ವಿರಾಟ್, ರೋಹಿತ್, ಧೋನಿ ಮಾಡದ ಸಾಧನೆಯನ್ನು ಮಾಡಿದ ವೈಭವ್ ಸೂರ್ಯವಂಶಿ
ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ತಮ್ಮ ಫಿಯರ್ ಲೆಸ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿರುವ ವೈಭವ್, ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಜೈಪುರನಲ್ಲಿ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್‌ಎಸ್‌ಜಿ ವಿರುದ್ಧ ಆಮೆಗತಿಯ ಆರಂಭವನ್ನು ಕಂಡರು. ಅದಾದ ಬಳಿಕ ನಿಜಕ್ಕೂ ಆಕ್ರಮಣಕಾರಿ ಆಟವನ್ನು ಆಡಿದರು. ಬರೀ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ರನ್ ಕಲೆ ಹಾಕಿದ ವೈಭವ್ ಆರ್ಭಟ ನಡೆಸಿದರು. ಲಕ್ನೋ ತಂಡದ ಯಾವೊಬ್ಬ ಬೌಲರ್‌ನನ್ನು ಬಿಡದೆ ದಂಡಿಸುತ್ತಾ ಸಾಗಿದ ವೈಭವ್ ಸೂರ್ಯವಂಶಿ, ನೆರೆದ ಪ್ರೇಕ್ಷಕರಿಗೆ ಹಬ್ಬದೂಟವನ್ನು ಉಣ ಬಡಿಸಿದರು. ಲೆಗ್ ಸೈಡ್ ಹಾಗೂ ಆಫ್ ಸೈಡ್‌ನಲ್ಲಿ ನೀರು ಕುಡಿದಷ್ಟೇ ಸುಲಭವಾಗಿ ಸಿಕ್ಸರ್ ಬಾರಿಸಿದ ವೈಭವ್ ಆರ್ಭಟಿಸಿದರು.

ಎಲ್‌ಎಸ್‌ಜಿ ನೀಡಿದ್ದ ಸವಾಲಿನ ಮೊತ್ತವನ್ನು ಲೆಕ್ಕಿಸದೆ ಬ್ಯಾಟ್ ಮಾಡಿದ ವೈಭವ್ ಅಮೋಘ ಪ್ರದರ್ಶನ ನೀಡಿದರು. ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್, 7 ಬೌಂಡರಿ ಸಹಿತ 93 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆ ಹಾಕಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
ಭಾರತದ ಮೊದಲ ಬ್ಯಾಟರ್
ಐಪಿಎಲ್ ಇತಿಹಾಸದಲ್ಲಿ ವೈಭವ್ ಸೂರ್ಯವಂಶಿ ಮತ್ತೊಂದು ದೊಡ್ಡ ದಾಖಲೆಯನ್ನು ಬರೆದರು. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ 50ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ ಮಾಡದ ಸಾಧನೆಯನ್ನು ವೈಭವ್ ಸೂರ್ಯವಂಶಿ ಮಾಡಿ ಬೀಗಿದರು.
ಆಂಡ್ರೆ ರಸೆಲ್ ದಾಖಲೆ ಪೀಸ್ ಪೀಸ್
ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ವೈಭವ್ 10 ಸಿಕ್ಸರ್ ಬಾರಿಸುತ್ತಲೇ ಐಪಿಎಲ್ ಇತಿಹಾಸದ ಒಂದೇ ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಆಂಡ್ರೆ ರಸೆಲ್ 2019ರ ಐಪಿಎಲ್ ಆವೃತ್ತಿಯಲ್ಲಿ 52 ಸಿಕ್ಸರ್ ಬಾರಿಸಿದ್ದರು. ಇವರ ದಾಖಲೆಯನ್ನು ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಈಗ ಇವರ ಕಣ್ಣುಗಳು ಕ್ರಿಸ್ ಗೇಲ್ ದಾಖಲೆ ಮೇಲೆ ನೆಟ್ಟಿವೆ.
ಒಂದೇ ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಕ್ರಿಸ್ ಗೇಲ್, 59 ಸಿಕ್ಸರ್
ವೈಭವ್ ಸೂರ್ಯವಂಶಿ, 53 ಸಿಕ್ಸರ್
ಆಂಡ್ರೆ ರಸೆಲ್, 52 ಸಿಕ್ಸರ್
ಕ್ರಿಸ್ ಗೇಲ್, 51 ಸಿಕ್ಸರ್
ಜೋಸ್ ಬಟ್ಲರ್, 45 ಸಿಕ್ಸರ್
ಪಂದ್ಯದ ಫಲಿತಾಂಶ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 220 ರನ್ ಕಲೆ ಹಾಕಿತು. ಎಲ್‌ಎಸ್‌ಜಿ ಪರ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 96, ಜೋಶ್ ಇಂಗ್ಲಿಸ್ 60 ರನ್ ಬಾರಿಸಿ ಮಿಂಚಿದರು. ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ಮುಟ್ಟಿತು. ಈ ವೇಳೆ ವೈಭವ್ ಸೂರ್ಯವಂಶಿ 93, ಧ್ರುವ್ ಜುರೇಲ್ 53, ಯಶಸ್ವಿ ಜೈಸ್ವಾಲ್ 43 ರನ್ ಬಾರಿಸಿ ಮಿಂಚಿದರು. ಈ ಗೆಲುವಿನ ಮೂಲಕ ರಾಜಸ್ಥಾನ್ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications