Yograj Singh: ಕಪಿಲ್ ದೇವ್‌ನ ಕೊಲ್ಲಲು ಹೋಗಿದ್ದೆ; ಯುವಿ ತಂದೆ ಸ್ಪೋಟಕ ಹೇಳಿಕೆ
ಭಾರತ ತಂಡ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ಹೇಳಿಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ಭಾರತ ಪರ 1 ಟೆಸ್ಟ್ ಮತ್ತು 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕೆಲವೊಮ್ಮೆ ಅವರು ಎಂಎಸ್ ಧೋನಿ ಬಗ್ಗೆ ಮತ್ತು ಕೆಲವೊಮ್ಮೆ ಯಾವುದೇ ಇತರ ಆಟಗಾರರ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಇದೀಗ ಅವರು ಅಚ್ಚರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಭಾರತಕ್ಕೆ ಮೊದಲ ವಿಶ್ವ ಗೆದ್ದು ಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಕೊಲ್ಲಲು ಅವರ ಮನೆಗೆ ಹೋಗಿದ್ದೆ ಎಂದು ಯೋಗರಾಜ್ ಹೇಳಿದ್ದಾರೆ. ಈ ಹೇಳಿಕೆ ನಂತರ ಯೋಗರಾಜ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಯೋಗರಾಜ್ ಸಿಂಗ್, ಕಪಿಲ್ ದೇವ್ ಭಾರತ ಮತ್ತು ಉತ್ತರ ವಲಯ, ಹರಿಯಾಣ ತಂಡದ ನಾಯಕರಾದಾಗ ಯಾವುದೇ ಕಾರಣವಿಲ್ಲದೆ ನನ್ನನ್ನು ಡ್ರಾಪ್ ಮಾಡಿದ್ದರು. ಇದರಿಂದ ನಾನು ಕಪಿಲ್ ಮೇಲೆ ಕೋಪಗೊಂಡಿದ್ದೆ ಎಂದು ಹೇಳಿದ್ದಾರೆ.

ಯೋಗರಾಜ್ ಕಿಡಿ
ಅಂದು ನನ್ನನು ತಂಡದಿಂದ ಏಕಾಏಕಿ ಕೈ ಬಿಟ್ಟಿದ್ದೆಕ್ಕೆ ನನ್ನ ಪತ್ನಿ (ಯುವಿಯ ಅಮ್ಮ) ಕಪಿಲ್ ದೇವ್ ಬಳಿ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದ್ದರು. ಆದರೆ, ಆ ವ್ಯಕ್ತಿಗೆ ನಾನೇ ಬುದ್ದಿ ಕಲಿಸುವುದಾಗಿ ಹೇಳಿ, ನನ್ನ ಪಿಸ್ತೂಲನ್ನು ತೆಗೆದುಕೊಂಡು ಸೆಕ್ಟರ್ 9ರಲ್ಲಿರುವ ಕಪಿಲ್ ಮನೆಗೆ ಹೋದೆ. ಈ ವೇಳೆ ಕಪಿಲ್ ತಮ್ಮ ತಾಯಿಯೊಂದಿಗೆ ಹೊರಗೆ ಬಂದರು.ಆಗ ನಾನು ಕಪಿಲ್ ನನ್ನು ಹಲವು ಬಾರಿ ನಿಂದಿಸಿದೆ. ನಿನ್ನಿಂದಾಗಿ ನಾನೊಬ್ಬ ಸ್ನೇಹಿತನನ್ನು ಕಳೆದುಕೊಂಡೆ ಮತ್ತು ನೀನು ಏನು ಮಾಡಿದೆಯೋ ಅದಕ್ಕೆ ಬೆಲೆ ತೆರೆಬೇಲಾಗುತ್ತದೆ ಎಂದು ಆಕ್ರೋಶ ಹೊರಹಾಕಿದೆ ಎಂದು ಸಂದರ್ಶನದಲ್ಲಿ ಯೋಗರಾಜ್ ಸಿಂಗ್ ಹೇಳಿದ್ದಾರೆ.
ನಿನ್ನ ತಲೆಗೆ ಗುಂಡು ಹಾರಿಸಲೆಂದೆ ನಾನು ಇಲ್ಲಿಗೆ ಪಿಸ್ತೂಲ್ ತಂದೆ. ಆದರೆ ಧರ್ಮನಿಷ್ಠಿ ಇರುವ ನಿಮ್ಮ ತಾಯಿ ಇಲ್ಲಿದ್ದಾರೆ. ಹಾಗಾಗಿ ನಾನು ಅಂದುಕೊಂಡಿದನ್ನು ಮಾಡುತ್ತಿಲ್ಲ ಎಂದು ಕಪಿಲ್‌ಗೆ ಅಲ್ಲೇ ಹೇಳಿದೆ. ನಾನು ಆ ಕ್ಷಣವೇ ಕ್ರಿಕೆಟ್ ಆಡುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದೆ. ಇನ್ನು ಮುಂದೆ ನನ್ನ ಬದಲಾಗಿ ಯುವಿ ಆಡುತ್ತಾನೆಂದು ಅಂದೇ ನಿರ್ಧರಿಸಿದೆ ಎಂದು ಯೋಗರಾಜ್ ಸಿಂಗ್ ಅಂದು ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications