For Quick Alerts
ALLOW NOTIFICATIONS  
For Daily Alerts
 

PKL 2025: ಬೆಂಗಳೂರು ಬುಲ್ಸ್‌ "ಸೂಪರ್" ಆಟ: ಅಂಕ ಪಟ್ಟಿಯಲ್ಲಿ ಬಡ್ತಿ

ಜೈಪುರ: ನಾಯಕ ಯೋಗೇಶ್‌ ಹಾಗೂ ಸ್ಟಾರ್ ಆಟಗಾರ ಆಕಾಶ್ ಶಿಂದೆ ಅವರ ಭರ್ಜರಿ ಆಟದ ನೆರವಿನಿಂದ 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ 28-24 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಬೆಂಗಳೂರು ತಂಡ ಆಡಿದ 9 ಪಂದ್ಯಗಳಲ್ಲಿ 5 ಜಯ, 4 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್‌ ಅಮೋಘ ಆಟದ ಪ್ರದರ್ಶನ ನೀಡಿತು. ಆರಂಭದಲ್ಲಿ ಕೊಂಚ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ ಬುಲ್ಸ್‌, ನಂತರ ಅಂಕಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿತು. ಈ ಅವಧಿಯ ಆಟದಲ್ಲಿ ಬುಲ್ಸ್‌ ತಂಡದ ಸ್ಟಾರ್ ಆಟಗಾರರು ಅಬ್ಬರದ ಪ್ರದರ್ಶನ ನೀಡಿದ್ದರಿಂದ ಬೆಂಗಳೂರು ಆಲೌಟ್ ಆಗುವದರಿಂದ ಬಚಾವ್ ಆಯಿತು. ಈ ಅವಧಿಯಲ್ಲಿ ಆಕಾಶ್ ಶಿಂದೆ ಅಮೋಘ ದಾಳಿಯನ್ನು ನಡೆಸಿ ಅಬ್ಬರಿಸಿದರು. ಇವರು ಈ ಅವಧಿಯಲ್ಲಿ ಸೂಪರ್ ರೈಡ್‌ ದಾಳಿ ನಡೆಸಿ ಅಬ್ಬರಿಸಿದರು. ಈ ಅವಧಿಯಲ್ಲಿ ಬೆಂಗಳೂರು 17-13 ಅಂಕಗಳಿಂದ ಗುಜರಾತ್ ಜೈಂಟ್ಸ್‌ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು.

Yogesh and Akash Shinde s heroics secure a massive win for Bengaluru Bulls

ಎರಡನೇ ಅವಧಿಯ ಆರಂಭದಲ್ಲಿ ಬುಲ್ಸ್, ಗುಜರಾತ್ ಟೈಟನ್ಸ್‌ ವಿರುದ್ಧ ಸೂಪರ್ ಟ್ಯಾಕಲ್‌ ಮಾಡಿ ಅಂಕಗಳ ಅಂತರವನ್ನು ಹೆಚ್ಚಿಸಿಕೊಂಡಿತು. ಈ ಅವಧಿಯಲ್ಲಿ ಬುಲ್ಸ್ ಬ್ಯಾಕ್‌ ಟು ಬ್ಯಾಕ್‌ ಸೂಪರ್‌ ಟ್ಯಾಕಲ್‌ ಮಾಡಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಅಲ್ಲದೆ ಈ ವೇಳೆ ಯಾವ ತಂಡವೂ ಆಲೌಟ್ ಆಗಲಿಲ್ಲ. ಟೂರ್ನಿಯ ಉದ್ದಕ್ಕೂ ಬುಲ್ಸ್‌ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು.

ಸೂಪರ್ ಆಟ

ಬೆಂಗಳೂರು ಬುಲ್ಸ್‌ ಒಟ್ಟಾರೆ ಪಂದ್ಯದಲ್ಲಿ 21 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿತು. ಈ ವೇಳೆ 10 ಅಂಕಗಳನ್ನು ಬುಲ್ಸ್ ಕಲೆ ಹಾಕಿದರೆ, ಜೈಂಟ್ಸ್‌ 8 ಅಂಕವನ್ನು ಕಲೆ ಹಾಕಿದರು. ಇನ್ನು ಬುಲ್ಸ್‌ ರಕ್ಷಣಾ ಆಟದಲ್ಲಿ ಅಮೋಘ ಪ್ರದರ್ಶನ ನೀಡಿತು. ಒಟ್ಟಾರೆ ಪಂದ್ಯದಲ್ಲಿ ಬುಲ್ಸ್‌ ಒಟ್ಟಾರೆ 4 ಬಾರಿ ಸೂಪರ್ ಟ್ಯಾಕಲ್‌ ನಡೆಸಿತು.

Story first published: Monday, September 22, 2025, 21:30 [IST]
Other articles published on Sep 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+