ಕೊಹ್ಲಿಗೆ ಹೋಲಿಸಿ ಪಾಕ್ ಕ್ರಿಕೆಟರ್ ಬಾಬರ್ ಅಜಂ ಬ್ಯಾಟಿಂಗ್ ಶೈಲಿ ಹೊಗಳಿದ ಟಾಮ್ ಮೂಡಿ

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಂ ಬ್ಯಾಟಿಂಗ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆತನೋರ್ವ ವಿಶೇಷ ಪ್ರತಿಭೆ ಹೊಂದಿದ ಕ್ರಿಕೆಟಿಗನಾಗಿದ್ದು ಆತನ ಬ್ಯಾಟಿಂಗ್ ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.
ಖಾಸಗೀ ಕ್ರೀಡಾವಾಹಿನಿಯ ಕಾರ್ಯಕ್ರಮದಲ್ಲಿ ಮಾತಾಡಿದ ಟಾಮ್ ಮೂಡಿ ಮುಂದಿನ ದಶಕದಲ್ಲಿ ಬಾಬರ್ ಅಜಂ ಟಾಪ್ 5 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಹೇಳಿದ್ದಾರೆ. ಆತನಲ್ಲಿ ವಿಶೇಷವಾದದ್ದೇನೋ ಇದೆ ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಪ್ ಮೂಡಿ.
ನಾವೆಲ್ಲಾ ಮಾತನಾಡುವಾಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಸೊಗಸು ಎಂದು ಎಂದು ಹೇಳುತ್ತೇವೆ. ನಿಮಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ತುಂಬಾ ಇಷ್ಟವೆಂಬುದಾದರೆ ಬಾಬರ್ ಅಜಂ ಬ್ಯಾಟಿಂಗ್ ಶೈಲಿಯನ್ನೊಮ್ಮೆ ನೋಡಿ. ಆತನೋರ್ವ ವಿಶೇಷ ಬ್ಯಾಟ್ಸ್‌ಮನ್ ಎಂದು ಮನಸಾರೆ ಹೊಗಳಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್.
ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿರುವ ಟಾಮ್ ಮೂಡಿ "ಪ್ರಸಕ್ತ ಬಾಬರ್ ಅಜಂ ಅವರ ಅಂಕಿಅಂಶಗಳನ್ನು ನೋಡಿದಾಗ ಈಗಿನ ಟಾಪ್ 5 ಬ್ಯಾಟ್ಸ್‌ಮನ್ ಅನಿಸಿಕೊಳ್ಳಲು ಕಷ್ಟವೆನಿಸಬಹುದು. ಆದರೆ ಮುಂದಿನ 5-10 ವರ್ಷದಲ್ಲಿ ಆತ ಖಂಡಿತಾವಾಗಿಯೂ ಟಾಪ್ 5 ಸ್ಥಾನದಲ್ಲಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಬಾಬರ್ ಅಜಂ ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನ, ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಮರ್ನಾಸ್ ಲ್ಯಾಬುಶೈನ್ ಮೂರು ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications