‌ನ್ನು ಸ್ಲಿಪ್‌ನಲ್ಲಿ ಬಿಟ್ಟರು. ಈ ವೇಳೆ ಆಸೀಸ್ ತಂಡದ ಬ್ಯಾಟರ್ ಉಸ್ಮಾನ್ ಖವಾಜ ನೀಡಿದ್ದ ಕ್ಯಾಚ್ ಕೈ ಚೆಲ್ಲಿದರು. ಖವಾಜಾ ಬುಮ್ರಾ ಎಸೆತವನ್ನು ತಪ್ಪಾಗಿ ಗುರುತಿಸಿದ್ದರಿಂದ ಚೆಂಡು ಇವರ ಬ್ಯಾಟ್‌ನ ಅಂಚಿಗೆ ತಾಗಿ ಸ್ಲಿಪ್‌ನಲ್ಲಿ ಯಶಸ್ವಿ ಕೈಗೆ ಹೋಯಿತು. ಈ ಕ್ಯಾಚ್‌ನ್ನು ಯಶಸ್ವಿ ಕೈ ಚೆಲ್ಲಿದರು.
ಕಾಡಿದ ಲಂಬುಶೇನ್
ಮಾರ್ನಸ್ ಲಂಬುಶೇನ್ ಅವರು ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ವೇಳೆ ಆಕಾಶ್ ದೀಪ್ ಎಸೆದ 40ನೇ ಓವರ್‌ನ 2 ಎಸೆತದಲ್ಲಿ ಲಂಬುಶೇನ್ ಬ್ಯಾಟ್ ಆಚೆಗೆ ತಾಗಿ ಸ್ಲಿಪ್‌ನಲ್ಲಿದ್ದ ಯಶಸ್ವಿ ಕೈಗೆ ಹೋಯಿತು. ಆದರೆ ಯಶಸ್ವಿ ರೆಗ್ಯೂಲೇಷನ್ ಕ್ಯಾಚ್‌ನ್ನು ಡ್ರಾಪ್ ಮಾಡಿ ಕೈ ಚೆಲ್ಲಿದರು. ಲಂಬುಶೇನ್ ಆಗ 46 ರನ್ ಸಿಡಿಸಿದ್ದರು. ಬಳಿಕ ಇವರು 70 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದರು.
ಪ್ಯಾಟ್ ಕಮಿನ್ಸ್
ಇನ್ನು ಇಷ್ಟಕ್ಕೂ ಬುದ್ಧಿ ಕಲಿಯದ ಯಶಸ್ವಿ ಜೈಸ್ವಾಲ್ ಅವರು ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಮತ್ತೊಂದು ಜೀವದಾನ ನೀಡಿದರು. ಕಮಿನ್ಸ್, ಜಡೇಜಾ ಎಸೆತದಲ್ಲಿ ಡಿಫೆನ್ಸ್ ಮಾಡಲು ಹೋದರು. ಆಗ ಶಾರ್ಟ್ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈ ಚೆಲ್ಲಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications