ಹೃದಯಾಘಾತಕ್ಕೊಳಗಾಗಿ ಯುವ ಕ್ರಿಕೆಟರ್ ನಿಧನ
ಬೆಂಗಳೂರು, ಜೂನ್ 20: ಧಾರವಾಡ ವಲಯವನ್ನು ಪ್ರತಿನಿಧಿಸುತ್ತಿದ್ದ ಭರವಸೆಯ ಯುವ ಆಟಗಾರ ಶುಭಮ್ ಗೌತಮ್ (20) ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂಡರ್ 23 ಅಂತರ ವಲಯ ಕ್ರಿಕೆಟ್ ಟೂರ್ನಮೆಂಟ್ ಆಡಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಮಾರ್ಗಮಧ್ಯದಲ್ಲಿ ಗೌತಮ್ ಗೆ ಹೃದಯಾಘಾತವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ನ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಪ್ರತಿನಿಧಿಸುತ್ತಿದ್ದ ಶುಭಂ ಗೌತಮ್ ಅವರು ಬಲಗೈ ವೇಗದ ಬೌಲರ್ ಆಗಿದ್ದರು. ಬೆಂಗಳೂರಿನ ಯಂಗ್ ಲಯನ್ಸ್ ತಂಡದ ಪರವೂ ಕೆಲ ಕಾಲ ಆಡಿದ್ದರು. ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಟೂರ್ನಿಯಲ್ಲಿ ಮುಂಡಗೋಡ ತಂಡದ ಪರ ಆಡಿದ್ದರು.
ಬೆಂಗಳೂರಿನ ಆದಿತ್ಯ ಗ್ಲೋಬಲ್ ಮೈದಾನದಲ್ಲಿ ಮಂಗಳವಾರ ಆರಂಭವಾದ ಮೈಸೂರು ವಿರುದ್ಧದ ಪಂದ್ಯದಲ್ಲಿ ಧಾರವಾಡ ವಲಯವನ್ನು ಪ್ರತಿನಿಧಿಸಲು ಬೆಂಗಳೂರಿಗೆ ಸಹ ಆಟಗಾರರ ಜತೆ ಬರುತ್ತಿದ್ದರು.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications