For Quick Alerts
ALLOW NOTIFICATIONS  
For Daily Alerts
 

Year Ender 2023: ಈ ವರ್ಷ ಜಡ್ಡು ಭಲ್ಲೇ ಭಲ್ಲೇ.. ಕುಲ್ದೀಪ್, ಸಿರಾಜ್‌ ಕಮಾಲ್

ಪ್ರಸಕ್ತ ವರ್ಷ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನದ ಹಿಂದೆ ಸ್ಟಾರ್ ಆಟಗಾರರ ಪ್ರಮುಖ ಪಾತ್ರ ನೀಡಿದ್ದಾರೆ. ಹಲವು ಆಟಗಾರರು ಈ ವರ್ಷ ಸಿಕ್ಕ ಅವಕಾಶದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕೊಡುಗೆ ನೀಡಿದ್ದಾರೆ. 2023 ವರ್ಷವು ಅವರಿಗೆ ತುಂಬಾ ಒಳ್ಳೆಯದು. 2023ರಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಅವರು ಈ ವರ್ಷ ಭರ್ಜರಿ ಲಯದಲ್ಲಿದ್ದು 66 ವಿಕೆಟ್ ಪಡೆದರು. ಈ ವರ್ಷ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 3 ಬೌಲರ್‌ಗಳ ಪಟ್ಟಿಯಲ್ಲಿ ಇಬ್ಬರು ಸ್ಪಿನ್ನರ್‌ಗಳು ಮತ್ತು ಒಬ್ಬ ವೇಗದ ಬೌಲರ್ ಇದ್ದಾರೆ.

Year Ender 2023: Jadeja is the highest wicket taker this year

ಜಡೇಜಾ 2023 ರಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 35 ಪಂದ್ಯಗಳಲ್ಲಿ 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಮೂರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 42 ರನ್‌ಗಳಿಗೆ 7 ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಸಾಧನೆ. ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ.

ಈ ವರ್ಷ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕುಲದೀಪ್ ಯಾದವ್ ಎರಡನೇ ಸ್ಥಾನದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳಿರುವ ಕುಲ್ದೀಪ್‌ ಹಿಂತಿರುಗಿ ನೋಡಲೇ ಇಲ್ಲ. ಕಳೆದ ವರ್ಷವಂತೂ ಕುಲ್ದೀಪ್ ಮುಟ್ಟಿದ್ದೆಲ್ಲಾ ಚಿನ್ನ. ಕುಲದೀಪ್ 39 ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ 17 ರನ್‌ಗಳಿಗೆ 5 ವಿಕೆಟ್‌ ಕಬಳಿಸಿದ್ದು ಅವರ ಅತ್ಯುತ್ತಮ ಸಾಧನೆ. ಕುಲದೀಪ್ ಎರಡು ಬಾರಿ ಐದು ವಿಕೆಟ್ ಪಡೆದಿದ್ದಾರೆ.

Year Ender 2023: Jadeja is the highest wicket taker this year

ಈ ವರ್ಷ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ. ಸಿರಾಜ್ 34 ಪಂದ್ಯಗಳಲ್ಲಿ 60 ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ 21 ರನ್‌ ನೀಡಿ 6 ವಿಕೆಟ್‌ ಪಡೆದದ್ದು ಅವರ ಅತ್ಯುತ್ತಮ ಸಾಧನೆ ಆಗಿದೆ. ಮೊಹಮ್ಮದ್ ಶಮಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಶಮಿ 23 ಪಂದ್ಯಗಳಲ್ಲಿ 56 ವಿಕೆಟ್ ಪಡೆದಿದ್ದಾರೆ. ಈ ವರ್ಷ ಅವರು ಕಡಿಮೆ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ ಪ್ರಭಾವಿ ಬೌಲರ್. ಅವರು 7 ಪಂದ್ಯಗಳಲ್ಲಿ 41 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅಶ್ವಿನ್. ಕುಲದೀಪ್ ಏಕದಿನದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕುಲ್ದೀಪ್ 30 ಪಂದ್ಯಗಳಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅರ್ಷದೀಪ್ ಸಿಂಗ್ ಟಿ20 ಮಾದರಿಯಲ್ಲಿ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಅರ್ಷದೀಪ್ 21 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ.

Story first published: Friday, December 29, 2023, 18:34 [IST]
Other articles published on Dec 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+