IPL 2024: ಮುಂಬೈ ತಂಡದಲ್ಲಿ ಇನ್ನು ತಣ್ಣಗಾಗಿಲ್ಲ ಅಸಮಾಧಾನ; ಮೈದಾನದ ಮಧ್ಯದಲ್ಲೇ ಮುನಿಸು: Video Viral
ಐಪಿಎಲ್ 2024 ಆರಂಭವಾಗಿದೆ. ಈಗಾಗಲೇ ಐದು ಪಂದ್ಯಗಳು ನಡೆದಿದ್ದು, ಎಲ್ಲ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಮುಂಬೈ ಇಂಡಿಯನ್ಸ್ ಭಾನುವಾರ ಗುಜರಾತ್ ವಿರುದ್ಧ ಸೋಲನ್ನು ಕಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಭುಗಿಲೆದಿದ್ದ ಅಸಮಾಧಾನ ಇನ್ನು ತಣ್ಣಗೇ ಆಗಿಲ್ಲ ಎಂಬುದಕ್ಕೆ ಒಂದು ವಿಡಿಯೋ ಉದಾಹರಣೆ ಆಗಿ ಸಿಕ್ಕಿದೆ.
ಗುಜರಾತ್ ಟೈಟನ್ಸ್‌ರಿಂದ ಟ್ರೇಡ್ ಮಾಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯವನ್ನು ಮುಂಬೈ ಮ್ಯಾನೇಜ್ಮೆಂಟ್ ಬರಮಾಡಿಕೊಂಡಿತು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಸಹ ನೀಡಿತು. ಇದರಿಂದ ಐದು ಬಾರಿ ಮುಂಬೈಗೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ರೋಹಿತ್ ಶರ್ಮಾ ಬೇಸರವಾದಂತೆ ಕಂಡಿತ್ತು. ಆದರೆ ಐಪಿಎಲ್ ಕ್ಯಾಂಪ್‌ನಲ್ಲಿ ರೋಹಿತ್ ಸೇರಿಕೊಂಡು, ಎಲ್ಲ ತಣ್ಣಗಿದೆ ಎಂದು ಸಾರಿದ್ದರು.

ಯಾರಿಂದ ಅಸಮಾಧಾನ
ರೋಹಿತ್ ತಣ್ಣಗಾಗಿರಬಹುದು, ಆದರೆ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಇನ್ನೋಬ್ಬ ಪ್ಲೇಯರ್ ತಣ್ಣಗೇ ಆಗಿಲ್ಲ ಎಂಬುದು ವಿಡಿಯೋ ಮೂಲಕ ಬಹಿರಂಗವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಚುಕ್ಕಾಣಿಯನ್ನು ಹಿಡಿಯುವ ಕನಸು ಕಂಡಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್‌ಗೆ ಹಾರ್ದಿಕ್ ಆಗಮನ ಬೇಸರ ತರಿಸಿರಬಹುದು. ಹೀಗಾಗಿ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು ಎಂದು ಕಂಡು ಬಂದಿತ್ತು. ಆದರೆ ಮೈದಾನದ ಮಧ್ಯದಲ್ಲಿ ಕಂಡ ದೃಶ್ಯ ಇಬ್ಬರ ನಡುವೆ ಸರಿಯಿಲ್ಲ ಎಂಬುದನ್ನು ಸಾರುತ್ತಿದೆ.
ಆಗಿದ್ದೇನು?
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಶುಭಮನ್ ಗಿಲ್ ತಂಡ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ, ಹಾರ್ದಿಕ್ ಪಾಂಡ್ಯ ಅವರ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಾಗ, ರೋಹಿತ್, ಹಾರ್ದಿಕ್ ಮತ್ತು ಬುಮ್ರಾ ನಡುವಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬಲವಂತದ ಹೊಂದಾಣಿಕೆ
ಈ ವಿಡಿಯೋ ನೋಡಿದ ಮೇಲೆ ಮುಂಬೈ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಆಟಗಾರರು ಒಟ್ಟಿಗೆ ಆಡುವುದು ಕೇವಲ ಬಲವಂತ ಎಂಬಂತಾಗಿದೆ. ಹಾರ್ದಿಕ್ ಬೌಲಿಂಗ್ ಮಾಡಲು ಬಂದಾಗ, ರೋಹಿತ್ ಮತ್ತು ಬುಮ್ರಾ ಹಾರ್ದಿಕ್‌ಗೆ ಏನನ್ನಾದರೂ ವಿವರಿಸುತ್ತಿದ್ದರು.
ಹಾರ್ದಿಕ್ ಪಾಂಡ್ಯ ಅವರ ಹಾವಭಾವ ನೋಡಿದರೆ ಅವರು ಯಾರ ಮಾತನ್ನೂ ಕೇಳಲು ಸಿದ್ಧರಿಲ್ಲ. ಇಬ್ಬರೂ ಅನುಭವಿಗಳ ಮಾತನ್ನು ಹಾರ್ದಿಕ್ ಕೇಳ ಸಿದ್ಧವೇ ಇಲ್ಲ. ಇದಾದ ನಂತರವೂ ಬುಮ್ರಾ ಮತ್ತು ರೋಹಿತ್ ಶರ್ಮಾ ಹಾರ್ದಿಕ್ ಕಡೆಗೆ ಬೊಟ್ಟು ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೋ ನೋಡಿದರೆ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾತನ್ನು ಒಪ್ಪುತ್ತಿಲ್ಲ.
ಐದು ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ರೋಹಿತ್, ಹಾರ್ದಿಕ್ ಅವರ ಮಾತು ಕೇಳಲು ನಿರಾಕರಿಸುತ್ತಿದ್ದಾರೆ. ಬುಮ್ರಾ ವಿಶ್ವದ ನಂಬರ್ ಒನ್ ಬೌಲರ್, ಆದರೆ ಹಾರ್ದಿಕ್ ಅವರ ಸಲಹೆಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮೂವರ ನಡುವಿನ ಮನಸ್ತಾಪ ಇನ್ನೂ ಮುಗಿದಿಲ್ಲ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications