Year Ender 2023: ಹೇಗಿತ್ತು ಟೀಮ್ ಇಂಡಿಯಾ ಪಾಲಿಗೆ ಈ ವರ್ಷ? ಇಲ್ಲಿದೆ ವರ್ಷದ ಕಂಪ್ಲೀಟ್ ಚಿತ್ರಣ
ಟೀಮ್ ಇಂಡಿಯಾ ಈ ಬಾರಿ ಏಕದಿನ ವಿಶ್ವಕಪ್ ಫೈನಲ್, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡರೂ ಪ್ರಸಕ್ತ ವರ್ಷ ಟೀಮ್ ಇಂಡಿಯಾ ಉತ್ತಮ ಸಾಧನೆ ನೀಡಿದೆ. ಟೀಮ್ ಇಂಡಿಯಾ ಸಂಘಟಿತ ಆಟಕ್ಕೆ ವಿಶ್ವವೇ ತಲೆ ಬಾಗಿದೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ ಲೀಗ್ ಹಂತ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ವರ್ಷವಿಡೀ ಬಲಿಷ್ಠ ಪ್ರದರ್ಶನ ನೀಡಿದೆ. ಈ ಅವಧಿಯಲ್ಲಿ ಹೊಸ ಆಟಗಾರರಿಗೆ ವಿವಿಧ ಸ್ವರೂಪಗಳಲ್ಲಿ ನಾಯಕತ್ವದ ಅವಕಾಶವೂ ದೊರೆಯಿತು. 2023ರಲ್ಲಿ ಭಾರತ ಎಲ್ಲ ಮಾದರಿಯಲ್ಲೂ ಮೇಲುಗೈ ಸಾಧಿಸಿತ್ತು.

45 ಪಂದ್ಯಗಳನ್ನು ಗೆದ್ದಿರುವ ಭಾರತ
2023ರಲ್ಲಿ ಟೀಂ ಇಂಡಿಯಾ ಒಟ್ಟು 66 ಪಂದ್ಯಗಳನ್ನು ಆಡಿದೆ. ಇದರಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳು ಸೇರಿವೆ. ಈ ಅವಧಿಯಲ್ಲಿ ಭಾರತ 45 ಪಂದ್ಯಗಳನ್ನು ಗೆದ್ದಿದೆ. ಆದರೆ 17 ಪಂದ್ಯಗಳಲ್ಲಿ ಸೋಲು ಕಂಡಿದೆ. 2 ಪಂದ್ಯಗಳು ಕೂಡ ಡ್ರಾ ಆಗಿವೆ.
ಏಕದಿನ ಸ್ವರೂಪದಲ್ಲಿ ಭಾರತವು 35 ಪಂದ್ಯಗಳನ್ನು ಆಡಿದೆ ಮತ್ತು ಈ ಅವಧಿಯಲ್ಲಿ 27 ಪಂದ್ಯಗಳನ್ನು ಗೆದ್ದಿದೆ. ಟೀಮ್ ಇಂಡಿಯಾ ಈ ವರ್ಷ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3ರಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಭಾರತ 23 ಟಿ20 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ಈ ಮಾದರಿಯಲ್ಲಿ 7 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.

ಶುಭಮನ್ ಆಟ ಬೊಂಬಾಟ
ಈ ವರ್ಷ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್ 3 ಆಟಗಾರರ ಪಟ್ಟಿಯಲ್ಲಿ, ಶುಭಮನ್ ಗಿಲ್ ಅಗ್ರಸ್ಥಾನದಲ್ಲಿಯೇ ಉಳಿದರು. 48 ಪಂದ್ಯಗಳನ್ನು ಆಡಿರುವ ಶುಭಮನ್ 2154 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 7 ಶತಕ ಮತ್ತು 10 ಅರ್ಧ ಶತಕಗಳನ್ನು ಗಳಿಸಿದರು. ಇದರಲ್ಲಿ ದ್ವಿಶತಕ ಕೂಡ ಸೇರಿದೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ 35 ಪಂದ್ಯಗಳಲ್ಲಿ 2048 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ 35 ಪಂದ್ಯಗಳಲ್ಲಿ 1800 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಜಡೇಜಾ ಮಿಂಚು
ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ. ಜಡೇಜಾ 35 ಪಂದ್ಯಗಳಲ್ಲಿ 66 ವಿಕೆಟ್ ಪಡೆದಿದ್ದಾರೆ. ಕುಲದೀಪ್ ಯಾದವ್ 63 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕುಲದೀಪ್ 39 ಪಂದ್ಯಗಳನ್ನು ಆಡಿದ್ದಾರೆ. ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನದಲ್ಲಿದ್ದಾರೆ. ಸಿರಾಜ್ 34 ಪಂದ್ಯಗಳಲ್ಲಿ 60 ವಿಕೆಟ್ ಕಬಳಿಸಿದ್ದಾರೆ. ಮೊಹಮ್ಮದ್ ಶಮಿ 56 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications