ಶೀಘ್ರದಲ್ಲಿಯೇ ಕೊಹ್ಲಿ ರೋಹಿತ್‌ಗೆ ನಾಯಕತ್ವ ಬಿಟ್ಟುಕೊಡುವುದು ಖಚಿತ ಎಂದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ನೀಡಬೇಕೆಂಬ ಚರ್ಚೆಗಳು ಈ ಹಿಂದಿನಿಂದಲೂ ಸಹ ಸಾಕಷ್ಟು ನಡೆಯುತ್ತಿವೆ. ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಿರುವ ಕಾರಣ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ನಾಯಕತ್ವವನ್ನು ಬಿಟ್ಟುಕೊಡಬೇಕು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು.
ಇದೀಗ ಈ ಸಾಲಿಗೆ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಕೂಡ ಸೇರಿಕೊಂಡಿದ್ದಾರೆ. ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ವೃತ್ತಿ ಜೀವನದ ಪ್ರಮುಖ ಭಾಗವನ್ನು ಕಳೆದಿರುವ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಧೋನಿ ರೀತಿಯೇ ನಾಯಕತ್ವದ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕಿದೆ ಎಂದು ಕಿರಣ್ ಮೋರೆ ಅಭಿಪ್ರಾಯಪಟ್ಟಿದ್ದಾರೆ.
'ಬಿಸಿಸಿಐ ಈ ವಿಷಯವನ್ನು ಶೀಘ್ರದಲ್ಲೇ ಪರಿಗಣಿಸುತ್ತದೆ ಎಂದು ನಾನು ನಂಬುತ್ತೇನೆ, ರೋಹಿತ್ ಶರ್ಮಾಗೆ ಆದಷ್ಟು ಬೇಗ ನಾಯಕತ್ವ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ವಿರಾಟ್ ಕೊಹ್ಲಿ ಎಂಎಸ್ ಧೋನಿ ಅವರ ನೇತೃತ್ವದಲ್ಲಿ ಆಡಿಬಂದ ಚಾಣಾಕ್ಷ ನಾಯಕ. ಕೊಹ್ಲಿ ಕೂಡ ಇನ್ನೆಷ್ಟು ದಿನಗಳ ಕಾಲ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕತ್ವವನ್ನು ವಹಿಸಿಕೊಳ್ಳಲು ಬಯಸುತ್ತಾರೆ, ಅವರು ಕೂಡ ಈ ಕುರಿತು ಯೋಚಿಸಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ಈ ವಿಷಯದ ಕುರಿತು ಚಟುವಟಿಕೆಗಳು ನಡೆಯಲಿವೆ' ಎಂದು ಹೇಳುವುದರ ಮೂಲಕ ಕಿರಣ್ ಮೊರೆ ರೋಹಿತ್ ಶರ್ಮಾಗೆ ನಾಯಕತ್ವ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ಆಡಿ ಬಂದ ನಾಯಕ ಎಂದು ಕೊಹ್ಲಿ ಕಾಲೆಳೆದ ಮೋರೆ
ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಹೇಳುವಾಗ ಧೋನಿ ನೇತೃತ್ವದಲ್ಲಿ ಆಡಿಬಂದ ಚಾಣಾಕ್ಷ ನಾಯಕ ವಿರಾಟ್ ಕೊಹ್ಲಿ ಎಂದು ಉಲ್ಲೇಖಿಸುವ ಮೂಲಕ ಕಿರಣ್ ಮೋರೆ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ. ಪರೋಕ್ಷವಾಗಿ ಎಂಎಸ್ ಧೋನಿ ಸಹಾಯದಿಂದ ಕೊಹ್ಲಿ ನಾಯಕತ್ವ ನಿರ್ವಹಿಸಿದ್ದರು ಎಂದು ಕಿರಣ್ ಮೋರೆ ಕೊಹ್ಲಿಗೆ ಕುಟುಕಿದ್ದಾರೆ.

ಸೀಮಿತ ಓವರ್‌ಗಳ ನಾಯಕತ್ವವನ್ನು ಮಾತ್ರ ಬಿಟ್ಟುಕೊಡಲಿ
ಟೀಮ್ ಇಂಡಿಯಾದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಳ್ಳಬೇಕು ಎಂದಿರುವ ಕಿರಣ್ ಮೋರೆ, ವಿರಾಟ್ ಕೊಹ್ಲಿ ಕೇವಲ ಸೀಮಿತ ಓವರ್‌ಗಳ ನಾಯಕತ್ವವನ್ನು ಮಾತ್ರ ಬಿಟ್ಟುಕೊಡಲಿ ಎಂದು ಹೇಳಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಯೇ ಮುಂದುವರೆಸಲಿ ಎಂಬುದು ಕಿರಣ್ ಮೋರೆ ನಿಲುವು.

ಗಂಭೀರ್ ಕೂಡ ರೋಹಿತ್ ನಾಯಕತ್ವವನ್ನು ಬಯಸಿದ್ದರು
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕಳೆದ ಐಪಿಎಲ್ ಆವೃತ್ತಿಯಲ್ಲಿ ಐದನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ನಂತರ ಗೌತಮ್ ಗಂಭೀರ್ ರೋಹಿತ್ ಶರ್ಮಾಗೆ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ನಾಯಕತ್ವವನ್ನು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಟಿ ಟ್ವೆಂಟಿ ತಂಡವನ್ನು ರೋಹಿತ್ ಮುನ್ನಡೆಸಬೇಕು ಎಂದಿದ್ರು ಪಾರ್ಥಿವ್ ಪಟೇಲ್
ಟೀಮ್ ಇಂಡಿಯಾದ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಕೂಡಾ ರೋಹಿತ್ ಶರ್ಮಾ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಮತ್ತು ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕು ಎಂದು ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications