IPL 2025: ಈ ಐಪಿಎಲ್‌ನಲ್ಲಿ ಮಿಂಚುತ್ತಿರುವ ಐವರು ಯುವ ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಹಲವು ಆಟಗಾರರು ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ. ಈ ಸಾಲಿನಲ್ಲಿ ಹಲವು ಯುವ ಹಾಗೂ ಅನುಭವಿ ಆಟಗಾರರು ಸಹ ಸೇರಿದ್ದಾರೆ. ಈ ವೇಳೆ ಈ ಲೀಗ್‌ನಲ್ಲಿ ಸದ್ದು ಮಾಡುತ್ತಿರುವ ಯುವ ಆಟಗಾರರು ಬಗ್ಗೆ ಮಾಹಿತಿ ಇಲ್ಲಿದೆ. ಈ ಸ್ಟಾರ್ ಆಟಗಾರರು ತಮ್ಮ ಲಯ ಬದ್ಧ ಆಟದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ.
ಈ ಯುವ ಆಟಗಾರರ ಹೆಸರುಗಳು ಈ ಮೊದಲು ಅಷ್ಟಾಗಿ ಯಾರಿಗೂ ಪರಿಚತರಿರಲಿಲ್ಲ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನ ಇವರನ್ನು ಮುನ್ನಲೆಗೆ ಬರುವಂತೆ ಮಾಡಿದೆ. ಈ ಹಿಂದೆ ಈ ಸ್ಟಾರ್ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಲ್ಲಿ ತಮ್ಮ ಪ್ರಾಂತ್ಯಂದಿಂದ ಹೆಸರು ಮಾಡಿದ್ದವರೇ, ಆದರೆ ಈಗ ದೇಶದಾದ್ಯಂತ ಹೆಸರು ಮಾಡುತ್ತಿದ್ದಾರೆ. ಅಲ್ಲದೆ ಸ್ಟಾರ್ ಗಿರಿಯ ಅನುಭವವನ್ನು ಪಡೆಯುತ್ತಿದ್ದಾರೆ. ನಾವು ಈ ವರದಿಯಲ್ಲಿ ಈ ಐಪಿಎಲ್‌ನಲ್ಲಿ ಮಿಂಚಿದ ಐವರು ಆಟಗಾರರ ಬಗ್ಗೆ ತಿಳಿಸುತ್ತೇವೆ.

ಪ್ರಿಯಾಂಶ್ ಆರ್ಯ
ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟ್ ಮಾಡುವ ಪ್ರಿಯಾಂಶ್ ಆರ್ಯ, ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಹೆಸರು ಮಾಡಿದ ಪ್ಲೇಯರ್. ಆದರೆ ಇವರಿಗೆ ಇಂತಹ ಬಿಗ್ ಸ್ಟೇಜ್‌ನಲ್ಲಿ ಅವಕಾಶ ಸಿಕ್ಕಾಗ ಎರಡೂ ಕೈಗಳಿಂದ ಬಳಸಿಕೊಂಡರು. ಎಡಗೈ ಆಟಗಾರ ಪ್ರೀಯಾಂಶ್ ಆರ್ಯಾ ತಮ್ಮ ಅಮೋಘ ಆಟದ ಪ್ರದರ್ಶನದ ಬಲದಿಂದ ಪಂಜಾಬ್ ತಂಡಕ್ಕೆ ನೆರವಾಗಿದ್ದಾರೆ. ಇವರು ಇದೇ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಭರ್ಜರಿ ಶತಕ ಬಾರಿಸಿ ಮಿಂಚಿದರು.
ದಿಗ್ವೇಶ್ ರಾಠಿ
ಲೆಗ್ ಸ್ಪಿನ್ ಬೌಲರ್ ದಿಗ್ವೇಶ್ ರಾಠಿ ತಮ್ಮ ಶಿಸ್ತು ಬದ್ಧ ದಾಳಿಯ ಜೊತೆಗೆ ಇವರು ವಿಕೆಟ್ ಪಡೆದ ಬಳಿಕ ನಡೆಸುವ ಸಂಭ್ರಮಾಚರಣೆಯಿಂದಲೂ ಭಾರೀ ಫೇಮಸ್ ಆಗಿದ್ದಾರೆ. ಇವರು ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 7.17 ಎಕಾನಮಿಯೊಂದಿಗೆ 8 ವಿಕೆಟ್ ಕಬಳಿಸಿದ್ದಾರೆ.
ವಿಪ್ರಜ್ ನಿಗಮ್
ಉತ್ತರ ಪ್ರದೇಶದ ಯುವ ಆಲ್‌ರೌಂಡರ್ ವಿಪರಾಜ್ ನಿಗಮ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇವರು ತಾವಾಡಿದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ 17 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. ಇವರು ಲೆಗ್ ಸ್ಪಿನ್ ಬೌಲಿಂಗ್ ಸಹ ಮಾಡುತ್ತಾರೆ. ಇವರು 4 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ.
ವಿಘ್ನೇಶ್ ಪುತ್ತೂರು
ಕೇರಳ ರಾಜ್ಯದ ಯುವ ಆಟಗಾರ ವಿಘ್ನೇಶ್ ಪುತ್ತೂರು ಇನ್ನು ತಮ್ಮ ರಾಜ್ಯದ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದ್ರೂ ಇವರಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ನೀಡಿ ಭರವಸೆ ಮೂಡಿಸಿತು. ಈ ಭರವಸೆಯನ್ನು ಉಳಿಸಿಕೊಂಡಿರುವ ವಿಘ್ನೇಶ್ ಪುತ್ತೂರು ಆಡಿದ 4 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಸುಯೇಶ್ ಶರ್ಮಾ
ಸುಯೇಶ್ ಶರ್ಮಾ ಈಗಾಗಲೇ ಮೂರು ಆವೃತ್ತಿಗಳಲ್ಲಿ ಆಡಿದ್ದಾರೆ. ಆದರೆ ಈ ಬಾರಿ ಆರ್‌ಸಿಬಿ ಪರ ಆಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಸುಯೇಶ್ ಬಳಸಿಕೊಂಡು ಮಿಂಚುತ್ತಿದ್ದಾರೆ. ಇವರು 4 ಪಂದ್ಯಗಳಲ್ಲಿ ತಮ್ಮ ಲೆಗ್ ಸ್ಪಿನ್ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದ್ದಾರೆ. ಎಕನಾಮಿ 8.50 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications