Yashasvi Jaiswal: ಶತಕ ಬಾರಿಸೋದು ಅಷ್ಟೇ ಅಲ್ಲ, ಕ್ಯಾಚ್‌ಗಳನ್ನು ಹಿಡಿಯಬೇಕು...
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಇವರ ಅಮೋಘ ಶತಕದ ಬಲದಿಂದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 471 ರನ್‌ಗಳಿಸಲು ಸಾಧ್ಯವಾಯಿತು. ಆದರೆ ಈ ಖುಷಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದಂತೆ ಯಶಸ್ವಿ ಜೈಸ್ವಾಲ್ ಅವರಿಗೆ ನಾಲ್ಕು ದಿನ ಕಹಿಯಾಗಿದೆ. ಇದಕ್ಕೆ ಕಾರಣ ಎರಡನೇ ಇನಿಂಗ್ಸ್‌ನಲ್ಲಿ ರನ್ ಬಾರದೆ ಇರುವುದು, ಇದನ್ನು ಬಿಟ್ಟು ಯಶಸ್ವಿ ಜೈಸ್ವಾಲ್ ಸಾಲು ಸಾಲು ಕ್ಯಾಚ್‌ಗಳನ್ನು ಬಿಟ್ಟು ಕೈ ಸುಟ್ಟುಕೊಂಡಿದ್ದಾರೆ.
ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಶುಕ್ರವಾರ ಆರಂಭವಾಯಿತು. ಈ ವೇಳೆ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಕ್ಕೆ ಆರಂಭಿಕ ಯಶಸ್ವಿ ಜೈಸ್ವಾಲ್ ಆಧಾರವಾದರು. ಈ ವೇಳೆ ಯಶಸ್ವಿ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ ಶತಕ ಬಾರಿಸಿ ತಂಡಕ್ಕೆ ಆಧಾರವಾದ್ರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಇವರು ಜಸ್ಟ್ 4 ರನ್‌ಗಳಿಗೆ ಆಟ ಮುಗಿಸಿದರು. ಆದರೆ ಫೀಲ್ಡಿಂಗ್ ಮಾಡುವಾಗ ಸಾಲು ಸಾಲು ಕ್ಯಾಚ್‌ಗಳನ್ನು ಬಿಟ್ಟು ಕೈ ಸುಟ್ಟುಕೊಂಡರು.

ಇಂಗ್ಲೆಂಡ್ ಮೊದಲ ಇನಿಂಗ್ಸ್ ಆರಂಭಿಸಿದಾಗ ಆರಂಭದಲ್ಲೇ ಯಶಸ್ವಿ ಸಪ್ಪೆ ಮುಖ ಮಾಡಲು ಆರಂಭಿಸಿದರು. ಜಸ್ಪ್ರೀತ್ ಬುಮ್ರಾ ಇನಿಂಗ್ಸ್‌ನ ಐದನೇ ಓವರ್‌ನ ಐದನೇ ಎಸೆತದಲ್ಲಿ ಬೆನ್ ಡಕೆಟ್ ಕೆಣಕಿ ಗಲ್ಲಿ ಪಕ್ಕದಿಂದ ಚೆಂಡು ಹೋಗಿದೆ. ಈ ಕ್ಯಾಚ್‌ನ್ನು ಬಿಟ್ಟ ಜೈಸ್ವಾಲ್ ಕೈ ಸುಟ್ಟುಕೊಂಡರು. ಇನ್ನು ಬೆನ್ ಡಕೆಟ್ ಮೊದಲ ಇನಿಂಗ್ಸ್‌ನಲ್ಲಿ 62 ರನ್ ಬಾರಿಸಿದರು.
ಇನ್ನು ಇನಿಂಗ್ಸ್‌ನ 31ನೇ ಓವರ್‌ನ್ನು ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದರು. ಈ ವೇಳೆ ಓವರ್‌ನ ಕೊನೆಯ ಎಸೆತದಲ್ಲಿ ಓಲಿ ಪೋಪ್ ಬ್ಯಾಂಕ್ ಆಫ್ ಲೆಂಥ್ ಡಿಲಿವರಿಯನ್ನು ತಪ್ಪಾಗಿ ಗ್ರಹಿಸಿ ಕಟ್ ಮಾಡಿದರು. ಆಗ ಮೂರನೇ ಸ್ಲೀಪ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್ ಸುಲಭದ ಕ್ಯಾಚ್‌ನ್ನು ಕೈ ಚೆಲ್ಲಿದರು. ಆಗ ಓಲಿ ಪೋಪ್ 60 ರನ್ ಬಾರಿಸಿದ್ದರು. ಮುಂದೆ ಪೋಪ್ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದರು. ಇನ್ನು ಇದೇ ಇನಿಂಗ್ಸ್‌ನಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹ್ಯಾರಿ ಬ್ರೂಕ್ ಸಹ ಜೀವದಾನ ಸಿಕ್ಕಿದೆ. ಇನಿಂಗ್ಸ್‌ನ 85ನೇ ಓವರ್‌ನ್ನು ಬುಮ್ರಾ ಮಾಡಿದರು. ಈ ಓವರ್‌ನ ಕೊನೆಯ ಎಸೆಯದಲ್ಲಿ ಬ್ರೂಕ್ ನೀಡಿದ ಕ್ಯಾಚ್‌ನ್ನು ಗಲ್ಲಿಯಲ್ಲಿದ್ದ ಯಶಸ್ವಿ ಕೈ ಚೆಲ್ಲಿದರು.
ಎರಡನೇ ಇನಿಂಗ್ಸ್‌ನಲ್ಲೂ ಕೈಗೆ ಸಿಗದ ಬೌಲ್
ಇನ್ನು ಯಶಸ್ವಿ ಜೈಸ್ವಾಲ್ ಅವರ ಕಳಪೆ ಫೀಲ್ಡಿಂಗ್ ಎರಡನೇ ಇನಿಂಗ್ಸ್‌ನಲ್ಲೂ ಮುಂದುವರೆದಿದೆ. 39ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬೆನ್ ಡಕೆಟ್ 97 ರನ್ ಬಾರಿಸಿದ್ದಾಗ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್‌ನತ್ತ ಚೆಂಡನ್ನು ಬೀಸಿದರು. ಓಡಿ ಬಂದು ಯಶಸ್ವಿ ಜೈಸ್ವಾಲ್ ಚೆಂಡಿನ ಕೆಳಗೆ ಬಂದರು. ಆದರೆ ಕ್ಯಾಚ್‌ನ್ನು ಹಿಡಿಯುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications