For Quick Alerts
ALLOW NOTIFICATIONS  
For Daily Alerts
 

T20 World Cup 2024: ಅಬ್ಬರಿಸಲು ಸಜ್ಜಾದ ಯುವ ಕ್ರಿಕೆಟಿಗರು ಇವರೇ ನೋಡಿ!

ಮೇ 28 ಮಂಗಳವಾರ, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಕ್ರಿಕೆಟ್‌ ಹಬ್ಬ ಅತ್ಯಂತ ಸಡಗರ ಸಂಭ್ರಮದಿಂದ ಮುಕ್ತಾವಾಗಿದೆ. ಈಗ ಜಗತ್ತೇ ಕಾತರದಿಂದ ಕಾಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಜೂನ್‌ 1 ರಿಂದ ಅಮೆರಿಕಾ ಮತ್ತು ವೆಸ್ಟ್‌ ಇಂಡೀಸ್‌ ದೇಶಗಳಲ್ಲಿ ಆರಂಭವಾಗುತ್ತಿದೆ.

ಈ ಮೆಗಾ ಟೂರ್ನಿಯಲ್ಲಿ ಮೊದಲ ಬಾರಿಗೆ 20 ತಂಡಗಳು ಭಾಗವಹಿಸುತ್ತಿರುವುದು ದಾಖಲೆ ಆಗಿದೆ. ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಂತಹ ಬಲಿಷ್ಠ ತಂಡಗಳ ಎದುರು ಉಳಿದ ಟೀಮ್‌ಗಳು ಯಾವ ರೀತಿ ಪೈಪೋಟಿ ನಡೆಸಲಿವೆ ಎಂಬುದು ಕುತೂಹಲ ಹೆಚ್ಚಿಸಿದೆ.

ಈ ಮಧ್ಯೆ ಟೂರ್ನಿಯಲ್ಲಿ ವಿವಿಧ ದೇಶಗಳ ಅನುಭವಿ ಆಟಗಾರರ ಜತೆಗೆ ಯುವಪಡೆ ಕೂಡ ಅಬ್ಬರಿಸಲಿ ಸಜ್ಜಾಗಿದ್ದಾರೆ. ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಗಮನ ಸೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

Young cricketers ready to make a splash in T20 World Cup 2024 Information

1) ಯಶಸ್ವಿ ಜೈಸ್ವಾಲ್‌ (ಭಾರತ) : ಟೀಮ್‌ ಇಂಡಿಯಾದ ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಯಶಸ್ವಿ ಟೀಮ್‌ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸುವ ಬರದಲ್ಲಿದ್ದಾರೆ.

ಕಳೆದ ವರ್ಷಗಳಿಂದ ಭರ್ಜರಿ ಫಾರ್ಮ್‌ನಲ್ಲಿರುವನ ಯುವ ಬ್ಯಾಟರ್‌ ಯಶಸ್ವಿ ಕ್ರಿಕೆಟ್ ಮೈದಾನದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾರೆ. ಈಗ ಅವರು 2024ರ ಟಿ 20 ವಿಶ್ವಕಪ್‌ನಲ್ಲಿ ತಮ್ಮ ಮ್ಯಾಜಿಕ್ ತೋರಿಸಲು ಸಜ್ಜಾಗಿದ್ದಾರೆ. ಜೈಸ್ವಾಲ್ 16 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 502 ರನ್ ಗಳಿಸಿದ್ದಾರೆ.

Young cricketers ready to make a splash in T20 World Cup 2024 Information

2) ಹ್ಯಾರಿ ಬ್ರೂಕ್ (ಇಂಗ್ಲೆಂಡ್) : ಬಲಿಷ್ಠ ಇಂಗ್ಲೆಂಡ್ ತಂಡದ ಅತ್ಯುತ್ತಮ ಬ್ಯಾಟರ್‌ ಆದ ಹ್ಯಾರಿ ಬ್ರೂಕ್ 2024ರ ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. 25 ವರ್ಷದ ಈ ಬ್ಯಾಟರ್‌ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಬ್ರೂಕ್ ಇಂಗ್ಲೆಂಡ್ ಪರ 27 ಪಂದ್ಯಗಳ 2 ಅರ್ಧಶತಕಗಳ ಸಹಾಯದಿಂದ 545 ರನ್ ಗಳಿಸಿದ್ದಾರೆ.

3) ತೌಹೀದ್ ಹೃದಯ್ (ಬಾಂಗ್ಲಾದೇಶ) : ಬಾಂಗ್ಲಾದೇಶ ತಂಡದ ಯುವ ಎಡಗೈ ಬ್ಯಾಟರ್‌ ತೌಹಿದ್ ಹೃದಯ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ತಮ್ಮ ಛಾಪು ಮೂಡಿಸುವ ನಿರೀಕ್ಷೆಯಿದೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ತೌಹೀದ್‌ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೀಗ ಈ ಮೆಗಾ ಟೂರ್ನಿಯಲ್ಲಿ ತಂಡಕ್ಕೆ ಅದ್ಭುತ ಪ್ರದರ್ಶನ ನೀಡುವ ಅವಕಾಶ ಲಭಿಸಲಿದೆ. ಬಾಂಗ್ಲಾದೇಶ ಪರ 19 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 454 ರನ್ ಬಾರಿಸಿದ್ದಾರೆ.

4) ಕನ್ವರ್ಪಾಲ್ ತತ್ಗುರ್ (ಕೆನಡಾ) : ಬಲಗೈ ವೇಗದ ಬೌಲರ್ ಕನ್ವರ್ಪಾಲ್ ತತ್ಗುರ್ ಅವರು ಕೆನಡಾ ತಂಡದ ಪ್ರಮುಖ ಅಸ್ತ್ರವಾಗಿದ್ದು, ತಮ್ಮ ವೇಗದ ಬೌಲಿಂಗ್‌ ಶೈಲಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಇದೀಗ ಟಿ20 ವಿಶ್ವಕಪ್ 2024ರಲ್ಲಿ ತಮ್ಮ ತಂಡಕ್ಕೆ ಪ್ರಮುಖ ಪಾತ್ರ ವಹಿಸಲು ಸಜ್ಜಾಗಿದ್ದಾರೆ. ತತ್ಗುರ್‌ ತಮ್ಮ ವೇಗದ ಬೌಲಿಂಗ್‌ನಿಂದ ಅಮೆರಿಕದ ಬೌನ್ಸಿ ಪಿಚ್‌ಗಳಲ್ಲಿ ಬ್ಯಾಟರ್‌‌ಗಳಿಗೆ ಕಾಟ ಕೊಡುವ ನಿರೀಕ್ಷೆ ಇದೆ.

5) ವಿಲ್ ಜಾಕ್ವೆಸ್ (ಇಂಗ್ಲೆಂಡ್) : ಇಂಗ್ಲೆಂಡ್‌ನ ಅಪಾಯಕಾರಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ವಿಲ್ ಜಾಕ್ವೆಸ್, ಈ ಬಾರಿಯ ಟಿ 20 ವಿಶ್ವಕಪ್‌ನಲ್ಲಿ ಬ್ಯಾಟ್ ಮತ್ತು ಬಾಲ್‌ನಿಂದ ವಿಧ್ವಂಸ ಪ್ರದರ್ಶನ ನೀಡಲು ತಯಾರಿ ನಡೆಸಿದ್ದಾರೆ. 25 ವರ್ಷದ ಈ ಆಟಗಾರ ಇಂಗ್ಲೆಂಡ್ ಪರ ಟಿ20 12 ಪಂದ್ಯಗಳಿಂದ 218 ರನ್ ಗಳಿಸಿದ್ದು, 1 ವಿಕೆಟ್ ಪಡೆದಿದ್ದಾರೆ.

6) ರಚಿನ್ ರವೀಂದ್ರ (ನ್ಯೂಜಿಲೆಂಡ್) : ನ್ಯೂಜಿಲೆಂಡ್ ತಂಡದ ಎಡಗೈ ಸ್ಟಾರ್ ಬ್ಯಾಟರ್‌ ರಚಿನ್ ರವೀಂದ್ರ ಈಗಾಗಲೇ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದಾರೆ.

ಕೇವಲ ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ ಕೂಡ ಮಾಡ ಬಲ್ಲರಾದ ರಚಿನ್‌ ರವೀಂದ್ರ ಈ ಬಾರಿಯ ಐಪಿಎಲ್‌ನಲ್ಲಿಯೂ ಆಡಿದ್ದಾರೆ. ರಚಿನ್‌ 20 ಪಂದ್ಯಗಳಲ್ಲಿ 1 ಅರ್ಧಶತಕದ ಸಹಾಯದಿಂದ ಒಟ್ಟು 214 ರನ್ ಗಳಿಸಿದ್ದು, 11 ವಿಕೆಟ್ ಪಡೆದಿದ್ದಾರೆ.

7) ಟ್ರಿಸ್ಟಾನ್ ಸ್ಟಬ್ಸ್ (ದಕ್ಷಿಣ ಆಫ್ರಿಕಾ) : 23 ವರ್ಷದ ದಕ್ಷಿಣ ಆಫ್ರಿಕಾದ ಬ್ಯಾಟರ್‌ ಟ್ರಿಸ್ಟಾನ್ ಸ್ಟಬ್ ಅವರು ಮುಕ್ತಾಯವಾದ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ನಡುಕ ಹುಟ್ಟಿಸುವ ಮಟ್ಟಿಗೆ ಬ್ಯಾಟಿಂಗ್‌ ಮಾಡಿದ್ದಾರೆ.

ಈ ಪ್ರದರ್ಶನದ ಆಧಾರ ಮೇಲೆ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ತಂಡಕ್ಕೂ ಆಯ್ಕೆ ಆಗಿದ್ದಾರೆ. ಸ್ಟಬ್ಸ್‌ ಒಟ್ಟು 17 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 239 ರನ್ ಗಳಿಸಿದ್ದಾರೆ. ಹೀಗಾಗಿ ಮುಂಬರುವ ವಿಶ್ವಕಪ್‌ನಲ್ಲಿ ಎದುರಾಳಿ ತಂಡಕ್ಕೆ ಅಪಾಯಕಾರಿ ಆಗಬಹುದು.

8) ದೀಪೇಂದ್ರ ಸಿಂಗ್ ಐರಿ (ನೇಪಾಳ) : ನೇಪಾಳ ತಂಡದ ಬ್ಯಾಟರ್‌ ದೀಪೇಂದ್ರ ಸಿಂಗ್ ಐರಿ ಅವರು ಇತ್ತೀಚೆಗೆ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿದರು. ಈಗ ಅವರು ಟಿ20 ವಿಶ್ವಕಪ್ 2024ರಲ್ಲಿ ಕಮಾಲ್‌ ಮಾಡಲು ತಯಾರಾಗಿದ್ದಾರೆ. ದೀಪೇಂದ್ರ ಸಿಂಗ್‌ ಐರಿ 64 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 9 ಅರ್ಧಶತಕಗಳೊಂದಿಗೆ 1626 ರನ್ ಗಳಿಸಿದ್ದಾರೆ.

Story first published: Tuesday, May 28, 2024, 17:01 [IST]
Other articles published on May 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+