ಕೆಲವೇ ಪಂದ್ಯ ಆಡಿರುವ ಈ ಐವರು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಹಲವರಿಗೆ ಗೊತ್ತೇ ಇಲ್ಲ!

ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಪಡೆದುಕೊಳ್ಳುವ ಪ್ರತಿಯೊಬ್ಬ ಕ್ರಿಕೆಟಿಗನೂ ಸಹ ತನ್ನ ದೇಶವನ್ನು ವಿಶ್ವಕಪ್ ಟೂರ್ನಿಗಳಲ್ಲಿ ಪ್ರತಿನಿಧಿಸಬೇಕೆಂಬ ಕನಸನ್ನು ಹೊತ್ತಿರುತ್ತಾರೆ. ಆದರೆ ಈ ಬೃಹತ್ ಅವಕಾಶ ಎಲ್ಲಾ ಆಟಗಾರರಿಗೂ ಕೂಡಾ ಲಭಿಸುವುದಿಲ್ಲ, ಆಯ್ಕೆಗಾರರು ವಿಶ್ವಕಪ್ ಟೂರ್ನಿಯಲ್ಲಿ ಯಾವ ಆಟಗಾರರನ್ನು ಕಣಕ್ಕಿಳಿಸಬೇಕು ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ಆಯ್ಕೆ ಮಾಡುವುದರಿಂದ ವಿಶ್ವಕಪ್ ಟೂರ್ನಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ತೀರಾ ಕಷ್ಟ ಎಂದೇ ಹೇಳಬಹುದು.
ಇನ್ನು ಟೀಮ್ ಇಂಡಿಯಾ ವಿಚಾರಕ್ಕೆ ಬಂದರೆ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಸಿಗುವುದು ಇತರೆ ತಂಡಗಳಿಗೆ ಹೋಲಿಸಿದರೆ ಬಲು ಕಷ್ಟ ಎನ್ನಬಹುದು. ಹೌದು, ಭಾರತದಲ್ಲಿ ಕ್ರಿಕೆಟಿಗರ ಸಂಖ್ಯೆ ಹೆಚ್ಚಿದ್ದು, ಈಗಾಗಲೇ ಏಕಕಾಲಕ್ಕೆ 2 ಪ್ರತ್ಯೇಕ ತಂಡಗಳಾಗಿ ಕಣಕ್ಕಿಳಿದು ಕ್ರಿಕೆಟ್ ಆಡುವಷ್ಟು ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ.
2022ರ ಜೂನ್ ಮುಕ್ತಾಯದ ಸಮಯಕ್ಕೆ ಒಟ್ಟು 97 ಕ್ರಿಕೆಟಿಗರು ಟೀಂ ಇಂಡಿಯಾವನ್ನು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ಪೈಕಿ ಕೆಲವರಿಗೆ ಮಾತ್ರ ಐಸಿಸಿ ಕ್ರಿಕೆಟ್ ಟೂರ್ನಿಗಳಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ. ಇನ್ನು ಕೆಲ ಭಾರತೀಯ ಆಟಗಾರರು ಕೆಲವೇ ಕೆಲವು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದರೂ ಸಹ ಐಸಿಸಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಉದಾಹರಣೆಗಳಿವೆ. ಹೀಗೆ ಕಡಿಮೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದ ಹಾಗೂ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಮುಂದೆ ಇದೆ ಓದಿ.

1. ಮನೋಜ್ ತಿವಾರಿ - 2012ರ ಟಿ ಟ್ವೆಂಟಿ ವಿಶ್ವಕಪ್
2011 ಮತ್ತು 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿದ್ದ ಮನೋಜ್ ತಿವಾರಿಗೆ ಶ್ರೀಲಂಕಾದಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ದೊರೆತಿತ್ತು. ಮನೋಜ್ ತಿವಾರಿ ಇಲ್ಲಿಯವರೆಗೂ ಒಟ್ಟು 3 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

2. ವರುಣ್ ಆ್ಯರನ್ - 2014ರ ಟಿ20 ವಿಶ್ವಕಪ್
2014ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 16 ವಿಕೆಟ್‍ಗಳನ್ನು ಪಡೆದು ಮಿಂಚಿದ ವೇಗಿ ವರುಣ್ ಆ್ಯರನ್ ಅವರಿಗೆ 2014ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಆದರೆ ತಂಡವನ್ನು ಆಡುವ ಬಳಗದಲ್ಲಿ ಪ್ರತಿನಿಧಿಸುವ ಅವಕಾಶ ಮಾತ್ರ ಲಭಿಸಲಿಲ್ಲ.

3. ಅಮಿತ್ ಮಿಶ್ರಾ - 2014ರ ಟಿ20 ವಿಶ್ವಕಪ್
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್‌ಗಳ ಸಾಲಿನಲ್ಲಿ ನಿಲ್ಲುವ ಅಮಿತ್ ಮಿಶ್ರಾ ಟೀಮ್ ಇಂಡಿಯಾ ಪರ ಕೇವಲ 10 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 2014ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಪಡೆದ ಅವರು ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 10 ವಿಕೆಟ್ ಪಡೆದು ಮಿಂಚಿದರೂ ಕೂಡ ನಂತರದ ದಿನಗಳಲ್ಲಿ ಕೇವಲ 3 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಮಾತ್ರ ಪಡೆದರು.

4. ಅಶೋಕ್ ದಿಂಡಾ - 2012ರ ಟಿ20 ವಿಶ್ವಕಪ್
ಅಶೋಕ್ ದಿಂಡಾ ಕೂಡ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಆಟಗಾರನಾಗಿದ್ದಾರೆ. 2012ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಪಡೆದ ಅಶೋಕ್ ದಿಂಡಾ ಇಂಗ್ಲೆಂಡ್ ವಿರುದ್ಧದ ಸೆಣಸಾಟದಲ್ಲಿ 2 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿದ್ದರು ಹಾಗೂ ನಂತರ ಯಾವುದೇ ಪಂದ್ಯದಲ್ಲಿಯೂ ಅವಕಾಶ ಪಡೆಯಲಿಲ್ಲ.

5. ಪವನ್ ನೇಗಿ - 2016ರ ಟಿ ಟ್ವೆಂಟಿ ವಿಶ್ವಕಪ್
2015ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚಿದ್ದ ಪವನ್ ನೇಗಿ 2016ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆದರೆ ಪವನ್ ನೇಗಿ ಯಾವುದೇ ಪಂದ್ಯದಲ್ಲಿಯೂ ತಂಡದ ಪರ ಕಣಕ್ಕಿಳಿಯುವ ಅವಕಾಶ ಪಡೆಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications