ಧೋನಿಯ ಹೆಲಿಕಾಪ್ಟರ್ ಶಾಟ್‌ಗಳನ್ನು ಯುಎಇನಲ್ಲಿ ನೀವು ನೋಡಲಿದ್ದೀರಿ: ಸುರೇಶ್ ರೈನಾ

ಸುದೀರ್ಘ ಲಾಕ್‌ಡೌನ್‌ನ ನಂತರ ಐಪಿಎಲ್‌ಗೆ ಎಲ್ಲಾ ಕ್ರಿಕೆಟಿಗರು ಸಜ್ಜಾಗುತ್ತಿದ್ದಾರೆ. ಭಾರತದ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಫಿಟ್‌ನೆಸ್ ತಾಲೀಮಿನ ಜೊತೆಗೆ ಅಮ್ರೋಹಾದಲ್ಲಿ ವೇಗಿ ಮೊಹಮ್ಮದ್ ಶಮಿ ಫಾರ್ಮ್‌ಹೌಸ್‌ನ ಮೈದಾನದಲ್ಲಿ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದಾರೆ. ಈ ಋತುವಿನ ಐಪಿಎಲ್ ಆರಂಭಕ್ಕೆ ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದಿದ್ದಾರೆ ಸುರೇಶ್ ರೈನಾ.
ಈ ಬಾರಿಯ ಐಪಿಎಲ್‌ಗಾಗಿ ನಾವೆಲ್ಲಾ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದೇವೆ. ಈ ಆವೃತ್ತಿಯನ್ನು ಎಲ್ಲರೂ ಚೆನ್ನಾಗಿ ಆಸ್ವಾದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಕೊರೊನಾ ವೈರಸ್ ಈ ಬಾರಿ ಸಾಕಷ್ಟು ಬದಲಾವಣೆಗೆ ಕಾರಣವಾಗದೆ. ಹೀಗಾಗಿ 2020 ಅತ್ಯಂತ ಕೆಟ್ಟ ವರ್ಷ ಎನಿಸಿದೆ. ಆದರೆ ನಾವು ಭಾರತೀಯರು ಈ ವೈರಸ್‌ನ ವಿರುದ್ಧದ ಹೋರಾಟದಲ್ಲಿ ಗೆಲ್ಲಲಿದ್ದೇವೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳುತ್ತಿರುವ ಬಗ್ಗೆ ಸುರೇಶ್ ರೈನಾ ಪ್ರತಿಕ್ರಿಯಿಸಿದರು. ಕೊರೊನಾ ವೈರಸ್‌ನ ಭೀತಿಯಿಂದಾಗಿ ಟೂರ್ನಿ ಮುಂದೂಡುವ ಮುನ್ನ ನಾನು ಅವರೊಂದಿಗೆ ಸಾಕಷ್ಟು ಕಾಲ ಇದ್ದು ಅಭ್ಯಾಸವನ್ನು ನಡೆಸಿದ್ದೆ. ಆದಷ್ಟು ಶೀಘ್ರದಲ್ಲಿ ನೀವು ಮರಳಿ ಹೆಲಿಕಾಪ್ಟರ್ ಶಾಟ್‌ಗಳನ್ನು ವೀಕ್ಷಿಸಲಿದ್ದೀರಿ. ಆತನೋರ್ವ ಐಪಿಎಲ್ ಶ್ರೇಷ್ಠ ರಾಯಭಾರಿ ಹಾಗಿ ಶ್ರೇಷ್ಠ ಕ್ರಿಕೆಟಿಗ ಎಂದು ರೈನಾ ಹೇಳಿದ್ದಾರೆ.
ಯುಎಇನಲ್ಲಿ ಐಪಿಎಲ್ ನಡೆಯುತ್ತಿರುವ ಬಗ್ಗೆ ಮಾತನಾಡಿ, ಯುಎಇನಲ್ಲಿ ಬೃಹತ್ ಕ್ರೀಡಾಂಗಣಗಳಿವೆ. ಹಾಗೆಯೇ ನಮ್ಮ ತಂಡದಲ್ಲಿ ಸಾಕಷ್ಟು ಉತ್ಕೃಷ್ಠ ದರ್ಜೆಯ ಆಟಗಾರರಿದ್ದಾರೆ. ಎಂಎಸ್ ಧೋನಿಯಂತಾ ಶ್ರೇಷ್ಠ ಆಟಗಾರರ ಜೊತೆಗೆ ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇವೆ. ಈಗಾಗಲೇ ಅಲ್ಲಿನ ಕ್ರೀಡಾಂಗಣದಲ್ಲಿ ಒಂದು ಬಾರಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಅದು ಸಹಕಾರಿಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಿಂದ ನಾವು ಕ್ರಿಕೆಟ್‌ನಿಂದ ದೂರವಿದ್ದೇವೆ. ಐಪಿಎಲ್‌ನಲ್ಲಿ ಎಲ್ಲಾ ತಮಡಗಳೂ ಉತ್ತಮವಾಗಿದೆ. ಇದು ತಂಡಗಳಲ್ಲಿ ಮಾನಸಿಕವಾಗಿ ಯಾರು ಬಲಿಷ್ಠರು ಎಂಬ ಹೋರಾಟವೂ ಆಗಿರಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications